ಗುರುಪುರ : ಮೂರು ದಿನಗಳ ಹಿಂದೆ ಮನೆ ಬಳಿ ಮಾವಿನಕಾಯಿ ಕೊಯ್ಯುತ್ತಿದ್ದಾಗ ಮರದಿಂದ ಬಿದ್ದು ಬಲವಾದ ಗಾಯವಾಗಿದ್ದ ಗುರುಪುರ ಕಲ್ಲಕಲಂಬಿಯ ದಯಾನಂದ ಪೂಜಾರಿ(60) ಕಳೆದ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
ಅತ್ಯಂತ ಸರಳ ಸ್ವಭಾದ ಕೂಲಿ ಕಾರ್ಮಿಕರಾಗಿದ್ದ ಇವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಗುರುಪುರ ರುದ್ರಭೂಮಿಯಲ್ಲಿ ಎ. 21ರಂದು ಅಂತ್ಯಕ್ರಿಯೆ ನಡೆಯಿತು.
