ಪೊಳಲಿ:ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ವಿದಿವಿಧಾನಗಳು ಜರುಗುತ್ತಿದ್ದು, ನಾಲ್ಕನೇ ದಿನವಾದ ಇಂದು(ಮಾ.7) ಹಲವು ವೈದಿಕ-ಸಾಂಸ್ಕøತಿಕ-ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ವೈದಿಕ ಕಾರ್ಯಕ್ರಮಗಳು
ಪ್ರಾತಃಕಾಲ 6ರಿಂದ ಪುಣ್ಯಾಹ, ಗಣಪತಿ ಹೋಮ, ಸಂಜೀವಿನಿ ಮೃತ್ಯುಂಜಯ ಹೋಮ, ಚೋರಶಾಂತಿ, ಸ್ವಶಾಂತಿ, ಅದ್ಭುತ ಶಾಂತಿ, ತತ್ವಕಲಶ ಪೂಜೆ, ತತ್ವಹೋಮ, ಹೋಮ ಕಲಶಾಭಿಷೇಕ, ಅಂಕುರ ಪೂಜೆ, ಮಹಾಪೂಜೆ ನಡೆಯಲಿದೆ. ಸಾಯಂಕಾಲ 5ರಿಂದ ದುರ್ಗಾಪೂಜೆ, ಸಪರಿವಾರ,

polali
ಅರೆಹೊಳೆ ಪ್ರತಿಷ್ಠಾನ ಮಂಗಳೂರು ಅವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ರಿಂದ ಕಲಾವತಿ ದಯಾನಂದ ಉಡುಪಿ ಅವರಿಂದ ಮಧುರ ಸಂಗೀತ, ರಾತ್ರಿ 8.30ರಿಂದ 10ರ ತನಕ ಯಕ್ಷಗಾನ ಕೇಂದ್ರ ಉಡುಪಿ ಅವರಿಂದ ವಾಲಿ ಯಕ್ಷಗಾನ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ: ಇದೇ ವೇದಿಕೆಯಲ್ಲಿ ಸಂಜೆ 6ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀರಾಮ ಕ್ಷೇತ್ರ ನಿತ್ಯಾನಂದ ನಗರ ಕನ್ಯಾಡಿ ಧರ್ಮಸ್ಥಳದ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಹಾಗು ಗುರುಪುರ ಉಪ್ಪುಗೋಡು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಮಾಜಿ ಸಚಿವ ಅಮರ್‍ನಾಥ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದು, ಇತಿಹಾಸ ತಜ್ಞ ಪುಂಡಿಕಾೈ ಗಣಪಯ್ಯ ಭಟ್ ಧಾರ್ಮಿಕ ಉಪನ್ಯಾಸಗೈಯ್ಯಲಿದ್ದಾರೆ.

By suddi9

Leave a Reply

Your email address will not be published. Required fields are marked *