ಕೈಕಂಬ: ಸೌಹಾರ್ದ ಸ್ಪೋಟ್ರ್ಸ್ ಕ್ಲಬ್ (ರಿ) ಕುಪ್ಪೆಪದವು ಇದರ 27ನೇ ವಾರ್ಷಿಕೋತ್ಸವದ ಅಂಗವಾಗಿ ಸೌಹಾರ್ದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ದಿನಾಂಕ ಫೆ.23ರ ಶನಿವಾರ ಕುಪ್ಪೆಪದವು ಕಿಲೆಂಜಾರ್ ಆದಿರಾಜ ಜೈನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಶಾಸಕ ಡಾ| ವೈ. ಭರತ್ ಶೆಟ್ಟಿ, ಮಾಜಿ ಶಾಸಕ ಬಿ.ಎ. ಮೊಯ್ದೀನ್ ಬಾವಾ, ಮಾಜಿ ಸಚಿವ ರಮಾನಾಥ ರೈ, ಪಣಂಬೂರು ಅಸಿಸ್ಟೆಂಟ್ ಪೊಲೀಸ್ ಕಮೀಷನರ್ ಶ್ರೀನಿವಾಸ ಗೌಡ(ಐಎಎಸ್) ಮುಂತಾದವರು ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
