ಬಂಟ್ವಾಳ : ಕಳೆದೆರಡು ವರ್ಷಗಳಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಹಾಕಾಳಿ ಬೆಟ್ಟು , ಬರಿಮಾರು ಗ್ರಾಮದ ನಿವಾಸಿ ದಯಾನಂದ ಪೂಜಾರಿ (34) ಚಿಕಿತ್ಸೆಗಾಗಿ ಸಹೃದಯ ದಾನಿಗಳು ನೆರವಿಗಾಗಿ ಪ್ರಾರ್ಥಿಸಿದ್ದಾರೆ.ಎಲೆಕ್ಟ್ರಿಷಿಯನ್ ಆಗಿ ದಿನಕೆಲಸ ಮಾಡುತ್ತಿದ್ದ ದಯಾನಂದ್ ಅವರು ತಮ್ಮ ಮನೆಯ ಆಧಾರ ಸ್ತಂಭವಾಗಿ ಇದ್ದರು. ಆದರೆ ತಮ್ಮ ಎರಡೂ ಕಿಡ್ನಿಯ ವೈಫಲ್ಯ ದಿಂದ ಇದೀಗ ಕೆಲಸಕ್ಕೂ ಹೋಗಲು ಆಗದೆ ಕಷ್ಟವನ್ನು ಅನುಭವಿಸುತ್ತಿದ್ದಾರೆ.2201btrbph2 Dayaanda
ತಂದೆ ತಾಯಿಗೆ ಒಬ್ಬನೇ ಮಗನಾಗಿ ಸಂಸಾರ ನಡೆಸುತ್ತಿದ್ದ ಇವರು ಕಳೆದ ಐದು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟು 4 ವರ್ಷದ ಮಗುವನ್ನು ಹೊಂದಿರುತ್ತಾರೆ. ತಂದೆ ತಾಯಿಯ ಅನಾರೋಗ್ಯದೊಂದಿಗೆ ತಮ್ಮ ಈ ಕಿಡ್ನಿ ವೈಫಲ್ಯದ ಬಗ್ಗೆ ತೀವ್ರ ಮನನೊಂದಿರುವ ಈ ಕುಟುಂಬಕ್ಕೆ ಸಹಾಯ ಮಾಡುವ ಕರ್ತವ್ಯ ಈಗ ಸಮಾಜದ್ದಾಗಿದೆ.
ತನ್ನ ಗಂಡನ ಎರಡೂ ಕಿಡ್ನಿಯ ವೈಫಲ್ಯದಿಂದ ನೊಂದಿರುವ ಅವರ ಪತ್ನಿ ತನ್ನ ಒಂದು ಕಿಡ್ನಿಯನ್ನು ನೀಡಲು ಮುಂದಾಗಿರುತ್ತಾರೆ. ಆದರೆ ಈ ಕಿಡ್ನಿ ಟ್ರಾನ್ಸ್ ಪ್ಲಾಂಟಿಗೆ ಸುಮಾರು ಹತ್ತು ಲಕ್ಷಕ್ಕಿಂತಲೂ ಅ„ಕ ಹಣ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿರುವುದರಿಂದ ಸಹೃದಯ ದಾನಿಗಳ ನೆರವನ್ನು ಈ ಬಡ ಕುಟುಂಬದ ನಿರೀಕ್ಷಿಸುತ್ತದೆ.
ಎರಡೂ ಕಿಡ್ನಿ ವೈಫಲ್ಯದಿಂದ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಹಾಗೂ ಔಷ„ಯ ಹಣಕ್ಕೆ ತುಂಬಾ ಕಷ್ಟ ಪಡುತ್ತಿದ್ದ ಕುಟುಂಬಕ್ಕೆ ಬರಿಮಾರು ಊರಿನ ಜನರು ಸಾಕಷ್ಟು ಸಹಾಯ ಮಾಡಿರುತ್ತಾರೆ, ಆದರೆ ಈ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆಗೆ ಹತ್ತು ಲಕ್ಷಕ್ಕೂ ಅ„ಕ ಹಣ ಬೇಕಾಗಿರುವುದರಿಂದ ಸಮಾಜದ ಜನರು ಹೆಚ್ಚಿನ ಸಹಾಯ ಮಾಡಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ.
ದಾನಿಗಳು ಆರ್ಥಿಕ ಸಹಾಯ ಮಾಡಿದರೆ ಅವರ ಧರ್ಮಪತ್ನಿ ಯ ಒಂದು ಕಿಡ್ನಿಯನ್ನಾದರೂ ಜೋಡಣೆ ಮಾಡಿಸಿ ಅವರ ಮತ್ತು ಅವರ ಕುಟುಂಬದ ಜೀವನ ನಿರ್ವಹಣೆ ಮಾಡಲು ದಯಾನಂದ್ ಅವರನ್ನು ಶಕ್ತರನ್ನಾಗಿಸಬಹುದು.
ಅವರ ವಿಜಯ ಬ್ಯಾಂಕ್ ಕಲ್ಲಡ್ಕ ಶಾಖೆ, ಖಾತೆ ಸಂಖ್ಯೆ 110501011007515, ಐಎಫ್‍ಎಸ್‍ಸಿ ್ಖಐಒಆ0001105 ಇಲ್ಲಿಗೆ ಒದಗಿಸಲು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದಯಾನಂದ : 9741032128
ಸದಾನಂದ್ ಪೂಜಾರಿ ಬರಿಮಾರ್ : 9480626440
ಉಮೇಶ್ : 9449367986

By suddi9

Leave a Reply

Your email address will not be published. Required fields are marked *