ಸುದ್ದಿ9 ಬಂಟ್ವಾಳ: ಮಹಿಳೆಯರು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಸಂಘಟನೆಗಳು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದು ಸಹ್ಯಾದ್ರಿ ಆಡಳಿತ ಮಹಾವಿದ್ಯಾಲಯದ ನಿರ್ದೇಶಕ ಡಾ. ಅನಂತಪದ್ಮನಾಭ ಆಚಾರ್ಯ ಹೇಳಿದರು.
ವಿಶ್ವಕರ್ಮ ಸಮಾಜ ಸೇವಾ ಸಂಘ ಜೋಡುಮಾರ್ಗ ಇದರ ಆಶ್ರಯದಲ್ಲಿ ನಡೆದ 21ನೇ ವರ್ಷದ ಸಾಮೂಹಿಕ ವಿಶ್ವಕರ್ಮ ಪೂಜಾಮಹೋತ್ಸವದ ಪ್ರಯುಕ್ತ ಗಾನದಪಡ್ಪುವಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಧಾರ್ಮಿಕ ಸಭೆ ಹಾಗೂ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಮಹಿಳೆಯರು ಆರೋಗ್ಯ ಹಾಗೂ ಸಬಲೀಕರಣದ ಬಗ್ಗೆ ಕಾಳಜಿ ವಹಿಸುವಂತೆ ಅವರು ಮಾರ್ಗದರ್ಶನ ಮಾಡಿದರು.
ಸಂಘದ ಅಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರ ಸಹಕಾರ ಇದ್ದಾಗ ಮಾತ್ರ ಸಂಘ ಯಶಸ್ವಿಯಾಗಿ ಬೆಳೆಯಲು ಸಾಧ್ಯ , ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುವಷ್ಟೇ ಮಹತ್ವವನ್ನು ಸಂಘ ನಡೆಸುವ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೂ ನೀಡಬೇಕು ಎಂದರು.
ಚಿತ್ರಕಲಾವಿದ ಜನಾರ್ದನ ಆಚಾರ್ಯ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ವಿಶ್ವಜ್ಯೋತಿ ಮಹಿಳಾಮಂಡಳಿ ಅಧ್ಯಕ್ಷೆ ಶೋಭಾ ವಿಶ್ವನಾಥ ಆಚಾರ್ಯ ಉಪಸ್ಥಿತರಿದ್ದರು. ಎಸ್.ಎಂ.ಜನಾರ್ದನ ಆಚಾರ್ಯ ಸ್ವಾಗತಿಸಿದರು. ಕಾಯದಶರ್ಿ ಪ್ರಕಾಶ್ ಆಚಾರ್ಯ ವರದಿ ವಾಚಿಸಿದರು. ಗೌರವಾಧ್ಯಕ್ಷ ಬಿ.ಜಯಪ್ರಕಾಶ್ ಆಚಾರ್ಯ ವಂದಿಸಿದರು. ಮೌನೇಶ್ ವಿಶ್ವಕರ್ಮ ನಿರೂಪಿಸಿದರು.

 

By Suddi9

Leave a Reply

Your email address will not be published. Required fields are marked *