ಪೊಳಲಿ:ಪ್ರಾತಃಕಾಲ 5.00ರಿಂದ ಪುಣ್ಯಾಹ, ಗಣಹೋಮ, ಚಂಡಿಕಾ ಹೋಮ, ಅದ್ಭುತಶಾಂತಿ, ಸ್ವಶಾಂತಿ, ಚೋರ ಶಾಂತಿ, ತತ್ವ ಕಲಶ ಪೂಜೆ, ತತ್ವಹೋಮ, ಹೋಮಕಲಶಾಭಿಷೇಕಗಳು, ಕುಂಭೇಶ ಕರ್ಕರಿ ಪೂಜೆ, ಮಹಾಪೂಜೆ.

ಸಾಯಂಕಾಲ 5.00ರಿಂದ ಶ್ರೀ ರಾಜರಾಜೇಶ್ವರಿ ದೇವರಿಗೆ ಪಂಚಶತ ಕಲಶ ಸಹಿತ ಬ್ರಹ್ಮಕಲಶಾಧಿವಾಸ, ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಪಂಚಶತ ಕಲಶ ಸಹಿತ ಬ್ರಹ್ಮಕಲಶಾಧಿವಾಸ, ಶ್ರೀ ಸುಬ್ರಹ್ಮಣ್ಯ, ಶ್ರೀ ಗಣಪತಿ, ಶ್ರೀ ಭದ್ರಕಾಳಿ,ಶ್ರೀ ಶಾಸ್ತ ದೆವರಿಗೆ ಅಷ್ಟೋತ್ತರಶತ ಕಲಶ ಸಹಿತ ಬ್ರಹ್ಮಕಲಶಾಧಿವಾಸ,ಆದಿವಾಸ ಹೋಮ,ಮಹಾಪೂಜೆ. ನೆರವೇರಿದ ಬಳಿಕ ಶ್ರೀ ಉಳ್ಳಾಕ್ಲು ಮಗ್ರಾಂತಾಯಿ ದೈವಗಳ ಬ್ರಹ್ಮಕಲಶ ನೇರವೇರಿತು.
ಈ ಸಂದರ್ಭದಲ್ಲಿ ಅರ್ಕುಳ ಬೀಡು, ವಜ್ರನಾಭ ಶೆಟ್ಟಿ, ದೇವಳದ ಆಡಳಿತ ಮೋಕ್ತೇಸರರು,ದೇವಳದ ಕಾರ್ಯನಿರ್ವಾಣಾಧಿಕಾರಿ ತಂತ್ರಿ ವರ್ಗದವರು, ಆಡಳಿತ ವರ್ಗದವರು ಭಕ್ತಾಧಿಗಳು ಉಪಸ್ಥಿತರಿದ್ದರು
