ಸುಬ್ರಹ್ಮಣ್ಯ: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಶಿಕ್ಷಣ ಪರಿಚಯ ವರ್ಗ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ಸೆ.12-13 ರಂದು ಜರುಗುತ್ತಿದೆ. ಕೇರಳದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಶ್ರೀ ಸುರೇಂದ್ರನ್ರವರು ವರ್ಗವನ್ನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷರಾದ ಪ್ರತಾಪ್ಸಿಂಹ ನಾಯಕ್, ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲೆಯ ನೂರಕ್ಕೂ ಹೆಚ್ಚು ಪಕ್ಷದ ಪ್ರಮುಖರು ವರ್ಗದಲ್ಲಿ ಭಾಗವಹಿಸಿದ್ದರು.

ವರ್ಗವನ್ನು ಉದ್ಘಾಟಿಸಿ ಮಾತನಾಡಿದ ಸುರೇಂದ್ರನ್ರವರು ಹಿಂದಿನ 65 ವರ್ಷಗಳಲ್ಲಿ ಭಾರತದಲ್ಲಿ ಆಗದಿರುವ ಬದಲಾವಣೆಗಳು, ನರೇಂದ್ರ ಮೋದಿ ಸರಕಾರದ ನೂರು ದಿನಗಳಲ್ಲಿ ಬದಲಾವಣೆ ಕಂಡಿವೆ. ಕಾಂಗ್ರೆಸ್ನ ನಿರ್ಲಕ್ಷ್ಯ ಆಡಳಿತದಿಂದ ಬೇಸತ್ತಿದ್ದ ನಾಗರಿಕರು ನೂತನ ಸರಕಾರದ ದಿಟ್ಟ ಹೆಜ್ಜೆಗಳು ಹಾಗೂ ಪ್ರಗತಿ ಪಥದತ್ತ ಸಾಗುತ್ತಿರುವ ದಿಶೆಯನ್ನು ಕಂಡು ಅತ್ಯಂತ ಉತ್ಸುಕರಾಗಿದ್ದಾರೆ. ಕಳೆದ 10 ವರ್ಷಗಳಿಂದ ಭಾರತದ ಆಥರ್ಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಶೇ.8 ರಷ್ಟಿದ್ದ ಜಿಡಿಪಿ ಎರಡು ಅವಧಿಯ ಯುಪಿಎ ಆಡಳಿತದ ಫಲವಾಗಿ ಶೇ.5 ರ ಕೆಳಗೆ ಬಂದು ನಿಂತಿದೆ. ಇದೀಗ 2014ರ ಮೊದಲ ತ್ರೈಮಾಸಿಕದಲ್ಲಿ ಶೇ. 1.1% ರಷ್ಟು ಬೆಳವಣಿಗೆ ಕಂಡು ಆರ್ಥಿಕ ಪುನಶ್ಚೇತನಕ್ಕೆ ಜನ ಸಾಕ್ಷಿಯಾಗಿ ನಿಂತಿದ್ದಾರೆ. ವಿಶ್ವಕ್ಕೆ ಜಪಾನ್ ಮಾದರಿಯಾಗಿರಬೇಕಿರುವ ರಾಷ್ಟ್ರ, ಜಪಾನ್ನ ಹಿರೋಶಿಮಾ-ನಾಗಸಾಕಿಯ ಮೇಲೆ ಬಾಂಬ್ ಧಾಳಿಯಾಗಿ ದೇಶದ ಆಥರ್ಿಕತೆ ಸಂಪೂರ್ಣವಾಗಿ ಹದಗೆಟ್ಟಿತ್ತು. ಆದರೆ ಅಲ್ಲಿನ ಜನರ ಹಾಗೂ ಸರಕಾರದ ಕ್ರಮದ ಫಲವಾಗಿ ಇಂದು ಜಪಾನ್ ವಿಶ್ವದ 2ನೇ ಬಲಿಷ್ಠ ಆಥರ್ಿಕತೆಯಾಗಿ ಬೆಳೆದಿದೆ. ಭಾರತದ ಮೇಲೆ ಆ ಬಾಂಬ್ ದಾಳಿಗಿಂತಲೂ ಕೆಟ್ಟದಾಗಿ ಕಾಂಗ್ರೇಸ್ ಭಾರತದ ಆಥರ್ಿಕತೆಯನ್ನು ನೆಲಕಚ್ಚಿಸಿದೆ. ಜಪಾನ್ ಮಾದರಿಯಲ್ಲಿ ನಾವು ಮೇಲೆ ಬರುತ್ತೇವೆ. ಜಪಾನ್ ಪ್ರವಾಸ ಮಾಡಿದ ಪ್ರಧಾನಿಗಳಿಗೆ ಅಲ್ಲಿನ ಪ್ರಧಾನಿ 2.15 ಲಕ್ಷ ಕೋಟಿ ಬಂಡವಾಳ ಹೂಡುವ ಭರವಸೆ ಕೊಟ್ಟಿರುವುದು ಒಳ್ಳೆಯ ದಿನಗಳ ನಮ್ಮ ಭರವಸೆಯ ಪ್ರಾರಂಭ. ಇತ್ತೀಚೆಗೆ ಘೋಷಣೆಯಾದ ಜನ-ಧನ್ ಯೋಜನೆ ಅನುಷ್ಠಾನಗೊಂಡು ಎರಡೇ ದಿನದೊಳಗೆ ಬರೋಬ್ಬರಿ 1.50 ಕೋಟಿ ನೂತನ ಖಾತೆಗಳು ತೆರೆಯಲಾಗಿದ್ದು, ಕೇಂದ್ರ ಸರಕಾರದ ಯೋಜನೆಗಳು ಸಾಮಾನ್ಯ ಜನರ ಪರವಾಗಿದೆ ಎಂಬುದು ರುಜುವಾತುಪಡಿಸುತ್ತದೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ರವರು ಘಖಿಔ ಸಭೆಯಲ್ಲಿ ಕೆಲವು ವಿಷಯಗಳು ಭಾರತದ ಸಾಮಾನ್ಯ ಜನರ ವಿರುದ್ಧ ಇದೆ ಎಂದು ಪ್ರತಿಭಟಿಸಿ ಸಹಿ ಹಾಕದೆ ಹಿಂದಿರುಗಿದ್ದು ಈ ಸರಕಾರದ ಜನಪರ ಕಾಳಜಿಯನ್ನು ಎತ್ತಿ ಹಿಡಿಯುತ್ತದೆ.
65 ವರ್ಷಗಳ ಹಿಂದೆ ಡಾ. ಶ್ಯಾಮ್ ಪ್ರಸಾದ್ ಮುಖರ್ಜಜಿಯವರು ರಾಷ್ಟ್ರೀಯ ಸಾಂಸ್ಕೃತಿಕ ಕಲ್ಪನೆಯ ಮೇಲೆ ಜನಸಂಘವನ್ನು ಸ್ಥಾಪಿಸಿದ್ದರು. ನಮ್ಮ ಸರಕಾರದ ಯೋಜನೆಗಳನ್ನು ನಾವು ಮನೆ-ಮನಕ್ಕೆ ಕಾರ್ಯಕರ್ತರಾಗಿ ತಲುಪಿಸಿದರೆ ಅವರ ಕಲ್ಪನೆ ಸಾಕಾರಗೊಳ್ಳುತ್ತದೆ. ನಾವೆಲ್ಲರು ಮುಂದಿನ ದಿವಸಗಳಲ್ಲಿ ಆ ಕಾರ್ಯವನ್ನು ಮಾಡುವ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.


