ಸಲ್ಮಾನ್ ಜೊತೆ ನಟಿಸಬೇಕೆಂಬ ಆಸೆಯಿದೆ: ಜೂಹಿ ಚಾವ್ಲಾ
ಸುದ್ದಿ9ಮುಂಬೈ: ತೊಂಬತ್ತರ ದಶಕದ ಗುಳಿಕೆನ್ನೆಯ ನಟಿ ಜೂಹಿ ಚಾವ್ಲಾಗೆ ಬಾಲಿವುಡ್ನ ಹ್ಯಾಂಡ್ಸಮ್ ಹಂಕ್ ಸಲ್ಮಾನ್ ಖಾನ್ ಜೊತೆ ನಟಿಸಬೇಕೆಂಬ ಆಸೆಯಿದೆಯಂತೆ. ಹೀಗೆಂದು ಆಕೆಯೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾಳೆ.
ಬಾಲಿವುಡ್ನ ಖಾನ್ತ್ರಯರಾದ ಶಾರೂಖ್, ಸಲ್ಮಾನ್ ಮತ್ತು ಆಮೀರ್ ಪೈಕಿ ಶಾರೂಖ್ ಮತ್ತು ಆಮೀರ್ ಜೊತೆ ಜೂಹಿ ನಟಿಸಿದ್ದಾಳೆ. ಆಮೀರ್ ಖಾನ್ಗೆ ಹೀರೋ ಇಮೇಜ್ ತಂದುಕೊಟ್ಟ ‘ಖಯಾಮತ್ ಸೆ ಖಯಾಮತ್’ ಚಿತ್ರದಲ್ಲಿ ಆತನಿಗೆ ನಾಯಕಿಯಾಗಿ ಜೂಹಿ ನಟಿಸಿದ್ದಳು. ಮುಂದೆ ಹಲವು ಚಿತ್ರಗಳಲ್ಲಿ ಈ ಜೋಡಿ ಜೊತೆಯಾಗಿ ನಟಿಸಿತ್ತು. ಶಾರೂಖ್ ಪ್ರವೇಶದ ನಂತರ ‘ಡರ್’ ಸಿನಿಮಾದಲ್ಲಿ ಮೊಲದ ಬಾರಿ ಜೂಹಿ ಶಾರೂಖ್ ಜೊತೆ ನಟಿಸಿದ್ದಳು. ಈ ಚಿತ್ರದಲ್ಲಿ ಶಾರೂಖ್ ಖಳನಾಯಕನ ಪಾತ್ರ ನಿಭಾಯಿಸಿದ್ದ. ನಂತರ ಈ ಜೋಡಿ ತಮ್ಮದೇ ಚಿತ್ರ ನಿಮರ್ಾಣ ಸಂಸ್ಥೆಯನ್ನೂ ನಿಮರ್ಿಸಿತ್ತು. ಈಗಲೂ ಜೂಹಿ ಮತ್ತು ಶಾರೂಖ್ ಉತ್ತಮ ಗೆಳೆಯರಾಗಿದ್ದಾರೆ. ಆದರೆ ಸಲ್ಮಾನ್ ಜೊತೆ ಜೂಹಿ ಇದುವರೆಗೂ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಅದಕ್ಕೆ ಯಾವುದೇ ವೈಯಕ್ತಿಕ ಕಾರಣವಿಲ್ಲ. ಆದರೆ ಇವರಿಬ್ಬರನ್ನು ಹಾಕಿ ಸಿನಿಮಾ ಮಾಡುವ ಗೋಜಿಗೆ ಯಾವ ನಿಮರ್ಾಪಕರೂ ಹೋಗಿಲ್ಲ. ಸದ್ಯ ‘ಗುಲಾಬ್ ಗ್ಯಾಂಗ್’ನಲ್ಲಿ ಮಾಧುರಿ ದೀಕ್ಷಿತ್ ಜೊತೆ ನಟಿಸುತ್ತಿದ್ದೇನೆ ಹೀಗೆಯೇ ಮುಂದೊಂದು ದಿನ ಸಲ್ಮಾನ್ ಜೊತೆ ಕೂಡಾ ನಟಿಸುವ ಅವಕಾಶ ಸಿಗಬಹುದು ಎಂದು ಜೂಹಿ ಭರವಸೆಯಿಂದ ಹೇಳುತ್ತಾಳೆ.

