ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಾಳೆ (ಮಾ.8) ಹಲವು ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಶ್ರೀದುರ್ಗಾಪರಮೇಶ್ವರಿ ವೇದಿಕೆ, ಶ್ರೀರಾಜರಾಜೇಶ್ವರಿ ವೇದಿಕೆಗಳಲ್ಲಿ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.ವೈದಿಕ ಕಾರ್ಯಕ್ರಮಗಳು: ಪ್ರಾತಃಕಾಲ 6ರಿಂದ ಪುಣ್ಯಾಹ, ಗಣಹೋಮ, ದುರ್ಗಾಹೋಮ, ಶ್ರೀ ದುರ್ಗಾಪರಮೇಶ್ವರಿ ಮತ್ತು ಸಪರಿವಾರ ಶ್ರೀರಾಜರಾಜೇಶ್ವರಿ ದೆವರುಗಳಿಗೆ ಅನುಜ್ಞಾ ಕಲಶಾಭಿಶೇಕ, ಅನುಜ್ಞಾ ಪ್ರಾರ್ಥನೆ, ಅಂಕುರ ಪೂಜೆ, ಮಹಾಪೂಜೆ ನಡೆಯಲಿದೆ.

RAN_1337
ಸಾಯಂಕಾಲ 5ರಿಂದ ಮಂಟಪ ಸಂಸ್ಕಾರ,ದುರ್ಗಾಪೂಜೆ, ಬ್ರಹ್ಮಕಲಶಕ್ಕೆ ಅಂಕುರಾರೋಪಣೆ, ಮೂಲಾಲಯದಲ್ಲಿ ಸಪ್ತಶುದ್ದಿ, ಪ್ರಾಸಾದಶುದಿ, ರಾಕ್ಷೋಘ್ನಹೋಮ, ವಾಸ್ತುಪೂಜೆ,ವಾಸ್ತುಹೋಮ, ಅಸ್ತ್ರಕಲಶಪೂಜೆ, ಸಪರಿವಾರ ಶ್ರೀ ರಾಜರಾಜೇಶ್ವರಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೆವರುಗಳಿಗೆ ಬಿಂಬಶುದ್ದಿ, ಕಲಶಾಧಿವಾಸ, ಅಧಿವಾಸ ಹೋಮ, ಅರ್ಕುಳ ಶ್ರೀ ಉಳ್ಳಾಕ್ಲೂ ಮಗೃಂತಾಯ ದೈವಸ್ಥಾನದಲ್ಲಿ ಪ್ರಾಸಾದ ಶುದ್ದ್ಯಾದಿಗಳು, ಅಂಕುರ ಪೂಜೆ, ಮಹಾಪೂಜೆ ನಡೆಯಲಿದೆ.
ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜೈನಮಠ ಶ್ರವಣಬೆಳಗೊಳದ ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಲಿದ್ದಾರೆ. ಶಾಸಕ ಡಿ. ವೇದವ್ಯಾಸ ಕಾಮತ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಸಾಂಸ್ಕøತಿಕ ಕಾರ್ಯಕ್ರಮಗಳು
ಬೆಳಿಗ್ಗೆ ರಾತ್ರಿ 7.00 ರಿಂದ 9.00 ಅಂಬಯ್ಯನುಲಿ ಮತ್ತು ಬಳಗದವರಿಂದ ದಾಸರ ಪದಗಳು
ರಾತ್ರಿ 9.00-10.00 ಸನಾತನ ನಾಟ್ಯಾಲಯ, ಮಂಗಳೂರು, ಪ್ರಸ್ತುತಪಡಿಸುವ ಪುಣ್ಯಭೂಮಿ ಭಾರತ ನಿರ್ದೇಶನ:ವಿದುಷಿ ಶಾರದಾಮಣಿಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್
8.30ರಿಂದ 9.30 ಇದಾಯಿತುಲ್ಲಾ ಪಡುಬಿದ್ರಿ ಮತ್ತು ಬಳಗದವರಿಂದ ನಾದಸ್ವರ ವಾದನ
11.30-12.30 ವಿಶ್ವಾಸ್ ಚೆನ್ನೈ ಮತ್ತು ಬಳಗದವರಿಂದ ಮ್ಯಾಂಡೊಲಿನ್ ವಾದನ
12.30-01.55 -ವಿಠಲ ನಾಯಕ್ ಮತ್ತು ಬಳಗ ಕಲ್ಲಡ್ಕ ತಂಡದಿಂದ ಗೀತ ಸಾಹಿತ್ಯ ಸಂಭ್ರಮ
02.00-02.25 ಪ್ರವೀಣ್ ಮರ್ಕಮೆ ಮತ್ತು ಬಳಗದವರಿಂದ ಕುಸಲ್ದ ಕುರ್ಲರಿ
02.30-02.45 ಅಶೋಕ ಪೊಳಲಿ ಅವರಿಂದ ವಿಶೇಷ ನೃತ್ಯ
02.50-4.30 ತಾಳಮದ್ದಳೆ ನಡೆಯಲಿದೆ. ಮುಮ್ಮೇಳ: ಡಾ| ಎಂ. ಪ್ರಭಾಕರ ಜೋಷಿ, ಸುನ್ನಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ್ ಭಟ್ , ಪೊ¼ಲಿÀ ನಿತ್ಯಾನಂದ ಭಟ್. ಹಿಮ್ಮೇಳದಲ್ಲಿ ಭಾಗವತರು: ಪದ್ಯಾಣ ಗಣಪತಿ ಭಟ್, ಚೆಂಡೆ: ಪದ್ಯಾಣ ಶಂಕರನಾರಾಯಣ ಭಟ್, ಮದ್ದಳೆ: ಪದ್ಯಾಣ ಜಯರಾಮ್ ಭಟ್
04.35-05.55 ನಾದಸ್ವರ ವಾದನ ನಾಗೇಶ್ ಬಪ್ಪನಾಡ್ ಮತ್ತು ಬಳಗ

By suddi9

Leave a Reply

Your email address will not be published. Required fields are marked *