ಸುದ್ದಿ9:ಮೂಡುಬಿದರೆ: ರೋಟರಿ ಕ್ಲಬ್ ಪಡುಮಾರ್ನಾಡು ಇವರ ವತಿಯಿಂದ ರಕ್ತ ವರ್ಗೀಕರಣ ಶಿಬಿರವನ್ನು ಡಿ.ಜೆ. ಹಿ.ಪ್ರಾ. ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ಸೋಮವಾರ ಪಡುಮಾರ್ನಾಡು ರೋಟರಿ ಕ್ಲಬ್ ಅಧ್ಯಕ್ಷ ಮೊಹಮ್ಮದ್ ಅಸ್ಲಾಂ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿ.ಜೆ.ಶಾಲಾ ಸಂಚಾಲಕ ಬಿ.ಪ್ರತಾಪ್ ಕುಮಾರ್, ವಿದ್ಯಾರ್ಥಿಗಳಿಗೆ ರಕ್ತ ವರ್ಗೀಕರಣದ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಕ್ಲಬ್ ಸದಸ್ಯರಾದ ರತ್ನಾಕರ ದೇವಾಡಿಗ, ಮಹೇಶ್, ಕಿಶೋರ್, ಪ್ರವೀಣ್, ಪುಷ್ಪರಾಜ್ ಜೈನ್ ಉಪಸ್ಥಿತರಿದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರ ರಾಯಿ, ಸಿದ್ಧಕಟ್ಟೆ ಸಿಬ್ಬಂದಿ ಬಸಯ್ಯ ಶಿಬಿರ ನಡೆಸಿಕೊಟ್ಟರು.
ಜೈನ ಪ್ರೌಢಶಾಲೆಯ ಅಧ್ಯಾಪಕ ವಿನಯಕುಮಾರ್ ಸ್ವಾಗತಿಸಿದರು. ಡಿ.ಜೆ. ಶಾಲಾ ಸಹಶಿಕ್ಷಕಿ ತ್ರಿಶಲಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮು.ಶಿ. ಶಶಿಕಾಂತ್ ವೈ. ವಂದಿಸಿದರು.

3(a)

 

By suddi9

Leave a Reply

Your email address will not be published. Required fields are marked *