ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ), ಧೂಮಾವತಿ ಬಂಟ ಪರಿವಾರ ದೈವಗಳ ದೈವಸ್ಥಾನದಲ್ಲಿ ಫೆ. 7ರವರೆಗೆ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ನಿಮಿತ್ತ ನಿರ್ಮಿಸಲಾದ ದೈವಗಳ ಹೊಸ ಮಂಚಗಳನ್ನು ಭಾನುವಾರ ಸಂಜೆ ವಾಮಂಜೂರಿನಿಂದ ದೈವಸ್ಥಾನಕ್ಕೆ ತರಲಾಯಿತು.ಜೋಕಟ್ಟೆಯ ಪ್ರಭಾಕರ ಆಚಾರ್ಯ(ವಾಸ್ತುಶಿಲ್ಪಿ) ಕಾರ್ಯಾಗಾರದಲ್ಲಿ ನಿರ್ಮಿಸಲಾದ ದೈವಗಳ ಐದು ಮಂಚ ಹಾಗೂ ಎರಡು ಮಂಡಿಗೆಯನ್ನು ವಾಮಂಜೂರಿನ ಶ್ರೀ ರಾಮ ಭಜನಾ ಮಂದಿರಕ್ಕೆ ತರಲಾಯಿತು. ಬಳಿಕ ಅಲ್ಲಿಂದ ಸಾವಿರಾರು ಭಕ್ತರ ಸಮೂಹದ ಮೆರವಣಿಗೆಯೊಂದಿಗೆ ಗುರುಪುರ ವೈದ್ಯನಾಥ ದೈವಸ್ಥಾನಕ್ಕೆ ತರಲಾಯಿತು.4vpmundithaya
ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಂದರ್ಭದಲ್ಲಿ ಜಗದೀಶ ಶೇಣವ(ಹಿಂದೂ ಮುಖಂಡ), ಓಂ ಪ್ರಕಾಶ್ ಶೆಟ್ಟಿ(ಉದ್ಯಮಿ), ಚಂದ್ರಹಾಸ ರೈ(ಆಡಳಿತ ಮೊಕ್ತೇಸರ, ವಾಮಂಜೂರು ಅಮೃತೇಶ್ವರ ದೇವಸ್ಥಾನ), ಪ್ರಮೋದ್ ಕುಮಾರ್ ರೈ ದೊಣಿಂಜೆಗುತ್ತು(ಆಡಳಿತ ಮೊಕ್ತೇಸರ, ಮುಂಡಿತ್ತಯ ದೈವಸ್ಥಾನ),ಟಿ.ಸುಕುಮಾರ ಶೆಟ್ಟಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು,ಡಾ. ರವಿ ಶೆಟ್ಟಿ ಕತ್ತಾರ್, ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಕಿಟ್ಟಣ್ಣ ರೈ,ಪ್ರವೀಣ್ ಶೆಟ್ಟಿ ಬೆಳ್ಳಿಪಾಡಿಗುತ್ತು, ಸದಾನಂದ ಗಾಂಭೀರ್, ಪುರುಷೋತ್ತಮ ಮಲ್ಲಿ ಹಾಗೂ ದೈವದ ಪರಿಚಾರಕರು, ಬ್ರಹ್ಮಕಲಶೋತ್ಸ ನಿರ್ವಹಣೆಯ ಸ್ವಯಂಸೇವಕರು ಪಾಲ್ಗೊಂಡಿದ್ದರು.

gur-feb-4-chendenada
ಮೆರವಣಿಗೆಯಲ್ಲಿ ನೂರಾರು ವಾಹನಗಳು  ಪೆರ್ಮಂಕಿ ಗುರು ದೇವ ಚೆಂಡೆ ಬಳಗದಿಂದ ವಿಶಿಷ್ಟ ಚೆಂಡ-ನೃತ್ಯ ಸಮೂಹ, ಬ್ಯಾಂಡ್, ಓಲಗ ಮೇಳೈಸಿದ್ದು, ರಸ್ತೆಯ ಇಕ್ಕೆಲಗಳಲ್ಲಿದ್ದ ಸಾವಿರಾರು ಭಕ್ತರು ದೈವಗಳ ಮಂಚಕ್ಕೆ (ಪೀಠ) ಪ್ರಾರ್ಥನೆ ಸಲ್ಲಿಸಿದರು.
ತಂತ್ರಿಗಳು, ಸ್ವಾಮೀಜಿ, ಗುತ್ತಿನವರು, ಸೇವಾ ಮನೆತನದವರು ಹಾಗೂ ವ್ಯವಸ್ಥಾಪನಾ ಸಮಿತಿಯವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಸನ್ಮಾನ ಜರುಗಿತು. ಬಳಿಕ ಪ್ರಶಾಂತ್ ಗುರುಪುರ ಸಾರಥ್ಯದಲ್ಲಿ `ನಂಬೆರಲತ್ತ್ ಬುಡಿಯರಲತ್ತ್’ ತುಳು ನಾಟಕ ಪ್ರದರ್ಶನಗೊಂಡಿತು. ಇದೇ ವೇಳೆ ಸುಧೀರ್ ಕಾಮತ್ ನಿರ್ಮಾಣ, ಜಿ ಎಸ್ ಗುರುಪುರ ಸಾಹಿತ್ಯ ರಚನೆ ಹಾಗೂ ವಿ ಜೆ ಮಧುರಾಜ್ ಹಾಡಿದ `ಗುರುಪುರ ಮುಂಡಿತ್ತಾಯನ ಭಕ್ತಿದ ಸುಗಿಪು’ ಹಾಡಿನ ವೀಡಿಯೋ ಮುದ್ರಣ ಬಿಡುಗಡೆಗೊಳಿಸಲಾಯಿತು.

By suddi9

Leave a Reply

Your email address will not be published. Required fields are marked *