ಬಂಟ್ವಾಳ: ಮಕ್ಕಳಿಗೆ ಬೇಸಿಗೆ ರಜೆಯನ್ನು ಉಪಯುಕ್ತವಾಗಿ ಕಳೆಯಲು ಜೇಸಿಐ ಜೋಡುಮಾರ್ಗ ನೇತ್ರಾವತಿ ಒಂದು ವಾರದ ಬೇಸಿಗೆ ಶಿಬಿರ “ವಿಕಸನ” ವನ್ನು ಆಯೋಜಿಸಿದೆ. ಈ ಕಾರ್ಯಕ್ರವು ಎ.22 ರಂದು ಪ್ರಾರಂಭಗೊಂಡು ಎ.27 ರವರೆಗೆ ಬಿಸಿರೋಡಿನ ಅಜ್ಜಿಬೆಟ್ಟುವಿನ ಬಸವ ಮಂಟಪದಲ್ಲಿ ಜರಗಲಿದೆ. ಮಕ್ಕಳಿಗಾಗಿ ವ್ಯಕ್ತಿತ್ವ ವಿಕಸನ, ಚಿತ್ರಕಲೆ, ಕ್ರಾಫ್ಟ್, ಮುಖವಾಡ ರಚನೆ, ಕಸದಿಂದ ರಸ, ವ್ಯಾಯಾಮ (ಝೂಂಬಾ), ಯೋಗಾಸನ ಪ್ರಾಣಾಯಾಮ, ಪರಿಸರ ಸ್ವಚ್ಛತಾ ಜಾಗೃತಿ, ನೃತ್ಯ ಗಾಯನ ಪ್ರದರ್ಶನ ಮುಂತಾದ ವಿಷಯಗಳ ಬಗ್ಗೆ ಈ ಶಿಬಿರದಲ್ಲಿ ತರಬೇತಿ ನೀಡಲಿದ್ದೇವೆ. ಶಿಬಿರವು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9:30 ಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು ಶಿಬಿರದ ಶುಲ್ಕ ರೂ.250/- ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣೆಗೆ ದೂರವಾಣಿ ಸಂಖ್ಯೆ 9611105413 ಯನ್ನು ಸಂಪರ್ಕಿಸಬಹುದಾಗಿದೆ.
