ಉಡುಪಿ: ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವೊಂದರ ಭೋಜನ ತಯಾರಿಕೆಗೆಂದು ಮಾರುಕಟ್ಟೆಯಿಂದ ತಂದ ಸುವರ್ಣ ಗಡ್ಡೆ ರಾಶಿಯಲ್ಲಿ ಕಂಡು ಬಂದ ಆಮೆ ಆಕೃತಿಯನ್ನು ಹೊಲುವ ಸುವರ್ಣ ಗಡ್ಡೆ ಇದು. ಇದನ್ನು ಗಮನಿಸಿದ ಪಾಕಶಾಲೆಯಲ್ಲಿ ಅಡಿಗೆ ತಯಾರಿಕೆಯಲ್ಲಿ ನಿರತರಾದ ಬಾಣಸಿಗರು, ಆಮೆ ಆಕೃತಿಯ ಸುವರ್ಣ ಗಡ್ಡೆಯನ್ನು ಒಂದಿಷ್ಟು ಜನರಿಗೆ ತೋರಿಸಿ ಸಂತೋಷಗೊಳಿಸಿದರು.
ತರಕಾರಿಗಳಲ್ಲಿ ಜೀವ ವೈವಿದ್ಯತೆಗಳ ತದ್ರೂಪಗಳು, ವೈಚಿತ್ರ್ಯಗಳು ಕಂಡು ಬರುತ್ತಲೇ ಇರುತ್ತವೆ. ಬಾಣಸಿಗ ವೃತ್ತಿಯವರಾದ ನಮಗೆ ಇಂತಹ ಪ್ರಾಕೃತಿಕ ವಿಸ್ಮಯಗಳನ್ನು ಕಾಣುತ್ತಲೇ ಇರುತ್ತವೆ ಎಂದು ಉಡುಪಿಯ ಪಾಕತಜ್ಞ ಚಿತ್ಪಾಡಿ ಶ್ರೀನಿವಾಸ ಬಲ್ಲಾಳರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಬರಹ:- ತಾರಾನಾಥ್ ಮೇಸ್ತ ಶಿರೂರು
