ಬಂಟ್ವಾಳ: ಪಾಣೆಮಂಗಳೂರಿನ ಹಿಂದೂ ಸ್ಮಶಾನ ಸಮಿತಿ ವತಿಂಯಿಂದ ಸುಮಾರು 14 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ದೇವರ ಅವಭೃಥ” ಅಟಲ್ ಸ್ನಾನಘಟ್ಟ” ದ ಲೋಕಾರ್ಪಣೆಗೊಂಡಿತು.            ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಸ್ನಾನ ಘಟ್ಟದಲ್ಲಿ ಬಾಗಿನ ಅರ್ಪಿಸಿ ಲೋಕಾರ್ಪಣೆಗೈದರು.

IMG-20190203-WA0110ಬಳಿಕ ಮಾತನಾಡಿದ ಅವರು, ಮೊಗರ್ನಾಡು ಸೀಮೆ ದೇವರಾದ ಮೊಗರ್ನಾಡು ಸೀಮೆ ದೇವರಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಅವಭೃತ ಸ್ನಾನ,  ಶ್ರೀ ಗಣೇಶೋತ್ಸವ ಹಾಗೂ ಶ್ರೀ ಶಾರದಾ ಪೂಜಾ ಸಂದರ್ಭದಲ್ಲಿ ವಿಗ್ರಹಗಳನ್ನು ಜಲಸ್ತಂಭನ ಸಹಿತ ವಿವಿಧ ಧಾರ್ಮಿಕ ಆಚರಣೆಯ ಉದ್ದೇಶದಿಂದ ಊರ ಪ್ರಮುಖರು ಸೇರಿ  ಸ್ನಾನಘಟ್ಟವಾಗಿ ನಿರ್ಮಿಸಿರುವ ಕಾರ್ಯ ಅಭಿನಂದನೀಯವಾಗಿದೆ ಎಂದರು. IMG-20190203-WA0109

ಸಮಾರಂಭದ ಅಧ್ಯಕ್ಷತೆಯನ್ನು ಪಾಣೆಮಂಗಳೂರು ಶ್ರೀ ವೀರ ವಿಠಲ ದೇವಳದ ಆಡಳಿತ ಮೊಕ್ತೇಸರರಾದ ಪಿ. ರಘುವೀರ ಭಂಡಾರ್‌ಕರ್ ವಹಿಸಿದ್ದರು.ಮೊಗರ್ನಾಡು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ  ವೇದಮೂರ್ತಿ  ಎಮ್. ಜನಾರ್ಧನ ಭಟ್, ರಾ.ಹೆ.ಪ್ರಾ.ಇಂಜಿನಿಯರ್ ಉಮೇಶ್ ಭಟ್, ಶ್ರೀ ಸತ್ಯದೇವತಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಲೋಕೇಶ್ ಪಿ.ಜೆ. ,ಉದ್ಯಮಿ ಗೋಪಾಲಕೃಷ್ಣ ಆಚಾರ್ಯ, ಮಾಜಿ ಪುರಸಭಾ ಸದಸ್ಯ ಪಾಂಡುರಂಗ ಪ್ರಭು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ  ಪ್ರಸನ್ನ ಕೋರ‍್ತಿ ಇವರಿಂದ ಭಜನಾ ಸಂಧ್ಯಾ ಕಾರ್ಯಕ್ರಮ,

By suddi9

Leave a Reply

Your email address will not be published. Required fields are marked *