ಮಂಗಳೂರು:“ಫಾರ್ಮಾ ಫ್ರೆಂಡ್ಸ್ ಅರ್ಪಿಸುವ ಫಾರ್ಮೋತ್ಸವ 2019 “ಇದರ 12ನೇ ವರ್ಷದ ವಾರ್ಷಿಕೋತ್ಸವದ ಉದ್ಘಾಟನೆಯು ಜತ್ತನ್ನ ಹಾಲ್ ಬಲ್ಮಠ ಇದರ ಮೈದಾನದಲ್ಲಿ ಭಾನುವಾರ ನೆರವೇರಿತು.
ಕ್ರೀಡೋತ್ಸವದ ಉದ್ಘಾಟನೆಯನ್ನು ರಾವ್ ಎಸೋಸಿಯೇಟ್ಸ್ , ದೀಪಜ್ಯೋತಿ ಎಂಟರ್ ಪ್ರೈಸಸ್ ಇದರ ಮಾಲಕತ್ವದ ಎನ್ ವೇದವತಿ ರಾವ್ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಫಾರ್ಮಾ ಫ್ರೆಂಡ್ಸ್‍ಇದರ ಅಧ್ಯಕ್ಷ ಸುರೇಶ್ ಅಂಚನ್ ವಹಿಸಿದ್ದರು.1-1

1-2

1-08

ಫಾರ್ಮಾ ಫ್ರೆಂಡ್ಸ್ ಮಂಗಳೂರು ಆರಂಭಗೊಂಡು ಇದೀಗಲೇ 11 ವರ್ಷ ಕಳೆದಿದ್ದು 12ನೇ ಸಂವತ್ಸರ ನಡೆಯುತ್ತಿದೆ. ಇದು ಎಲ್ಲ ಔಷಧ ಕ್ಷೇತ್ರದಲ್ಲಿ ದುಡಿಯುತ್ತಿರುವವರೇ ಸೇರಿ ನಡೆಸಿದ ಸಂಸ್ಥೆಯಾಗಿದ್ದು, ಬಹಳ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಒಂದೊಂದು ಅಸೋಷಿಯೇಶನ್ ಇದ್ದು, ಆದರೆ ಓಷಧ ಕ್ಷೇತ್ರದಲ್ಲಿ ದುಡಿಯುತ್ತಿರುವವರಲ್ಲಿ ಅಸೋಶಿಯೇಶನ್ ಇರಲಿಲ್ಲ. ಇದಕ್ಕಾಗಿಯೇ ಈ ಕ್ಷೇತ್ರದವರೆಲ್ಲಾ ಒಟ್ಟು ಸೇರಿ `ಫಾರ್ಮಾ ಫ್ರೆಂಡ್ಸ್’ ಸಂಸ್ಥೆಯನ್ನು ಕಟ್ಟಿದ್ದು ಇದೀಗ ಅದು ಸಾಕಷ್ಟು ಬೆಳೆದು ನಿಂತಿದೆ.
ಈ ದೇಶಕ್ಕೆ ಔಷಧ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಕೊಡುಗೆ ಸಾಕಷ್ಟಿದೆ. ಈ ಕ್ಷೇತ್ರದಲ್ಲಿ ದುಡಿಯುತ್ತಿರುವುದೆಂದರೆ ಅವರಿಗೆ ಸಾಕಷ್ಟು ಜವಾಬ್ದಾರಿ ಇದೆ. ಬೇರೆ ಕ್ಷೇತ್ರದ ಹಾಗೆ ಈ ಕ್ಷೇತ್ರವಲ್ಲ. ಹೀಗಾಗಿ ಔಷಧ ಕ್ಷೇತ್ರದಲ್ಲಿನ ಉದ್ಯಮಿಗಳು, ಮಾರಾಟಗಾರರು, ರಿಟೈಲರ್, ಹೋಲ್‍ಸೇಲರ್, ಸಿಬ್ಬಂದಿ ವರ್ಗ ಹೀಗೆ ಎಲ್ಲರನ್ನೂ ಸೇರಿಸಿ ಈ ಸಂಸ್ಥೆಯನ್ನು ಕಟ್ಟಲಾಗಿದೆ. ವರ್ಷವಿಡೀ ದುಡಿದು ಚಿಂತೆಗೊಂಡವರಿಗೆ ಉಲ್ಲಾಸ ನೀಡಲೆಂದು, ಈ ಕ್ಷೇತ್ರದಲ್ಲಿರುವವರನ್ನು ಮೇಲೆತ್ತುವ ಸಲುವಾಗಿ ಈ ಸಂಸ್ಥೆ ಕೆಲಸ ಮಾಡುತ್ತಿದೆ. ಇದರ ಸವಿನೆನಪಿಗಾಗಿ ವರ್ಷಂಪ್ರತಿ `ಫಾರ್ಮೋತ್ಸವ’ವನ್ನು ಬಹಳ ಅದ್ಧೂರಿಯಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

1-09

ಈ ಬಗ್ಗೆ ಸಂಸ್ಥೆಯ ಗೌರವ ಸಲಹಗಾರ ಅಜಂತ್ ಪಿಲಾರ್ ಸುದ್ದಿ9 ಜೊತೆ ತಮ್ಮ ಅಭಿಪ್ರಾಯ ಹಂಚಿದ್ದು ಹೀಗೆ:
ಅಜಂತ್ ಪಿಲಾರ್: ದಕ ಜಿಲ್ಲೆಯ ಎಲ್ಲಾ ಔಷಧಿಯ ಹೋಲ್‍ಸೇಲರ್ ಹಾಗೂ ರಿಟೈಲರ್ಸ್, ಮಾಲಕರು ಹಾಗೂ ಸಿಬ್ಬಂದಿ ಎಲ್ಲರೂ ಒಂದೇ ಕುಟುಂಬ ಎನ್ನುವಂತೆ ಒಟ್ಟು ಸೇರಿ ಸ್ಪೋಟ್ರ್ಸ್, ಪ್ರತಿಭಾ ಅನ್ವೇಷನೆ, ಸಾಧಕರಿಗೆ ಸನ್ಮಾನ ನಡೆಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಈ ಬಾರಿಯೂ ನಡೆಯುತ್ತಿದೆ. ಮೆಡಿಕಲ್ ಸ್ಟೋರ್ ಕೆಲಸ ಮಾಡುವ ಮಾಲಕರು ಹಾಗೂ ಸಿಬ್ಬಂದಿಗೆ ಸಿಬ್ಬಂದಿ ವರ್ಷವಿಡೀ ಯಾವ ಕಾರ್ಯಕ್ರಮವೂ ಇರಲಿಲ್ಲ. ಈ ಕ್ಷೇತ್ರ ಸಾಕಷ್ಟು ಜವಾಬ್ದಾರಿಯುತವಾಗಿರುವುದರಿಂದ ಮನಸ್ಸಿಗೆ ಉಲ್ಲಾಸವೂ ಇರಲಿಲ್ಲ. ಎಲ್ಲಾ ಸಂಸ್ಥೆಗಳಲ್ಲೂ ಅಸೋಶಿಯೇಷನ್ ಇದ್ದು ಅದೇ ರೀತಿ ನಮ್ಮಲ್ಲೂ ಇರಬೇಕೆಂದು ಈ ಸಂಸ್ಥೆ ನಿರ್ಮಿಸಲಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

1-010

ಸಂಸ್ಥೆಯ ಜಮಾಲ್ ಎಕೆಎನ್ ಜಮಾಲ್ ಮಾತಾಡಿ, ಬೇರೆ ಅಸೋಶಿಯೇಷನ್‍ಗೆ ಹೋಲಿಸಿದರೆ ನಮ್ಮ ಕಾರ್ಯಕ್ರಮ ವಿಶಿಷ್ಠವಾಗಿದೆ. ಎಲ್ಲರನ್ನೂ ಒಟ್ಟು ಸೇರಿಸಿ ಸಾಂಸ್ಕøತಿಕ, ಕ್ರೀಡಾ ಕಾರ್ಯಕ್ರಮ ಆಯೋಜಿಸಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದೇವೆ ಎಂದಿದ್ದಾರೆ.
ಸಂಂಸ್ಥೆಯ ಅಧ್ಯಕ್ಷರಾದ ಸುರೇಶ್ ಅಂಚನ್ ಮಾತಾಡಿ, ಅಸೋಯೇಶನ್ ಚೆನ್ನಾಗಿ ಮುಂದುವರಿಯುತ್ತಿದ್ದು, ಎಲ್ಲರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಮುಖ್ಯ ಅತಿಥಿಯಾಗಿ ಗೋಪಾಲ್ ಕಾಮತ್ & ಕಂಪೆನಿ ಇದರ ಮಾಲಕ ಶ್ರೀಧರ್ ಕಾಮತ್, ಜಿ.ಕೆ.ಫಾರ್ಮಾ ಮಾಲಕ ಗಣೇಶ್ ಕಾಮತ್, ರಾವ್ ಎಸೋಸಿಯೆಟ್ಸ್ ಮಾಲಕಅಶೋಕ್ ರಾವ್, ನಾಯಕ್ ಡಿಸ್ಟ್ರಿಬ್ಯೂಟರ್ಸ್ ಮಾಲಕ ಸುನೀಲ್ ನಾಯಕ್, ಫಾರ್ಮಾಪ್ರಮೋಟರ್ಸ್ ಮಾಲಕ ಆಸ್ವಿನ್ ಡಿ”ಸೋಜಾ, ಬೀಟಾ ಏಜೆನ್ಸಿ ಮಾಲಕ ಎನ್ ಜಿ.ಮೋಹನ್, ಸೂರ್ಯ ಲೈಫ್ ಕೇರ್ ಶರತ್ ಆಳ್ವ, ವಸುಂಧರ ಮೆಡಿಕಲ್ಸ್ ಮಾಲಕ ಎನ್ ಗೋಪಾಲಕೃಷ್ಣ ಭಟ್, ಗಣೇಶ್ ಡ್ರಗ್ಸ್ &ಸುಧಾ ಏಜೆನ್ಸಿ ಸತೀಶ್ ಲೋಬೋ, ಮಜೆಲಾ ಫಾರ್ಮಾ ಮಾಲಕ ಲೂಯಿಸ್ ಫೆರ್ನಾಂಡಿಸ್ , ಮೆಡಿಕೇರ್ ಫಾರ್ಮಾ ಮಾಲಕ ದಿನೇಶ್ ನಾಯರ್ ಹಾಗೂ ಫಾರ್ಮಾ ಫ್ರೆಂಡ್ಸ್ ಇದರ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಝೀ ಕನ್ನಡದ ಡ್ರಾಮಾ ಜ್ಯೂನಿಯರ್ ಸೀಸನ್-3ರ ಮಂಗಳೂರಿನ ಬಹುಮುಖ ಪ್ರತಿಭೆ ಆನ್ವಿಷಾ ವಾಮಂಜೂರು ಅವರ ನೃತ್ಯ ಪ್ರದರ್ಶನಗೊಂಡಿತು. ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ, ಫಾರ್ಮಾ ಬಂಧುಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಹೀಗೆ ಹಲವು ಕಾರ್ಯಕ್ರಮಗಳು ನಡೆದವು.

1-06
1-04

1-03

1-02

1-01

1-06

1-05ಫಾರ್ಮಾಫ್ರೆಂಡ್ಸ್ ಇದರ ಸಂಸ್ಥಾಪಕ ಅಜಂತಾ ಪಿಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣ ಪೊನ್ನೆತ್ತೋಡು ನಿರೂಪಿಸಿದರು.ಜಮಾಲ್ ವಂದಿಸಿದರು.

By suddi9

Leave a Reply

Your email address will not be published. Required fields are marked *