ಬಂಟ್ವಾಳ: ಇಲ್ಲಿನ ನೆತ್ರಕೆರೆ ನವೋದಯ ಮಿತ್ರ ಕಲಾ ವೃಂದ ಮತ್ತು ನೇತ್ರಾವತಿ ಮಾತೃ ಮಂಡಳಿ ವತಿಯಿಂದ ಈಚೆಗೆ ನಡೆದ 32ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಶಿಕ್ಷಕಿಯರಾದ ಸೀತಾಲಕ್ಷ್ಮಿ ಮತ್ತು ರೇಣುಕಾ ಇವರನ್ನು ಸನ್ಮಾನಿಸಲಾಯಿತು.

25btl-Nethrakere
ಫರಂಗಿಪೇಟೆ ಶ್ರೀರಾಮ ಶಾಲೆ ಶತಮಾನೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಶೇಕ ಶುಭ ಹಾರೈಸಿದರು. ಸಂಘದ ಸಂಚಾಲಕ ದಾಮೋದರ ನೆತ್ರಕೆರೆ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ನೆತ್ರಕೆರೆ ಸನ್ಮಾನಿತರನ್ನು ಪರಿಚಯಿಸಿದರು.ಸಂಘದ ಅಧ್ಯಕ್ಷ ಸುರೇಶ ಭಂಡಾರಿ ಅರ್ಬಿ, ಗೌರವಾಧ್ಯಕ್ಷ ಸುಬ್ರಹ್ಮಣ್ಯ ರಾವ್, ಮಾತೃ ಮಂಡಳಿ ಸಂಚಾಲಕಿ ಲಲಿತಾ ಸುಂದರ್, ಮುಖ್ಯಶಿಕ್ಷಕಿ ಗುಣರತ್ನ, ಪ್ರಮುಖರಾದ ವಿಶ್ವನಾಥ ಕುಲಾಲ್, ಸಂತೋಷ್ ಎನ್. ಮತ್ತಿತರರು ಇದ್ದರು.   ಬೆಳಿಗ್ಗೆ ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ವಿವಿಧ ನಾಟಕ ಪ್ರದರ್ಶನಗೊಂಡಿತು.

By suddi9

Leave a Reply

Your email address will not be published. Required fields are marked *