ಬಂಟ್ವಾಳ : ಮಂಗಳೂರು ಲೋಕಸಭಾಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಆಕಾಂಕ್ಷಿಗಳ ಸಂಖ್ಯೆಗೆ ಏನು ಕಮ್ಮಿ ಇಲ್ಲ.ಈಗಾಗಲೇ ಜಿಲ್ಲೆಗಾಗಮಿಸಿದ ಪಕ್ಷದ ವೀಕ್ಷಕರ ಮುಂದೆ ಹಲವು ಮಂದಿ ಟಿಕೇಟ್ ಬೇಡಿಕೆಯನ್ನು ಮುಂದಿಟ್ಟಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಇದೆಲ್ಲದರ ಮಧ್ಯೆ ಮಾಜಿ ಸಚಿವ ಬಿ.ರಮಾನಾಥ ರೈ ಏಐಸಿಸಿ ಪ್ರ.ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ಪಡಸಾಲೆಯಲ್ಲಿ ಈಗ ಕುತೂಹಲ ಮೂಡಿಸಿದೆ. ರಮಾನಾಥ ರೈ ಅವರಿಗೆ ರಾಜಕೀಯವಾಗಿ ಕಾಂಗ್ರೆಸ್ ನ ಹಿರಿಯ ನೇತಾರ ಆಸ್ಕರ್ ಫರ್ನಾಂಡಿಸ್ ಗಾಡ್ ಫಾದರ್ ಕೂಡ ಹೌದು.. ರಮಾನಾಥ ರೈ ಅವರು ಪ್ರಬುದ್ದ ರಾಕಕಾರಣಿಯಾಗಿ ಬೆಳೆಯುವುದರಲ್ಲಿ ಆಸ್ಕರ್ ಫರ್ನಾಂಡಿಸ್ ಅವರ ಕೃಪಾಕಟಾಕ್ಷ ಇದ್ದೇ ಇದೆ. ಮಂಗಳವಾರ ಸಂಜೆ ಮಂಗಳೂರು ನಗರದಲ್ಲಿ ರೈ ಹಾಗೂ ಆಸ್ಕರ್ ಅವರು ಸುಮಾರು ಆರ್ಧತಾಸುಗಳಿಗಿಂತಲೂ ಹೆಚ್ಚು ಹೊತ್ತು ರಹಸ್ಯವಾಗಿ ಚರ್ಚೆನಡೆಸಿದ್ದಾರೆ. ದ.ಕ.ಜಿಲ್ಲೆಯ ಇತ್ತೀಚಿಗಿನ ರಾಜಕೀಯ ಬೆಳವಣಿಗೆ,ಪಕ್ಷ ಸಂಘಟನೆ,ಮುಂಬರುವ ಲೋಕಸಭಾ ಚುನಾವಣೆಯ ತಯಾರಿ ಹೀಗೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಸದ್ಯ ರಾಜ್ಯರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಮನಸ್ಸು ಮಾಡಿರುವ ಮಾಜಿ ಸಚಿವ ರಮಾನಾಥ ರೈ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿ ಕೂಡ ಹೌದು, ಹಾಗಾಗಿ ತನ್ನ ರಾಜಕೀಯ ಗಾಡ್ ಫಾದರ್ ಆಸ್ಕರ್ ಫೆನಾಂಡಿಸ್ ಅವರೊಂದಿಗೆ ರಮಾನಾಥ ರೈ ಅವರ ಮಾತುಕತೆ ಟಿಕೇಟ್ ವಿಚಾರದಲ್ಲಿ ಮಹತ್ವ ಪಡೆದುಕೊಂಡಿದೆ.

IMG-20190220-WA0019
ಇದಕ್ಕೂ ಮುನ್ನ ಆಸ್ಕರ್ ಅವರನ್ನು ಮಾಜಿ ಶಾಸಕ ಜೆ.ಆರ್.ಲೋಬೊ ಅವರ ಸಹಿತ ಹಲವು ಮಂದಿ ಪ್ರಮುಖ ಕಾಂಗ್ರೆಸ್ ನಾಯಕರು ಭೇಟಿಯಾಗಿದ್ದರು. ಮಂಗಳೂರುಲೋಕಸಭಾ ಕ್ಷೇತ್ರದಿಂದ ರಮಾನಾಥ ರೈ ಮಾತ್ರವಲ್ಲ ರಾಜ್ಯಸಭಾ ಸದಸ್ಯ ಹರಿಪ್ರಸಾದ್ , ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಯು.ಕೆ.ಮೋನು, ಎಂ .ಎಲ್ .ಸಿ.ಐವಾನ್ ಡಿ ಸೋಜ,ಯುವಕಾಂಗ್ರೆಸ್ ಅಧ್ಯಕ್ಷ‌‌ ಮಿಥುನ್ ರೈ ಹೀಗೆ ಹಲವರ ಹೆಸರು ಟಿಕೇಟ್ ಗಾಗಿ ಹರಿದಾಡುತ್ತಿದೆ.ಮಾಜಿ ಸಚಿವ ಜನಾರ್ದನ ಪೂಜಾರಿಯವರು ಕೂಡ ಹೈಕಮಾಂಡ್ ಬಯಸಿದರೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಹಾಗಾಗಿ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿ ಟಿಕೇಟ್ ಗಾಗಿ ಪೈಟ್ ಜೋರಾಗಿಯೇ ಇದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಸಮೀಪವರ್ತಿಯವರಲ್ಲಿ ಒಬ್ಬರಾದ ಆಸ್ಕರ್ ಅವರೊಂದಿಗಿನ ರೈ ಭೇಟಿ ಲೋಕಸಭಾ ಚುನಾವಣೆಯ ಸಾರಥ್ಯ ರಮಾನಾಥ ರೈ ಅವರಿಗೆ ದಕ್ಕುವ ನಿರೀಕ್ಷೆ ಹೆಚ್ಚಿದೆ. ಗಳಸ್ಯ-ಕಂಠಸ್ಯ: ಮಾಜಿ ಸಚಿವ ರಮಾನಾಥ ರೈ ಹಾಗೂ ಕೇಂದ್ರ ದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ರಾಜಕೀಯವಾಗಿಯು ಗಳಸ್ಯ -ಕಂಠಸ್ಯರು, ಈ ಹಿಂದೆ ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ವು ಒಳಗೊಂಡಿತ್ತು. ಉಡುಪಿಲೋಕಸಭಾ ಚುನಾವಣೆಯಲ್ಲಿ ಆಸ್ಕರ್ ಗೆಲುವಿನಲ್ಲಿ ರಮಾನಾಥ ರೈ ಅವರು ಅಪಾರ ಶ್ರಮ ವಹಿಸಿದ್ದರು. ರೈ ಅವರ ಪ್ರತಿ ರಾಜಕೀಯ ನಡೆಯ ಹಿಂದೆ ಆಸ್ಕರ್ ನೆರಳಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ರೈ ಅವರಿಗೆ ಟಿಕೇಟ್ ಸಿಗುವುದರಲ್ಲಿ ಅನುಮಾನವಿಲ್ಲ ಎಂಬುದು ರೈ ಬೆಂಬಲಿಗರ ಮಾತು.

By suddi9

Leave a Reply

Your email address will not be published. Required fields are marked *