ಬಂಟ್ವಾಳ : ವಾರಣಾಸಿಯ ಜಿಲ್ಲಾಧಿಕಾರಿ, ಉತ್ತರಪ್ರದೇಶದ ಪ್ರಯಾಗದಲ್ಲಿ ಇತ್ತೀಚೆಗೆ ಜರಗಿದ ಯಶಸ್ವಿ ಕುಂಭಮೇಳದ ಉಸ್ತುವಾರಿ ವಹಿಸಿದ್ದ ಬಂಟ್ವಾಳ ಮೂಲದ ಐಎಎಸ್ ಅಧಿಕಾರಿ ವಿಜಯ್ ಕಿರಣ್ ಆನಂದ್ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ಬಳಿಕ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರನ್ನು ಬೇಟಿಯಾದರು. ಕುಂಭಮೇಳದ ಯಶಸ್ಸಿನ ಬಗ್ಗೆ ಡಾ.ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರ ಉದಯಕುಮಾರ್ ದಂಪತಿ ಬಂಟ್ವಾಳ ಹಾಗೂ ಮಾಜಿ ಪುರಸಭಾ ಸದಸ್ಯ ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು.
ನೇಮೋತ್ಸವದಲ್ಲಿ ಭಾಗಿ: ಹಾಗೆಯೇ ಐಎಎಸ್ ಅಧಿಕಾರಿ ವಿಜಯ್ ಕಿರಣ್ ಆನಂದ್ ಅವರು ಒಡ್ಡೂರಿನ ದೈವಸ್ಥಾನ ಉಳಿಪ್ಪಾಡಿಗುತ್ತಿನ ಧರ್ಮದೈವ ಕೊಡಮಣಿತ್ತಾಯನಿಗೆ ನಡೆದ ನೇಮೋತ್ಸವದಲ್ಲಿ ಭಾಗವಹಿಸಿ, ಕೊಡಮಣಿತ್ತಾಯನ ಗಂಧಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉಪಸ್ಥಿತರಿದ್ದರು.


