ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವದ 5ನೇ ದಿನದಂದು ಮಂಗಳವಾರ ಬೆಳಗ್ಗೆ ತುಲಾಭಾರ ಸೇವೆಯು ನಡೆಯಿತು. ಬೆಳಗ್ಗಿನಿಂದಲೇ ಹರಕೆ ಹೊತ್ತ ಭಕ್ತಾಧಿಗಳು ದೇವಿ ಸನ್ನಿಧಿಯಲ್ಲಿ ನಂಬರ್ ಪ್ರಕಾರ ಸರಧಿ ಸಾಲಿನಲ್ಲಿ ತಮ್ಮ ತಮ್ಮ ಹರಕೆಯ ರೂಪದಲ್ಲಿ ಬೆಲ್ಲ, ಅಕ್ಕಿ, ಸೀಯಾಳ,ತೆಂಗಿನಕಾಯಿ,ಹೂವು,ಹಿಂಗಾರದಲ್ಲಿ ತುಲಾಭಾರ ಸೇವೆ ಮಾಡಿದರು .

19vp tulabara 11

19vp tulabara 5

19vp tulabara 13

ವರ್ಷಂಪ್ರತಿ ತುಲಾಭಾರ ಸೇವೆಯು ಆರಡದಂದು ನಡೆಯುತ್ತಿತ್ತು ಈ ವರ್ಷದಿಂದ ಭಕ್ತರ ಅನುಕೂಲಕ್ಕಾಗಿ ಬದಲಾವಣೆ ಮಾಡಲಾದ ದಿನಾಂಕ ಮಾ.19, ಮಾ.24 ಭಾನುವಾರ, ಮಾ.29 ಶುಕ್ರವಾರ, ಎ.3ಬುಧವಾರ, ಎ.12ಶುಕ್ರವಾರ ದಂದು ತುಲಾಭಾರ ಸೇವೆ ನಡೆಯಲಿದೆ.19vp tulabara 9
ಚಿಕ್ಕ ಮಗುವಿನಿಂದ ಸುಮಾರು 90 ವರ್ಷದ ವರೆಗಿನ ತಮ್ಮ ಕಷ್ಟಗಳನ್ನು ದೇವಿಯಲ್ಲಿ ಹರಕೆ ಹೊತ್ತವರು ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಪುನೀತರಾದರು. ದೇವಳದ ಅರ್ಚಕರು ದೇವಿಗೆ ಹಾಕುವ ಚಿನ್ನಾಭರಣಗಳನ್ನು ಹರಕೆ ಹೊತ್ತ ಭಕ್ತಾಧಿಗಳ ಕೊರಳಿಗೆ ಹಾಕಿ ತೂಕದಲ್ಲಿ ಕುಳ್ಳಿರಿಸಿ ತೂಕ ಮಾಡಿದರು. ಮಂಗಳವಾರ 20 ಜನ ಹರಕೆ ಹೊತ್ತ ಭಕ್ತಾಧಿಗಳು ತನ್ನ ಇಚ್ಚಾನುಸಾರ ಸೇವೆ ಸಲ್ಲಿಸಿದರು. ದೇವಳದ ಅರ್ಚಕರು ಹಾಗೂ ಸಿಬಂಧಿಗಳು ತುಲಭಾರ ಸೇವೆಯಲ್ಲಿ ಸಹಕರಿಸಿದರು.

ತುಲಾಭಾರ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

By suddi9

Leave a Reply

Your email address will not be published. Required fields are marked *