ಸುದ್ದಿ9ಕಾಸರಗೋಡು: ಕಳೆದ ಸೆಪ್ಟಂಬರ್ ಒಂದರಂದು ನಡೆದಿದ್ದ ಆರೆಸ್ಸೆಸ್ ಕಣ್ಣೂರು ವಲಯ ಶಾರೀರಿಕ್ ಪ್ರಮುಖ್ ಎಲ್ಲಂತೊಟ್ಟಿಲ್ ಮನೋಜ್ ಹತ್ಯೆ ಪ್ರಕರಣದ ಪ್ರಮುಖ ಸೂತ್ರಧಾರಿ ಸಿಪಿಐಎಂ ನಾಯಕ ವಿಕ್ರಮನ್(42) ನ್ಯಾಯಾಲಯಕ್ಕೆ ಶರಣಾಗತನಾಗಿದ್ದಾನೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಮನೋಜ್ ಓಮ್ನಿ ಕಾರ್ನಲ್ಲಿ ಕಣ್ಣೂರಿನ ಡೈಮಂಡ್ ಜಂಕ್ಷನ್ ಸಮೀಪ ಹೋಗುತ್ತಿದ್ದಾಗ ದುಷ್ಕಮರ್ಿಗಳು ಕಾರ್ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಬಳಿಕ ಮನೋಜ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೆತ್ತಿಕೊಂಡ ತನಿಖಾದಳ ವಿಕ್ರಮನ್ ಪ್ರಕರಣದ ಸೂತ್ರಧಾರಿ ಎನ್ನುವುದನ್ನು ಬಯಲು ಮಾಡಿತ್ತು. ಪೊಲೀಸರು ಶೋಧ ಕಾಯರ್ಾಚರಣೆ ತೀವ್ರಗೊಳಿಸುತ್ತಿದ್ದಂತೆ ಆರೋಪಿ ವಿಕ್ರಮನ್ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.
ವಿಕ್ರಮನ್ ಜೊತೆ ಇನ್ನೂ ಕೆಲವು ಮಂದಿ ಶಾಮೀಲಾಗಿದ್ದು ಅವರ ಹುಡುಕಾಟ ಮುಂದುವರಿದಿದೆ. ಮನೋಜ್ ಕೆಲವರ್ಷಗಳ ಹಿಂದೆ ನಡೆದಿದ್ದ ಸಿಪಿಐಎಂ ನಾಯಕನ ಕೊಲೆ ಪ್ರಕರಣದ ಆರೋಪಿಯಾಗಿದ್ದು ಇದೇ ಹಿನ್ನೆಲೆಯಲ್ಲಿ ಹತ್ಯೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

