ಪೊಳಲಿ: ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡಿರುವ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಸಾವಿರಸೀಮೆಯನ್ನು ಸಂಪೂರ್ಣವಾಗಿ ಸೀರೆ-ಕೇಸರಿ ಪತಾಕೆಗಳಿಂದ ಶೃಂಗರಿಸಲಾಗಿದೆ. ನಾನಾ ಬಣ್ಣದ ಜರತಾರಿ ಸೀರೆಗಳನ್ನು ಒಂದಕ್ಕೊಂದು ಪೋಣಿಸಿ ಶೃಂಗರಿಸಲಾಗಿದ್ದು, ಭಕ್ತರನ್ನು ವಿಶೇಷ ಆಕರ್ಷಿಸುತ್ತಿದೆ.
ಪೊಳಲಿಗೆ ಹರಕೆಯ ರೂಪದಲ್ಲಿ ಬಂದಿರುವ ಪಟ್ಟೆಸೀರೆಗಳನ್ನು ನಗರಾಲಂಕಾರಗೊಳಿಸಲು ಒಪ್ಪಿಗೆ ಪಡೆದು ಸಾವಿರ ಸೀಮೆಗಳನ್ನು ಅದರಿಂದಲೇ ಶೃಂಗರಿಸಲಾಗಿದೆ. ಸೀರೆಯಿಂದಲೇ ನಿರ್ಮಿಸಿದ ದ್ವಾರ, ಸೀರೆಯಿಂದಲೇ ನಿರ್ಮಿಸಿದ ತಳಿರುತೋರಣಗಳಿಂದಾಗಿ ಬ್ರಹ್ಮಕಲಶೋತ್ಸವದ ಸೊಬಗನ್ನು ಇಮ್ಮಡಿಗೊಳಿಸಿದೆ.

ಇಡೀ ಜಿಲ್ಲೆಯಾದ್ಯಂತ ಹಲವು ಪ್ರದೇಶಗಳಲ್ಲಿ ಸೀರೆಯಿಂದಲೇ ನಗರವನ್ನು ಶೃಂಗರಿಸಲಾಗಿದ್ದು, ಇದು ಪೊಳಲಿಯ ವಿಶೇಷತೆಯಾಗಿದೆ. ಇದರೊಂದಿಗೆ ಬ್ಯಾನರ್, ಬಂಟಿಗ್ಸ್ಗಳಿಂದ ನಗರವನ್ನು ಶೃಂಗರಿಸಲಾಗಿದೆ. ಬಂಟ್ವಾಳ-ಬಿ.ಸಿ.ರೋಡ್ನಿಂದ ಪೊಳಲಿ ದ್ವಾರದಿಂದ ಪೊಳಲಿಯವರೆಗೆ ಅದೇ ರೀತಿ ಗುರುಪುರ ದ್ವಾರದಿಂದ ಪೊಳಲಿಯನ್ನು ವಿಶೇಷ ರೀತಿಯಲ್ಲಿ ಶೃಂಗರಿಸಲಾಗಿದೆ. ಮೂಡಬಿದ್ರೆಯಿಂದ ಮಂಗಳೂರು, ಬಂಟ್ವಾಳ, ಬಿ.ಸಿ.ರೋಡ್ ಸೇರಿ ಹಲವು ಪ್ರದೇಶಗಳು ಸಂಪೂರ್ಣವಾಗಿ ಶೃಂಗಾರಗೊಂಡಿದ್ದು, ಭಕ್ತರನ್ನು ಬ್ರಹ್ಮಕಲಶೋತ್ಸವಕ್ಕೆ ಕೈಬೀಸಿ ಕರೆಯುವಂತೆ ಮಾಡಿದೆ.
ಹ


