ಸುದ್ದಿ9ಸುರತ್ಕಲ್: ಕಲೆಕ್ಷನ್ ವಿಚಾರಕ್ಕೆ ಸಂಬಂಧಿಸಿ ಮಂಗಳಮುಖಿಯರ ಎರಡು ಗುಂಪುಗಳು ಬೀದಿ ಜಗಳಕ್ಕೆ ಇಳಿದುದನ್ನು ಕಂಡ ಪೊಲೀಸರು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಮಂಗಳೂರಿನ ಕೂಳೂರು ಹಾಗೂ ಸುರತ್ಕಲ್ ಭಾಗದಲ್ಲಿ ವಾಸವಿರುವ ಎರಡು ಪ್ರತ್ಯೇಕ ಮಂಗಳಮುಖಿಯರ ತಂಡಗಳು ಸುರತ್ಕಲ್ ಪೇಟೆ ಹಾಗೂ ಸುತ್ತಮುತ್ತ ವಾರಕ್ಕೊಮ್ಮೆ ಅಂಗಡಿ ಮಾಲಕರಿಂದ ಹಣ ಕಲೆಕ್ಷನ್ ಮಾಡುತ್ತವೆ. ಈ ಹಿಂದೆಯೂ ಕೂಳೂರು ಭಾಗದ ಮಂಗಳಮುಖಿಯರು ಇಲ್ಲಿ ಬಂದು ಹಣ ಕಲೆಕ್ಷನ್ ಮಾಡುವುದಕ್ಕೆ ಸ್ಥಳೀಯ ಮಂಗಳಮುಖಿಯರು ಅಡ್ಡಿಪಡಿಸಿದ್ದರು. ಶುಕ್ರವಾರ ಮತ್ತೆ ಬೇರೊಂದು ಗುಂಪು ಹಣ ಕಲೆಕ್ಷನ್ ಮಾಡಲು ಮುಂದಾದಾಗ ಸುರತ್ಕಲ್ ಪರಿಸರದಲ್ಲಿ ಹಣ ಸಂಗ್ರಹ ಮಾಡುವ ಮಂಗಳಮುಖಿಯರು ಅಡ್ಡಿಪಡಿಸಿದ್ದಾರೆ.
ಸುರತ್ಕಲ್ ಜಂಕ್ಷನ್ನಲ್ಲಿ ಎರಡೂ ಗುಂಪುಗಳು ಬೀದಿ ಜಗಳಕ್ಕೆ ಮುಂದಾದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಪೊಲೀಸರು ಎರಡೂ ತಂಡಗಳ ಸದಸ್ಯರನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಸುರತ್ಕಲ್ ಪರಿಸರದಲ್ಲಿ ನಿದರ್ಿಷ್ಟ ದಿನಗಳಲ್ಲಿ ಯಾರು ಬೇಕಾದರೂ ಕಲೆಕ್ಷನ್ ಮಾಡಿ, ಆದರೆ ಇದರಿಂದ ನಾಗರಿಕರಿಗೆ ಮತ್ತು ಅಂಗಡಿ ಮಾಲಕರಿಗೆ ತೊಂದರೆ ಉಂಟಾಗಬಾರದೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಒಪ್ಪಿಕೊಂಡು ಠಾಣೆಯಿಂದ ಎರಡೂ ತಂಡಗಳು ನಿರ್ಗಮಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

555p

By suddi9

Leave a Reply

Your email address will not be published. Required fields are marked *