ಬಂಟ್ವಾಳ : ಶ್ರೀ ರಾಮ ಭಜನಾ ಸೇವಾ ಟ್ರಸ್ಟ್ ರಾಮನಗರ ತುಂಬೆ ಯಲ್ಲಿ ಶ್ರೀ ರಾಮನವಮಿ ಪ್ರಯುಕ್ತ ಎ.8 ಸೋಮವಾರದಿಂದ ಎ.14ರ ವರೆಗೆ ಪ್ರತಿದಿನ ಬೆಳಿಗ್ಗೆ5 ಕ್ಕೆ ನಗರ ಭಜನೆ, ಎ.14 ನೇ ಆದಿತ್ಯವಾರ ಶ್ರೀ ರಾಮನವಮಿ ಉತ್ಸವ ಪ್ರಯುಕ್ತ ಅದೇ ದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಏಕಾಹ ಭಜನೆ ಪ್ರಾರಂಭಗೊಂಡು ಎ.15 ಸೋಮವಾರ ಬೆಳಿಗ್ಗೆ ಸೂರ್ಯೋದಯಕ್ಕೆ ಮಂಗಳೋತ್ಸವ , ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಆದಿತ್ಯವಾರ ಬೆಳಿಗ್ಗೆ 8 ಕ್ಕೆ ಗಣಹೋಮ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1-00ಕ್ಕೆ ಅನ್ನಸಂರ್ತಪಣೆ , ರಾತ್ರಿ 12-00ಕ್ಕೆ ಮಹಾಪೂಜೆ , ಪ್ರಸಾದ ವಿತರಣೆ ಜರಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ನಾಗೇಶ್ ಶೆಟ್ಟಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
