ಎಡಪದವು, : ಕುಡಿಯುವ ನೀರಿಗಾಗಿ ಪೈಪ್ ಅಳವಡಿಸಿದ್ದರೂ ತನಗೆ ಮಾತ್ರ ಸರಿಯಾದ ರೀತಿಯಲ್ಲಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಮುತ್ತೂರು ಗ್ರಾ.ಪಂ. ವ್ಯಾಪ್ತಿಯ ಶಾಂತಿಪಲ್ಕೆ ನಿವಾಸಿ ಫಿಲೋಮಿನಾ ಎಂಬವರು ಆರೋಪಿಸಿದ್ದಾರೆ. .
ಫಿಲೋಮಿನಾ ಅವರು ಈ ಮುಂಚೆ ಎಡಪದವಿನಲ್ಲಿ ಇತ್ತೀಚೆಗೆ ನಡೆದಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ನೀರಿನ ಸಮಸ್ಯೆಯ ಬಗ್ಗೆ ಶಾಸಕರಿಗೆ ದೂರು ನೀಡಿದ್ದು, ಶಾಸಕರು ಕ್ರಮಕೈಗೊಳ್ಳುವಂತೆ ಪಂಚಾಯತ್‍ಗೆ ಸೂಚಿಸಿದ್ದರೂ ಸಮಸ್ಯೆ ಪರಿಹರಿಸಲು ಪಂಚಾಯತ್ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುದ್ದಾರೆ.
ಫಿಲೋಮಿನಾ ಅವರ ಮನೆಯ ಕಂಪೌಂಡಿನ ಪಕ್ಕದಲ್ಲಿಂದಲೇ ದುರ್ಗಾಕೋಡಿ ಎಂಬಲ್ಲಿಗೆ ನೀರು ಪೂರೈಸುವ ಪೈಪ್ ಹಾದುಹೋಗಿದ್ದರೂ ಕೂಡ ಆ ಪೈಪ್‍ಲೈನ್‍ನಿಂದ ಫಿಲೋಮಿನಾ ಮನೆಗೆ ನೀರಿನ ಸಂಪರ್ಕ ನೀಡದೆ ಸುಮಾರು 150 ಮೀಟರ್ ದೂರದ ನೀರಿನ ಟ್ಯಾಂಕ್(ಪಂಪ್‍ಹೌಸ್) ಬಳಿಯಿಂದ ನೀರಿನ ಸಂಪರ್ಕ ನೀಡಲಾಗಿದೆ. ಸುಮಾರು 7000 ರೂ. ಖರ್ಚು ಮಾಡಿ 27 ಲೆಂಗ್ತ್ ಪೈಪ್‍ಗಳನ್ನು ಅಳವಡಿಸಿ ಮೂರು ವರ್ಷಗಳ ಹಿಂದೆ ನೀರಿನ ಸಂಪರ್ಕ ನೀಡಲಾಗಿತ್ತು. ಇಷ್ಟು ಖರ್ಚು ಮಾಡಿ ಪೈಪ್ ಅಳವಡಿಸಿದರೂ ಕೂಡ ನನಗೆ ಸಮಪರ್ಕ ನೀರಿನ ಸರಬರಾಜು ಮಾಡುತ್ತಿಲ್ಲ. ಈ ಬಗ್ಗೆ ಪಂಚಾಯತ್‍ನವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

1902malali5

ನನ್ನ ಮನೆಯ ಕಂಪೌಂಡ್ ಪಕ್ಕದಿಂದ ನೀರಿನ ಸಂಪರ್ಕ ನೀಡಿದರೆ ಅಲ್ಲಿಂದ ಮುಂದೆ ದುರ್ಗಾಕೋಡಿಗೆ ನೀರು ಪೂರೈಕೆಗೆ ಕಷ್ಟವಾಗುತ್ತದೆ ಎಂಬ ಕ್ಷುಲಕ ಕಾರಣ ನೀಡಿ ನನಗೆ ನೀರಿನ ಟ್ಯಾಂಕ್ ಬಳಿಯಿಂದ ನೀರಿನ ಸಂಪರ್ಕ ನೀಡುವಂತೆ ಮಾಡಲಾಗಿದೆ. ನನಗೆ ಎರಡುದಿನಕ್ಕೊಮ್ಮೆ ಕೇವಲ್ಲ ಹತ್ತಿಪ್ಪತ್ತು ನಿಮಿಷ ಮಾತ್ರ ನೀರು ಬರುತ್ತದೆ, ಇತರರಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿದೆ. ಅಕ್ಕಪಕ್ಕದವರ ಮನೆಯಿಂದ ನೀರು ತರುತ್ತಿದ್ದೇನೆ. ಸುಮಾರು ಮೂರು ವರ್ಷಗಳಿಂದ ಸರಿಯಾದ ನೀರು ಪೂರೈಕೆಯಾಗುತ್ತಿಲ್ಲ ನನಗೆ ನೀರಿನ ಮೀಟರ್ ಅಳವಡಿಸಲಾಗಿದ್ದು, ಮೀಟರ್‍ನಂತೆ ನೀರಿನ ಬಿಲ್ ಪಾವತಿಸಿದ್ದೇನೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ತಿಳಿಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಸಮಸ್ಯೆ ಬಗೆಹರಿಸಲಾಗುವುದು:
`ಫಿಲೋಮಿನ ಅವರ ಮನೆಗೆ ನೀರಿನ ಸಂಪರ್ಕದ ಪೈಪ್ ತುಂಡಾಗಿರುವ ಬಗ್ಗೆ ಪಂಚಾಯತ್‍ಗೆ ಮಾಹಿತಿ ಇದ್ದು ಈ ಬಗ್ಗೆ ಪಂಚಾಯತ್ ಅಧ್ಯಕ್ಷೆ ನಾಗಮ್ಮ ಹಾಗೂ ಇತರ ಪಂಚಾಯತ್ ಸದಸ್ಯರಲ್ಲಿ ಸರಿಮಾಡುವಂತೆ ತಿಳಿಸಿದ್ದೇನೆ. ಇದಕ್ಕೆ ಅವರು ಒಪ್ಪಿದ್ದು, ಒಂದು ವೇಳೆ ಪೈಪ್ ಸರಿಮಾಡಿದರೂ ಮತ್ತೆ ನೀರು ಪೂರೈಕೆಯಾಗದಿದ್ದರೆ ಅವರ ಮನೆಯ ಹತ್ತಿರದಿಂದ ಹಾದು ಹೋದ ಸರ್ವಿಸ್‍ಲೈನ್ ಪೈಪ್‍ನಿಂದ ಸಂಪರ್ಕ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ. ಮನೆಗೆ ಸರಿಯಾಗಿ ನೀರು ಪೂರೈಕೆಯಾಗುವಂತೆ ನೋಡಲಾಗುವುದು.’

By suddi9

Leave a Reply

Your email address will not be published. Required fields are marked *