ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಆಗಮಿಸುವ ಭಕ್ತರ ವಾಹನ ನಿಲುಗಡೆಯ ಪಾರ್ಕಿಂಗ್ ವ್ಯವಸ್ಥೆಯನ್ನು ಪೊಳಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ-ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಉದ್ಘಾಟಿಸಿದರು.
ಸುಮಾರು 22 ಎಕ್ರೆ ಪ್ರದೇಶಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ವಾಹನ ನಿಲುಗಡೆಗೆ ಯಾವುದೇ ಅಡಚಣೆಯಾಗದಂತೆ ಸ್ವಯಂಸೇವಕರ ದಂಡೇ ಕಾರ್ಯನಿರ್ವಹಿಸಲಿದೆ. ಪೊಳಲಿ ರಾಮಕೃಷ್ಣ ತಪೋವನದ ಶ್ರೀವಿವೇಕಚೈತನ್ಯಾನಂದ ಸ್ವಾಮೀಜಿಯವರು ಪ್ರಾರ್ಥನೆ ಸಲ್ಲಿಸಿದರು. ಚಂದ್ರಹಾಶ ಶೆಟ್ಟಿ ನಾರಳ, ಭುವೇಶ್ ಪಚ್ಚಿನಡ್ಕ, ಸೋಹನ್ ಅಥಿಕಾರಿ, ಹರೀಶ್ ಪೊಳಲಿ, ಲೋಕೇಶ್ ಭರಣಿ, ಚಂದ್ರಶೇಖರ್ ಶೆಟ್ಟಿ, ರೋಷನ್, ನಿತಿನ್, ವಿದ್ಯಾಚರಣ್ ಭಂಡಾರಿ, ಚರಣ್ ಮಂಗಾಜೆ, ರಾಮಚಂದ್ರ ಶೆಟ್ಟಿ, ಮತ್ತು ವಾಹನ ನಿಲುಗಡೆ ಸಮಿತಿಯ ಪದಾದಿಕಾರಿಗಳು ಉಪಸ್ಥಿತರಿದ್ದರು.

