ಬಂಟ್ವಾಳ:ಸಮಾಜದಲ್ಲಿ ವಿರಳವಾಗಿರುವ ಶ್ರೀ ಶರಭೇಶ್ವರ ದೇವಾಲಯದಲ್ಲಿ ರುದ್ರ ಪಾರಾಯಣ ನಡೆಸುವ ಮೂಲಕ ದೇವಳ ಅಭಿವೃದ್ಧಿಗೆ ಆರ್ಥಿ ಸಂಪತ್ತು ಕ್ರೋಢೀಕರಣ ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ಶಂಕರನಾರಾಯಣ ದ್ವಾರಕಾನಾಥ ಗುರೂಜಿ ಹೇಳಿದ್ದಾರೆ.
ಬಂಟ್ವಾಳ ತಾ.ನ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ದೇವರ ಅನುಜ್ಞಾ ಕಲಶ ಮತ್ತು ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಪ್ರತೀ ದೇವಾಲಯ ಅಭಿವೃದ್ಧಿ ವೇಳೆ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಂಡರೂ ಬಳಿಕ ಸ್ವತಃ ಪಾಲ್ಗೊಳ್ಳುವಂತೆ ದೇವರ ಪ್ರೇರಣೆ ಸಿಗುತ್ತದೆ ಎಂದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಶುಭ ಹಾರೈಸಿದರು. ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪದ್ಮಶೇಖರ ಜೈನ್, ಮುಂಬೈ ಉದ್ಯಮಿ ಕುಸುಮಾಧರ ಡಿ.ಶೆಟ್ಟಿ ಚೆಲ್ಲಡ್ಕ, ವಾಸ್ತುಶಿಲ್ಪಿ ಮುನಿಯಂಗಳ ಮಹೇಶ ಭಟ್, ಪ್ರಮುಖರಾದ ಡಾ.ಸತ್ಯಶಂಕರ ಶೆಟ್ಟಿ, ಡಾ.ಶಿವಪ್ರಸಾದ್ ಶೆಟ್ಟಿ, ಡಾ.ರಾಜಾರಾಮ ಭಟ್ ಉಪ್ಪಿನಂಗಡಿ, ಡಾ.ಮುರಳಿ ಮೋಹನ್ ಚೂಂತಾರು, ಡಾ.ಭರತ್ ಶೆಟ್ಟಿ, ಕರ್ನೂರು ಮೋಹನ ರೈ, ಚಂದ್ರಹಾಸ ಡಿ.ಶೆಟ್ಟಿ ಬಿ.ಸಿ.ರೋಡು, ಉಷಲತಾ ಸರಪಾಡಿ ಮತ್ತಿತರರು ಇದ್ದರು. ವರ್ಕಾಡಿ ದಿನೇಶ ಕೃಷ್ಣ ತಂತ್ರಿ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಿದರು.