ಬಂಟ್ವಾಳ: ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಪರಿಸರ ಇಂದು ಕಲುಷಿತವಾಗುತ್ತಿದೆ. ಶುದ್ದ ಗಾಳಿಗಾಗಿ ಮಾನವ ಪರದಾಡುವ ಸ್ಥಿತಿ ಎದುರಾಗಿದೆ ಈ ನಿಟ್ಟಿನಲ್ಲಿ ಸ್ವಾಭಾವಿಕ ಪ್ರಕೃತಿ ಸಂಪತ್ತನ್ನು ರಕ್ಷಿಸುವ ಮಹತ್ತರ ಜವಾಬ್ದಾರಿ ಯುವಕರ ಮೇಲಿದೆ. ಪರಿಸರದ ಬಗ್ಗೆ ಕಾಳಜಿ ವಹಿಸಿ, ಇತರರಲ್ಲಿ ಈ ಬಗ್ಗೆ ಅರಿವನ್ನು ಮೂಡಿಸಿದರೆ ಮಾತ್ರ ಈ ದೇಶದ ಮಹತ್ತರ ಸಂಪತ್ತನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಮಂಗಳೂರು ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಡಾ| ಕರಿಕಲನ್ ಅಭಿಪ್ರಾಯಪಟ್ಟರು.

ಅವರು ರಾಷ್ಟ್ರೀಯ ಸೇವಾಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಪ್ರಾದೇಶಿಕ ವಲಯ ಬಂಟ್ವಾಳ, ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಎಸ್.ವಿ.ಎಸ್ ಕಾಲೇಜು ಬಂಟ್ವಾಳ ಇವರುಗಳ ಸಹಯೋಗದೊಂದಿಗೆ, ಬಂಟ್ವಾಳ ತಾಲೂಕಿನ ಪದವಿ ಕಾಲೇಜುಗಳ ಎನ್.ಎಸ್.ಎಸ್ ವಿದ್ಯಾರ್ಥಿಗಳಿಗಾಗಿ ಎಸ್.ವಿ.ಎಸ್ ಕಾಲೇಜಿನಲ್ಲಿ ಆಯೋಜಿಸಲಾದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ, ಎಂಬ ವಿಚಾರದ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

IMG-20190222-WA0006 (1)

ಕಾರ್ಯಗಾರದ ಮುಖ್ಯ ಅತಿಥಿ ಬಂಟ್ವಾಳ ವಲಯದ ಅರಣ್ಯ ಅಧಿಕಾರಿ ಶ್ರೀ ಸುರೇಶ್ ಮಾತನಾಡುತ್ತಾ ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಜೊತೆಗೆ ಯುವಕರು ಕೈ ಜೋಡಿಸಿದರೆ, ಅರಣ್ಯ ಸಂರಕ್ಷಣೆ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ ಮಾತನಾಡುತ್ತಾ ಇಂದು ಆಗುತ್ತಿರುವ ನೈಸರ್ಗಿಕ ಆಪತ್ತುಗಳಿಗೆ ಅರಣ್ಯ ನಾಶವೇ ಕಾರಣ. ಅರಣ್ಯಗಳ ಮೇಲಿನ ಮಾನವ ದೌರ್ಜನ್ಯದಿಂದ ಪ್ರಾಣಿಸಂಕುಲಗಳು ನಶಿಸಿ ಹೋಗುತ್ತಿವೆ, ಕಾಡು ಪ್ರಾಣಿಗಳು ನಾಡಿಗೆ ಬಂದು ದಾಂಧಲೆ ಎಬ್ಬಿಸುತ್ತಿವೆ ಈ ಎಲ್ಲಾ ಅಪಾಯಗಳಿಗೆ, ಪರಿಹಾರ ಒಂದೇ ಪರಿಸರ ಸಂರಕ್ಷಣೆ ಕಾಡನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ನುಡಿದರು

ವೇದಿಕೆಯಲ್ಲಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ದಿನೇಶ್ ನಾಯಕ್, ಪರಿಸರವಾದಿ ಶ್ರೀ ಸಸ್ಯಶ್ಯಾಮಲ ವಿಟ್ಲ, ಉರಗ ತಜ್ಞ ಶ್ರೀ ಕಿರಣ್ ಪಿಂಟೋ, ಶ್ರೀ ಭುವನೇಶ್ ಮತ್ತು ಚಾರಣಿಗ ಶ್ರೀ ದಿನೇಶ್ ಹೊಳ್ಳ ಉಪಸ್ಥಿತರಿದ್ದು, ಬೇರೆ ಬೇರೆ ಉಪನ್ಯಾಸಗಳನ್ನು ನಿರ್ವಹಿಸಿಕೊಟ್ಟರು

ಎನ್.ಎಸ್.ಎಸ್ ಯೋಜನಾಧಿಕಾರಿ ಶ್ರೀ ಕಿಟ್ಟು ರಾಮಕುಂಜ ಸ್ವಾಗತಿಸಿ, ಇನೋರ್ವ ಅಧಿಕಾರಿ ಡಾ| ಮಂಜುನಾಥ ಉಡುಪ ವಂದಿಸಿದರು. ಎನ್ .ಎಸ್ ಎಸ್ ಸ್ವಯಂ ಸೇವಕಿ ಸುಶ್ಮಿತಾ ಪೈ ಪ್ರಾರ್ಥಿಸಿದರು ಪ್ರಖ್ಯಾತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಗಾರದಲ್ಲಿ ಎಸ್.ವಿ.ಎಸ್ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಕಟ್ಟೆ, ಸರಕಾರಿ ಪ್ರ.ದರ್ಜೆ ಕಾಲೇಜು ಬಂಟ್ವಾಳ ಹಾಗೂ ಕಾರ್ಮೆಲ್ ಕಾಲೇಜು ಮೊಡಂಕಾಪು ಇಲ್ಲಿನ ಸುಮಾರು 250 ಎನ್.ಎಸ್.ಎಸ್ ಸ್ವಯಂ ಸೇವಕರು ಕಾರ್ಯಗಾರದಲ್ಲಿ ಭಾಗವಹಿಸಿದರು

By suddi9

Leave a Reply

Your email address will not be published. Required fields are marked *