ಗುರುಪುರ: ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್ (ರಿ.) ಉಳಾಯಿಬೆಟ್ಟು ಇದರ ಬೆಳ್ಳಿಹಬ್ಬ ಹಾಗೂ ಕಟ್ಟಡ ದಶಮಾನೋತ್ವ ಕಾರ್ಯಕ್ರಮವು ಜ.20ರ ಆದಿತ್ಯವಾರ ಅದ್ಧೂಯಾಗಿ ಜರಗಿತು. ಬೆಳಿಗ್ಗೆ ಗಣಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ಸಂಜೆ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕøಕ ವಿನೋದಾವಳಿಗಳು, ಸಭಾ ಕಾರ್ಯಕ್ರಮ ಹಾಗೂ ನಮ್ಮ ಕಲಾವಿದೆರ್ ಬೆದ್ರ ಇವರಿಂದ `ಪಾಂಡುನ ಅಲಕ್ಕ ಪೋಂಡು’ ಎಂಬ ನಾಟಕ ಪ್ರದರ್ಶನ ಜರುಗಿತು.23vpulayibettu

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತ್ ಕುಮಾರ್ ಪೆರ್ಮಂಕಿ ವಹಿಸಿದ್ದರು. ಉದ್ಘಾಟನೆ ನೆರವೇರಿಸಿ ಮಾತಾಡಿದ ಧಾರ್ಮಿಕ ಪರಿಷತ್ ಸದಸ್ಯರಾದ ಪದ್ಮನಾಭ ಕೋಟ್ಯಾನ್ ಕ್ಲಬ್‍ನ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು.
ಮುಖ್ಯ ಅತಿಥಿಯಾಗಿ ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿ ಮಾತನಾಡಿ, ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್ ಸಮಾಜಮುಖಿ ಕಾರ್ಯಗಳಿಗೆ ಹೆಸರುವಾಸಿ. ಈ ಸಂಘವು ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ನಾನು ಯಾರಿಗೂ ಯಾವುದೇ ಭರವಸೆ ನೀಡುವವನಲ್ಲ. ನಾನು ಫುಲ್‍ಟೈಮ್ ರಾಜಕಾರಣಿಯೂ ಅಲ್ಲ. ಆದರೆ ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್‍ನ ಕೆಲಸ ಕಾರ್ಯ ಮೆಚ್ಚುವಂತದ್ದು. ಅವರ ಎಲ್ಲ ಕಾರ್ಯಚಟುವಟಿಕೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಯಾವುದೇ ಸಮಸ್ಯೆಯಿದ್ದರೂ ಅದನ್ನು ನೆರವೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಗುರುಪುರ ಬಂಟರ ಮಾತೃಸಂಘದ ಅಧ್ಯಕ್ಷರಾದ ರಾಜ್‍ಕುಮಾರ್ ಶೆಟ್ಟಿ ತಿರುವೈಲುಗುತ್ತು ಮಾತನಾಡಿ ಕಾರ್ಯಕ್ರಮ ಯಾವ ರೀತಿ ಅಚು ್ಚಕಟ್ಟಾಗಿ ನಡೆಸುವುದು ಮತ್ತು  ಸ್ವಚ್ಛತೆ ಯಾವ ರೀತಿ ಕಾಪಾಡುವುದು ಎಂದು ಮಹಮ್ಮಾಯಿ ಕ್ಲಬ್‍ನಿಂದ ಕಲಿಯಬೇಕು ಎಂದು ಹೇಳಿದರು.
ಸತೀಶ್ ಶೆಟ್ಟಿ ಮೂಡುಜಪ್ಪ ಗುತ್ತು, ಲ| ದಯಾನಂದ ಶೆಟ್ಟಿ ಕಡಂಬಿಲಗುತ್ತು, ಗಣೇಶ್ ಮಜಿಗುಳಿ, ಪದ್ಮನಾಭ ಕೋಟ್ಯಾನ್ ಪಡು, ಶಿಕ್ಷಕರಾದ ಚೇತನ್ ಕುಮಾರ್, ಲಕ್ಷ್ಮಣ ಕೋಟ್ಯಾನ್ ಸಾಲೆ, ವಸಂತ ಕುಮಾರ್ ಪೆರ್ಮಂಕಿ ಇವರನ್ನು ಸಮ್ಮಾನಿಲಾಯಿತು. ಕ್ಲಬ್‍ನ ಬೆಳ್ಳಿಹಬ್ಬದ ವೇಳೆ ಕ್ಲಬ್‍ನ ಯಶಸ್ವಿ ಕಾರ್ಯಕ್ರಮಗಳಿಗೆ ಕೊಡುಗೆ ನೀಡಿದ ಈ ಹಿಂದಿನ ಎಲ್ಲ ಅಧ್ಯಕ್ಷರುಗಳಿಗೆ ಹಾಗೂ ಸಂಘವನ್ನು ಪ್ರತಿನಿಧಿಸಿದ ಹಿಂದಿನ ಎಲ್ಲಾ ಆಟಗಾರರಿಗೆ ಅಭಿನಂದಿಸಲಾಯಿತು. ಗ್ರಾಮದ ಬಡಕುಟುಂಬದ ಮಕ್ಕಳಾದ ಮಾ| ರಂಜಿತ್ ಹಾಗೂ ಮಾ| ಪ್ರಶಾಂತ್ ಇವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಜರಗಿದ ಸೂಪರ್ ಮಿನಿಟ್ ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಗಳಿಸಿರುವುದಕ್ಕಾಗಿ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಮೇಲ್ವಿಚಾರಕರಾದ ಸಂಪತ್ ಕುಮಾರ್, ಕಾರ್ಪೋರೇಟರ್ ಹೇಮಲತಾ ಆರ್. ಸಾಲ್ಯಾನ್, ಶ್ರೀನಿವಾಸ ಮಾಣೈ ಮಾಂಜ, ಸತೀಶ್ ಶೆಟ್ಟಿ ಮೂಡುಜಪ್ಪಗುತ್ತು, ದಯಾನಂದ ಶೆಟ್ಟಿ ಕಡಂಬಿಲಗುತ್ತು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಭಜನಾ ಮಂದಿರ (ರಿ.) ಪೆರ್ಮಂಕಿ ಇದರ ಅಧ್ಯಕ್ಷರಾದ ಜನಾರ್ದನ ಗುತ್ತೊಟ್ಟು, ಜಯಂತ್ ಪೂಜಾರಿ ಕಾಂತರಬೆಟ್ಟು, ಶರೀಫ್ ಕಣಿಬೆಟ್ಟು, ನಾಗರಾಜ್ ಪಂಡಿತ್ ವಾಮಂಜೂರು, ಪಂಚಾಯತ್ ಸದಸ್ಯರಾದ ಮಮತ ಸನಿಲ್, ವಿಶ್ವನಾಥ ಶೆಟ್ಟಿ ಉಳಾಯಿಬೆಟ್ಟುಗುತ್ತು, ಕಮ¯ಕ್ಷ್ಯ ತಲ್ಲಿಮಾರು, ಕ್ಲಬ್‍ನ ಅಧ್ಯಕ್ಷರಾದ ಚಂದ್ರಶೇಖರ್ ತಲ್ಲಿಮಾರು ಉಪಸ್ಥಿತರಿದ್ದರು.

ನೂತನವಾಗಿ ರಚನೆಯಾದ ಶ್ರೀ ಮಹಮ್ಮಾಯಿ ಮಹಿಳಾ ಮಂಡಳಿಯನ್ನು ಶಾಸಕರು ಉದ್ಘಾಟಿಸಿದರು. ಶೆ ್ವೀತ, ಮೇಘ, ಭಾರತಿ, ಜಗದೀಶ್ ಸುವರ್ಣ ಸಮ್ಮಾನ ಪತ್ರ ವಾಚಿಸಿದರು. ರಾಜೀವ ಶೆಟ್ಟಿ ಸಲ್ಲಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಯರಾಮ ರೈ ಉಳಾಯಿಬೆಟ್ಟುಗುತ್ತು ವರದಿ ವಾಚಿಸಿದರು. ದಿನೇಶ್ ತಲ್ಲಿಮಾರು ವಂದಿಸಿದರು. ಮನ್ಮಥ್ ಶೆಟ್ಟಿ ಪುತ್ತೂರು ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *