ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ದಿನಾಂಕ 27-02-2019 ರಿಂದ 17-03-2019 ರ ವರೆಗೆ ಹಮ್ಮಿಕೊಂಡಿರುವ ಬಂಟ್ವಾಳ ಜಾತ್ರೋತ್ಸವ ಕಲಾ ಮೇಳ 2019 ಕ್ಕೆ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಕರ್ಕೆರಾ ಇವರಿಂದ, ಟೇಪು ಕತ್ತರಿಸಿ, ದೀಪ ಪ್ರಜ್ವಲಿಸುವ ಮೂಲಕ ಚಾಲನೆ ದೊರೆಯಿತು. ಇವರು ಈ ಒಂದು ಬೃಹತ್ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ, ಈ ಕಾರ್ಯವು ವ್ಯವಹಾರಿಕ ದೃಷ್ಟಿಯಿಂದ ನಡೆಯುವುದಾದರೂ, ಈ ಒಂದು ಭಾಗದ ಹತ್ತಿಪ್ಪತ್ತು ಕಲಾ ತಂಡಗಳನ್ನು ಗುರುತಿಸಿ ಅವರ ಪ್ರತಿಭೆಗಳನ್ನು ಅನಾವರಣಗೊಳಿಸುವುದರೊಂದಿಗೆ, ಈ ಭಾಗದ ಜನರಿಗೆ ವಿವಿಧ ರೀತಿಯಲ್ಲಿ ಮನೋರಂಜನೆಗಾಗಿ ಇಂತಹ ಕಾರ್ಯಕ್ರಮಗಳನ್ನು ಸಂಘಟಕರು ಸಂಯೋಜಿಸಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು.

KAR_8969

ತಿಂಡಿ ತಿನಿಸುಗಳ ಮಳಿಗೆ ಹಾಗೂ ಅಮ್ಯೂಸ್‍ಮೆಂಟ್ ಪಾರ್ಕ್‍ಗಳನ್ನು ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ಅಬ್ಬಾಸ್ ಆಲಿ ಇವರು ಉದ್ಘಾಟಿಸಿ ಎಲ್ಲರೂ ಸೇರಿಕೊಂಡು ಬಂಟ್ವಾಳ ನಗರ ಪ್ರದೇಶದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿ ಜನರೆಲ್ಲಾ ಸಕ್ರೀಯವಾಗಿ ಭಾಗವಹಿಸಿ, ಮನೋರಂಜನೆಯನ್ನು ಪಡೆಯುವುದಕ್ಕೆ ಇಲ್ಲಿ ವಿಫುಲ ಅವಕಾಶ ಇದೆ. ಅದನ್ನು ಜನತೆ ಪಡೆದುಕೊಳ್ಳುವಲ್ಲಿ ಸಫಲತೆಯಾಗಲಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಆಯೋಜಕರಾದ ಶ್ರೀ ಸುಭಾಶ್ಚಂದ್ರ ಜೈನ್, ಈ ಕಾರ್ಯಕ್ರಮದ ಉದ್ದೇಶ ಹಾಗೂ ಅವಶ್ಯಕತೆಗಳನ್ನು ತನ್ನ ಪ್ರಾಸ್ತಾವಿಕ ಮಾತಿನಲ್ಲಿ ತಿಳಿಸುತ್ತಾ, ಎಲ್ಲಾ ಗಣ್ಯರನ್ನು ಸ್ವಾಗತಿಸಿ, ಸಾರ್ವಜನಿಕ ಬಂಧುಗಳ ಸರ್ವ ರೀತಿಯ ಸಹಕಾರ ಬೇಕು ಎಂದು ಭಿನ್ನವಿಸಿಕೊಂಡರು.

KAR_8985
ಈ ಒಂದು ಕಾರ್ಯಕ್ರಮಕ್ಕೆ ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಸಂಪೂರ್ಣ ಸಹಕಾರವಿದೆ, ಇದು ಖಂಡಿತ ಜನಸಾಮಾನ್ಯರಿಗೆ ಸದ್ಭಾವನೆಯಿಂದ ಭಾಗವಹಿಸಲು ಅನುಕೂಲವಾಗಲಿದೆ ಎಂದು ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ಬಾಬು ಕೆ.ವಿ. ವಿಟ್ಲ ಇವರು ತಿಳಿಯಪಡಿಸಿದರು.
ವೇದಿಕೆಯಲ್ಲಿ ಮೂಡಬಿದ್ರೆ ತಾಲೂಕು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ಜಿ.ಕೆ. ಗಣೇಶ್ ಮೂಡಬಿದ್ರೆ, ಮಂಗಳೂರು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ಉಮಾನಾಥ ಸುವರ್ಣ, ಬೆಳ್ತಂಗಡಿ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ಹಾಜಿ ಅಬ್ದುಲ್ ಲತೀಫ್, ನಿವೇಶನದ ಮಾಲಕರಾದ ಶ್ರೀ ಮೋಹನ್ ಅರ್ಕಮೆ, ವರ್ತಕರ ಸಹಕಾರಿ ಸಂಸ್ಥೆಯ ಸಿ.ಇ.ಓ. ಶ್ರೀ ಅಜಿತ್ ಕುಮಾರ್ ಜೈನ್, ಶ್ರೀ ಸದಾಶಿವ ಪುತ್ರನ್, ಶ್ರೀ ಶ್ರೀಧರ ಶೆಟ್ಟಿ, ಶ್ರೀ ಜಿತೇಶ್ ಜೈನ್, ಶ್ರೀ ಮೋಹನ್ ಜಿ. ಮೂಲ್ಯ ಇವರುಗಳು ಉಪಸ್ಥಿತರಿದ್ದರು.
ಶ್ರೀಮತಿ ಮಮತಾ ಎ. ಜೈನ್, ಶ್ರೀಮತಿ ಸಪ್ನಾ ಚಂದ್ರಪ್ರಭಾ ಮತ್ತು ಕುಮಾರಿ ಜಯಲಕ್ಷ್ಮೀ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ಶುೃತಿ ಆಟ್ರ್ಸ್ ಮಾಲಕರಾದ ಶ್ರೀ ದಿವಾಕರ ದಾಸ್ ಇವರು ನಿರ್ವಹಿಸಿದರೆ, ಸಹ ಸಂಘಟಕರಾದ ಶ್ರೀ ಮನ್ಮಥ್‍ರಾಜ್ ಜೈನ್ ಇವರು ವಂದಿಸಿದರು.

By suddi9

Leave a Reply

Your email address will not be published. Required fields are marked *