ವಿಟ್ಲ:ಆರ್ ಕೆ ಆರ್ಟ್ ವಿಟ್ಲ ಮತ್ತು ಜೇಸಿಐ ವಿಟ್ಲ ಘಟಕ ಇದರ ವತಿಯಿಂದ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆಯುವ `ಚಿನ್ನರ ಉತ್ಸವ ಬೇಸಿಗೆ ಶಿಬಿರವನ್ನು ಹಿರಿಯ ರಂಗ ಕರ್ಮಿ ಮೂರ್ತಿ ದೇರಾಜೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜೇಸಿ ವಲಯ 15 ರ ಉಪಾಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ, ಶುಭಾಂಗಿ ವಿಟ್ಲ ಮತ್ತು ಜಯರಾಮ ಬಳ್ಳಾಲ್ ವಿಟ್ಲ ಅರಮನೆ ಇವರು ಭಾಗವಹಿಸಿದ್ದರು. ಆರ್ ಕೆ ಆಟ್ರ್ಸ್‍ನ ರಾಜೇಶ್ ಪ್ರಸ್ತಾವಿಸಿದರು. ಕೃಷ್ಣಯ್ಯ ಕೆ ವಿಟ್ಲ ಅರಮನೆ ಸ್ವಾಗತಿಸಿದರು. ಜೆಸಿಐ ಅಧ್ಯಕ್ಷ ಬಾಲಕೃಷ್ಣ ವಿಟ್ಲ ವಂದಿಸಿದರು. ಅರ್ಚನಾ ನಿರೂಪಿಸಿದರು.

