ಬಂಟ್ವಾಳ: ಮೋದಿ ನೇತೃತ್ವದ ಬಿಜೆಪಿ ಸರಕಾರ ಪಂಚಿಂಗ್ ಡಯಲಾಗ್‍ಗಳ ಘೋಷಣೆಯ ಸರಕಾರ ಎಂದು ಕೆಪಿಸಿಸಿ ಕಾರ್ಯದರ್ಶಿ ಅಶ್ವಿನ್ ಕುಮಾರ್ ರೈ ಟೀಕಿಸಿದ್ದಾರೆ.
ಅವರು ಸೋಮವಾರ ಬಿ.ಸಿ.ರೋಡಿನ ಹೊಟೇಲ್ ಶ್ರೀನಿವಾಸ್‍ನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿ ಕಾಂಗ್ರೆಸ್ ಹೈಕಮಾಂಡ್ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಒಳ್ಳೆಯ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದೆ. ತರುಣ, ಬಾಲ್ಯದಿಂದಲೇ ನಾಯಕತ್ವ ಗುಣ ಹೊಂದಿರುವ ಮಿಥುನ್ ರೈಯವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆಗೊಳಿಸಲಾಗಿದೆ. ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಯುವಕರಿಗೆ ಮಣೆ ಹಾಕುವುದು ಕಡಿಮೆ. ಆದರೆ ಈ ಸಲ ಯುವಕರಿಗೆ ಅವಕಾಶ ನೀಡಿ ಬದಲಾವಣೆಯನ್ನು ತರಲಾಗಿದೆ ಎಂದರು. ನಮ್ಮ ಜಿಲ್ಲೆಯಲ್ಲಿ ಹುಟ್ಟಿದ ವಿಜಯ ಬ್ಯಾಂಕ್‍ನ್ನು ಬರೋಡ ಬ್ಯಾಂಕ್‍ಗೆ ವಿಲೀನ ಮಾಡುವುದು ಸರಿಯಲ್ಲ.
ಆದರೆ ಸ್ಥಳೀಯ ಪ್ರದೇಶದಲ್ಲಿರುವ ಬ್ಯಾಂಕ್‍ಗೆ ವಿಲೀನ ಮಾಡಿದರೆ ತೊಂದರೆ ಇಲ್ಲ. ಆದರೆ ನಷ್ಟದಲ್ಲಿರುವ ಬ್ಯಾಂಕಿಗೆ ವಿಜಯಬ್ಯಾಂಕ್ ವಿಲೀನ ಮಾಡಿರುವುದು ತುಂಬಾ ಬೇಸರ ತಂದಿದೆ. ಎಂದರು.ಮಂಗಳೂರಿನ ಪಂಪ್‍ವೆಲ್ ಪ್ಲೈಓವರ್ ಸರ್ಕಲ್, ಬಿ.ಸಿ.ರೋಡು-ಅಡ್ಡಹೊಳೆ ರಸ್ತೆ ಕೆಲಸ ಅರ್ಧದಲ್ಲೇ ನಿಂತು ಹೋಗಿದೆ. ಅದು ಇಲ್ಲಿನ ಸಂಸದ ನಳಿನ್ ಕುಮಾರ್ ಕಟೀಲ್ ರವರ ವೈಫಲ್ಯ. ಯುಪಿಎ ಸರಕಾರದ ಅವಧಿಯಲಿ ವಿಶ್ವದಲ್ಲೇ ಆರ್ಥಿಕವಾಗಿ ಕುಸಿತ ಕಂಡು ಬಂದಿದ್ದರೂ ಭಾರತದಲ್ಲಿ ಯಾವುದೇ ಆರ್ಥಿಕ ಹೊಡೆತ ಬಿದ್ದಿರಲಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬೂಡ ಅಧ್ಯಕ್ಷ ಸದಾಶಿವ ಬಂಗೇರ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನೋಣಯ ಪೂಜಾರಿ, ಜಯರಾಮ್ ಸಾಮನಿ, ಪುರಸಭಾ ಸದಸ್ಯ ಮಹಮ್ಮದ್ ಶರೀಫ್, ಮಾಜಿ ಗ್ರಾ.ಪಂ. ಅಧ್ಯಕ್ಷ ಉಮ್ಮರ್, ಯುವಕಾಂಗ್ರೆಸ್ ಮಾಜಿ ಅಧ್ಯಕ್ಷ ಸ್ಟೀವನ್ ಡಿಸೋಜ, ಗ್ರಾ.ಪಂ. ಮಾಜಿ ಸದಸ್ಯ ಗೋಪಾಲಕೃಷ್ಣ ಸುವರ್ಣ, ಇಕ್ಬಾಲ್ ಫರಂಗಿಪೇಟೆ, ಗ್ರಾ.ಪಂ. ಮಾಜಿ ಸದಸ್ಯ ಹಂಝ, ಕರೀಂ ಬೊಳ್ಳಾಯಿ, ಬಾಲಚಂದ್ರ ಶೆಟ್ಟಿ, ಶ್ರೀಧರ ಅಮೀನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
