ಊರ ದೇವರಿಗೆ ಬ್ರಹ್ಮಕಲಶೋತ್ಸವ
ಎಲ್ಲೆಲ್ಲೂ ಹರ್ಷೋತ್ಸವ !
ಊರ ತುಂಬೆಲ್ಲಾ ತಳಿರು ತೋರಣಗಳ ಉತ್ಸವ
ಆಹಾ!….ಅದೆಂತಹ ಮನಮೋಹಕ ವೈಭವ!!

ದೇಗು¯ದ ತುಂಬೆಲ್ಲಾ ಭಕ್ತರು
ಸಾವಿರ ಸೀಮೆಯ ಲಕ್ಷ ಲಕ್ಷ ಜನರು!
ನವ್ಯನವೀನ ದೇವಿಯ ಮಂದಿರ ಕಂಡು ಪುನೀತರಾದರು
ಕಣ್ಣು ತುಂಬ ದೇವಿಯ ದರ್ಶನ ಪಡೆದು ಧನ್ಯರಾದರು!!
ಹೋಮ ಹವನ ಮಂತ್ರ ಘೋಷಗಳ ಧಾರ್ಮಿಕ ಕಾರ್ಯ
ಭವ್ಯ ದಿವ್ಯ ತಲ್ಲೀನಗೊಳಿಸುತ್ತಿರುವ ಪೂಜಾ ಕೈಂಕರ್ಯ!
ಸಾಂಸ್ಕ್ರತಿಕ ವೇದಿಕೆಗಳಿಂದ ಹೆಚ್ಚುತ್ತಿರುವ ಆತ್ಮಸ್ಥೈರ್ಯ
ಸಾಕ್ಷಿಯಾಯಿತು ಶತಮಾನದ ಅದ್ಭುತ ಮಹೋನ್ನತ ಕಾರ್ಯ!!
ಜನ ಸಾಗರವೇ ಹರಿದು ಬಮತು ದೇವಿ ಸನ್ನಿದಿಗೆ
ಎಲ್ಲವೂ ಅಚ್ಚುಕಟ್ಟು, ಮೆಚ್ಚುವಂತಹದು ಸ್ವಯಂಸೇವಕರ ನಡಿಗೆ!
ಹಸಿರು ಕಾಣಿಕೆ ತುಂಬಿ ತುಳುಕುತಿದೆ ಉಗ್ರಾಣ ಮಳಿಗೆ
ದೇಗುಲದ ಬ್ರಹ್ಮಕಲಶೋತ್ಸವ ಮರೆಯಲಾಗದ ಆ ಘಳಿಗೆ!!
ರಮೇಶ್ ಅದ್ಯಪಾಡಿ
