ಬಂಟ್ವಾಳ:ಇಲ್ಲಿನ ಇತಿಹಾಸ ಪ್ರಸಿದ್ಧ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಮೂರು ದಿನಗಳ ವಾರ್ಷಿಕ ಜಾತ್ರಾ ಮಹೋತ್ಸವ ಭಾನುವಾರ ರಾತ್ರಿ ಸಂಭ್ರಮ ಸಡಗರದಿಂದ ಸಮಾರೋಪಗೊಂಡಿತು. ಇಲ್ಲಿನ ವಿಶಾಲವಾದ ಬಾಕಿಮಾರು ಗದ್ದೆಗೆ ಎತ್ತರದ ಗರಡಿಯಿಂದ ಕೋಟಿ-ಚೆನ್ನಯರು ಇಳಿಯು ದೃಶ್ಯ ವೀಕ್ಷಿಸಲು ಜಿಲ್ಲೆಯ ವಿವಿಧೆಡೆಯಿಂದ ಸಹಸ್ರಾರು ಮಂದಿ ಭಕ್ತರು ಆಗಮಿಸಿದ್ದರು. ಇದೇ ವೇಳೆ ಸರತಿ ಸಾಲಿನಲ್ಲಿ ನಿಂತು ಭಕ್ತರು ಕೋಟಿ-ಚೆನ್ನಯರು ಸಹಿತ ಬ್ರಹ್ಮ ಬೈದರ್ಕಳರಿಗೆ ಹೂಹಾರ ಹರಿಕೆ ಸಲ್ಲಿಸಿದರು.23btl-Panjikal
ಆಡಳಿತ ಮೊಕ್ತೇಸರೆ ಚಂದನಾದೇವಿ ಡಾ.ಎನ್.ಪದ್ಮರಾಜ್ ಜೈನ್, ಪ್ರಮುಖರಾದ ಶ್ರೀಪತಿ ಭಟ್ ಪುಂಚೋಡಿ, ಭರತ್ ಕುಮಾರ್ ಜೈನ್, ರಘುಚಂದ್ರ ಚೌಟ, ಕೋಟಿ ಪೂಜಾರಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಕುಮಾರ್ ಜೈನ್ ಪೀರ್ದಬೆಟ್ಟು, ಅಧ್ಯಕ್ಷ ಕೆ.ಎನ್.ಶೇಖರ್ ಮತ್ತಿತರರು ಇದ್ದರು.23btl-Jana
ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ತುಂಗಪ್ಪ ಬಂಗೇರ, ಬಿ.ಪದ್ಮಶೇಖರ ಜೈನ್, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ಮತ್ತಿತರ ಗಣ್ಯರು ಭೇಟಿ ನೀಡಿದರು.

By suddi9

Leave a Reply

Your email address will not be published. Required fields are marked *