ಬಂಟ್ವಳ:ತಾಲ್ಲೂಕಿನ ಸಿದ್ಧಕಟ್ಟೆ ಕರ್ಪೆ ಸಮೀಪದ ಶಾಂತಿಮನೆ ಎಂಬಲ್ಲಿ ಕೂಲಿ ಕಾರ್ಮಿಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಮೃತರನ್ನು ಇಲ್ಲಿನ ನಿವಾಸಿ ಶರವಣ(40) ಎಂದು ಗುರುತಿಸಲಾಗಿದೆ. ಮೂಲತಃ ತಮಿಳ್ನಾಡು ನಿವಾಸಿ ಆಗಿದ್ದ ಇವರು ಕಳೆದ ಹಲವಾರು ವರ್ಷಗಳಿಂದ ಕರ್ಪೆಯಲ್ಲಿ ನೆಲೆಸಿ ತೆಂಗಿನಕಾಯಿ ಕೀಳುವ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಮೃತರಿಗೆ ಪತ್ನಿ ಮತ್ತು ಪುಟ್ಟ ಮಗು ಇದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *