ಕೈಕಂಬ: ಹಿಂದೂ ಸೇವಾ ಸಮಿತಿ ಬಾರ್ದಿಲ ಕಲ್ಲಾಡಿ ಕುಪ್ಪೆಪದವು ಇದರ ದಶಾಮಾನೋತ್ಸವ ಸಮಾರಂಭ ಸೋಮವಾರ ನಡೆಯಲಿದೆ. ಮಧ್ಯಾಹ್ನ ಸಾರ್ವಜನಿಕ ಸತ್ಯಾನಾರಾಯಣ ಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ಪಾಡುರಂಗ ಪಡ್ರಮೆ ಇವರಿಂದ ಕೊಳಲುವಾದನ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, 7.30ರಿಂದ ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ದಿವಂಗತ ಸೈನಿಕ ಗಿರೀಶ್ ಪೂಜಾರಿಯವರ ಮಾತೃಶ್ರೀ ಮೋಹಿನಿ ನಂದಾಡಿ ಮತ್ತು ಫ್ಲೋರ್‍ಬಾಲ್ ಆಟಗಾರ್ತಿ ಆಶಿಕಾ ವೈ. ಕೋಟ್ಯಾನ್ ಕಲ್ಲಾಡಿ ಇವರನ್ನು ಸಮ್ಮಾನಿಸಲಾಗುವುದು, 9.30ರಿಂದ `ಭಗವತಿ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ.
