ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಲವು ವಿಧಿವಿಧಾನಗಳು ಪೂರ್ಣಗೊಂಡಿದ್ದು, ಮಾ.11ರ ಪ್ರಾತಃಕಾಲದಿಂದ ಪುಣ್ಯಾಹ, ಗಣಹೋಮ, ರುದ್ರಯಾಗ, ಶಾಂತಿಪ್ರಾಯಶ್ಚಿತ ಹೋಮಗಳು, ಪ್ರೋಕ್ತ ಹೋಮಗಳುಗಳು ನಡೆದವು
. ನಂತರ ಮಹಾಬಲಿಪೀಠ ಪ್ರತಿಷ್ಠೆ ನಡೆಸಿ ಹೋಮಕಲಶಾಭಿಷೇಕ, ದೈವಗಳಿಗೆ ಕಲಶಾಭಿಷೇಕ, ಅಂಕುರ ಪೂಜೆ, ಮಹಾ ಪೂಜೆಪೂರ್ಣಗೊಂಡಿತು. ಸಾಯಂಕಾಲ `ಶ್ರೀ ಚಕ್ರ ಪೂಜೆ’, ಕ್ಷೇತ್ರಪಾಲ ಪ್ರತಿಷ್ಠೆ, ಮಂಟಪ ಸಂಸ್ಕಾರ, ಮಂಡಲ ರಚನೆ, ಅಂಕುರ ಪೂಜೆ ನಡೆದು ಮಹಾಪೂಜೆ ಪೂರ್ಣಗೊಂಡಿತು.

