ಅರ್ಕುಳದಲ್ಲಿ ರಜಾಶಿಬಿರ ವಿಕಾಸ 2019 ವಿಕಾಸ ಶಿಬಿರ ವ್ಯಕ್ತಿತ್ವಬೆಳವಣಿಗೆಗೆ ಪೂರಕ
ಅರ್ಕುಳ : ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಪೂರಕವಾದತಮ್ಮಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಕ್ಕಳು ತಮ್ಮರಜಾ ದಿನಗಳನ್ನು ಸದುಪಯೋಗಿಸಿಕೊಳ್ಳಬೇಕು.ರಜಾಕಾಲದ ಶಿಬಿರಗಳು ಮಕ್ಕಳ ಮಾನಸಿಕ ವಿಕಸನವನ್ನು ಮಾಡುವುದರೊಂದಿಗೆಅಗತ್ಯಸಾಮಾಜಿಕಜಾಗೃತಿ ಹಾಗೂ ಜೀವನ ಶಿಕ್ಷಣವನ್ನು ನೀಡುತ್ತದೆಎಂದು ಅರ್ಕುಳ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಡಾ.ಅರ್ಕುಳ ಬೀಡುಜಯಕುಮಾರ ಶೆಟ್ಟಿ ತಿಳಿಸಿದರು.
.ಡಾ.ಜಯಕುಮಾರ ಶೆಟ್ಟಿಅವರುಇತ್ತೀಚೆಗೆ ಅರ್ಕುಳ ಚಾರಿಟೇಬಲ್ ಟ್ರಸ್ಟಿನ ಆಶ್ರಯದಲ್ಲಿ ಸ್ಥಳೀಯ ದ್ವಾರ ಸಮಿತಿ ಹಾಗೂ ಶ್ರೀ ದೇವಿ ಬಯಲಾಟ ಸಮಿತಿಯಸಹಯೋಗದೊಂದಿಗೆಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿದೈವಸ್ಥಾನದಆವರಣದಲ್ಲಿ ಆಯೋಜಿಸಿದ ರಜಾಕಾಲದ ಶಿಬಿರ ‘ವಿಕಾಸ-2019’ ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಜ್ಯತರಬೇತಿದಾರ ಮಂಜು ವಿಟ್ಲಅವರು ಮಾತನಾಡುತ್ತಾರಜಾಕಾಲದ ಶಿಬಿರಗಳು ಮಕ್ಕಳಲ್ಲಿ ಉತ್ತಮ ಆಸಕ್ತಿಗಳನ್ನು ಬೆಳೆಸುವುದರೊಂದಿಗೆ ಬುದ್ಧಿಯ ವಿಕಾಸಕ್ಕೆ ಪೂರಕವಾಗಿದೆ.ಮಕ್ಕಳ ಬೌದ್ಧಿಕ ವಿಕಸನಕ್ಕೆ ಪೂರಕವಾದ ಪರಿಸರವನ್ನುಒದಗಿಸುವ ಬೇಸಿಗೆ ಶಿಬಿರಗಳು ಅತೀಅಗತ್ಯಎಂದುಅವರುಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಅರ್ಕುಳ ಅಡ್ಯಾರ್‍ಗ್ರಾಮ ಪಂಚಾಯತ್‍ಉಪಾದ್ಯಕ್ಷೆ ಶ್ರೀಮತಿ ಆಶಾ ಪ್ರಕಾಶ್, ಸದಸ್ಯರಾದ ಶ್ರೀಮತಿ ಪವಿತ್ರಾ ಹಾಗೂ ಶ್ರೀ ಸಂತೋಷ್‍ತುಪ್ಪೆಕಲ್ಲು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಸ್ಥಳೀಯ 69 ಮಕ್ಕಳು ಭಾಗವಹಿಸಿದ್ದರು.ಈ ಶಿಬಿರದಲ್ಲಿ ಮಕ್ಕಳಿಗೆ ರಂಗ ಕಲೆ, ಭಾಷಣ ಕಲೆ, ಗುಂಪು ಚಟುವಟಿಕೆಗಳು, ಜೀವನ ಮೌಲ್ಯಗಳುಹಾಗೂ ಪೌರತ್ವದಬಗ್ಗೆ ತರಬೇತಿ ನೀಡಲಾಯಿತು.ವಿಕಾಸ ಶಿಬಿರದಲ್ಲಿಬಿಎಸ್‍ಎನ್‍ಎಲ್ ಮಾರುಕಟ್ಟೆಅಧಿಕಾರಿಕಂಪ ಸದಾನಂದ ಆಳ್ವ,ಮಂಟಮೆ ದಿನಕರಕರ್ಕೇರಾ, ಸ್ಥಳೀಯ ಅಂಗನವಾಡಿಕಾರ್ಯಕರ್ತೆಶ್ರೀಮತಿ ಪದ್ಮಾವತಿ, ಶ್ರೀಮತಿ ಆಶಾ, ಶ್ರೀಮತಿ ಶೋಭಾಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.