ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಈಗ ವಾರ್ಷಿಕ ಜಾತ್ರೆ ನಡೆಯುತ್ತಿದ್ದು, ಜಾತ್ರೆಯ ಮೂರನೇ ದಿನವಾದ ಮಾ. 17ರಂದು ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದು, ಇದೊಂದು ದಾಖಲೆ ಎಂದು ಹೇಳಲಾಗುತ್ತಿದೆ.17-03

ಸಾಮಾನ್ಯವಾಗಿ ವಾರ್ಷಿಕ ಜಾತ್ರೆಯ ಐದು ದಂಡಮಾಲೆ, ಐದು ಚೆಂಡು, ಜಾತ್ರೆಯ ಕೊನೆ ದಿನಗಳು ಹಾಗೂ ರಥೋತ್ಸವ, ಅವಭೃತ ಸ್ನಾನದಂದು ಅಧಿಕ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವುದು ವಾಡಿಕೆ.17-01

ಈ ಬಾರಿ ಬ್ರಹ್ಮಕಲಶೋತ್ಸವ ನಡೆದ ಹಿನ್ನೆಲೆಯಲ್ಲಿ ಮತ್ತು ಇಂದು ಭಾನುವಾರವಾದ ಕಾರಣ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಿರ್ಮಿಸಲಾದ ಪಾರ್ಕಿಂಗ್ ಪ್ರದೇಶದಲ್ಲೇ ನೂರಾರು ವಾಹನಗಳು ನಿಂತಿದ್ದರೆ, ಭಕ್ತರು ಸರದಿಯಲ್ಲಿ ದೇವರ ದರ್ಶನ ಪಡೆದರು. ಇದೇ ವೇಳೆ ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

By suddi9

Leave a Reply

Your email address will not be published. Required fields are marked *