ಬೆಂಗಳೂರು: ದೇಶದ ಎಲ್ಲಾ ಮಕ್ಕಳಿಗೆ ಉನ್ನತ ಮಟ್ಟದ ಆರಂಭಿಕ ಕಲಿಕೆಯನ್ನು ಒದಗಿಸುವ ಅಗತ್ಯದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವಾಗಿ ಕ್ರೀಡೋ ಅರ್ಲಿ ಚೈಲ್ಡ್ ಹುಡ್ ಸಲ್ಯೂಷನ್ಸ್ ತಮ್ಮ ಬಾಲ್ಯದ ಶಿಕ್ಷಣ ವಲಯದಲ್ಲಿ ಶಿಕ್ಷಕರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಇದು ಜನವರಿ 22, 2019ರಂದು ಕಾಸಿಯಾ ಸಭಾಂಗಣ, 2/106, 17ನೇ ಕ್ರಾಸ್‍, ಮಾಗಡಿ-ಕಾರ್ಡ್ ರಸ್ತೆ, ವಿಜಯನಗರ, ಬೆಂಗಳೂರು, ಇಲ್ಲಿ ಮಧ್ಯಾಹ್ನ 3.30ರಿಂದ 9ರವರೆಗೆ ನಡೆಯಲಿದೆ.unnamed (1)

ಉತ್ತಮ ಗುಣಮಟ್ಟದ ಬಾಲ್ಯದ ಶಿಕ್ಷಣ ಮಕ್ಕಳಿಗೆ ಸರಿಯಾದ ಕಲಿಕಾ ಅನುಭವ ನೀಡುವ ಜೊತೆಗೆ, ಅವರ ಜೀವನದ ಮೇಲೂ ಅಗಾಧ ಪ್ರಭಾವ ಬೀರುತ್ತದೆ. ಇದು ಉನ್ನತ ತರಗತಿಗಳಲ್ಲಿ ಗಣಿತ, ವಿಜ್ಞಾನ ಹಾಗೂ ಆಂಗ್ಲ ಭಾಷೆಗಳ ಕಲಿಕೆಗೆ ದೃಢ ತಳಪಾಯ ಒದಗಿಸುತ್ತದೆ. ಈ ಮಕ್ಕಳು ಬೆಳೆದಂತೆಲ್ಲ ಉತ್ತಮ ಪ್ರಜೆಗಳಾಗುತ್ತಾರೆ ಹಾಗೂ ಉತ್ತಮ ಸಮುದಾಯಗಳನ್ನು ಕಟ್ಟುತ್ತಾರೆ.

ಕಾರ್ಯಕ್ರಮದಲ್ಲಿ 2ರಿಂದ 6ವರ್ಷದೊಳಗಿನ ಮಕ್ಕಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಜೀವನ ನಡೆಸುವ ಅವಕಾಶ ಕಲ್ಪಿಸಲು ಶ್ರಮಿಸುತ್ತಿರುವಶಿಕ್ಷಕರು ಹಾಗೂ ಸಮುದಾಯದ ಪಾಲುದಾರರನ್ನು ಸನ್ಮಾನಿಸಲಾಗುವುದು. ಪ್ರಸ್ತುತ ವಿಷಯಗಳಾದ ‘ಭಾರತದಲ್ಲಿ ಬಾಲ್ಯದ ಶಿಕ್ಷಣದ ಮರುವ್ಯಾಖ್ಯಾನದ ಅಗತ್ಯ’ ಮತ್ತಿತರರ ವಿಷಯಗಳನ್ನು ತಜ್ಞರ ತಂಡ ಚರ್ಚಿಸಲಿದೆ. ಕಡಿಮೆ ಆದಾಯದ ಕುಟುಂಬದ ಮಕ್ಕಳಿಗೆ ಕೂಡ ಗುಣಮಟ್ಟದ ಬಾಲ್ಯದ ಶಿಕ್ಷಣ ಒದಗಿಸುವುದು ಈ ಕಾರ್ಯಕ್ರಮದ ಪ್ರಮುಖ ಗುರಿಯಾಗಿತ್ತದೆ.

ವಿಕ್ರಂ ಜೈನ್‍, ನಿರ್ದೇಶಕರು, ಕನ್ಸಲ್‍ಟೆಂಟ್‍ ತಂಡ, ಎಫ್‍ಎಸ್‍ಜಿ , ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕೆಂಗೇರಿಯ ಕ್ರೈಸ್ಟ್‍ ಶಾಲೆಯ ಪ್ರಾಂಶುಪಾಲ ಆಗಸ್ಟೈನ್ ಪೈಯಂಪಲಿಲ್ , ಕರ್ನಾಟಕ ಪೂರ್ವ ಶಾಲೆಗಳ ಪರಿಷತ್ತಿನ ಉಪಾಧ್ಯಕ್ಷ ಮಣಿಕಂದನ್‍ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕ್ರೀಡೋ ಚೈಲ್ಡ್ ಹುಡ್‍ ಸಲ್ಯೂಷನ್‍ ಕುರಿತು;

ಇದು ಭಾರತದ ಅತಿ ವೇಗದಲ್ಲಿ ಬೆಳೆಯುತ್ತಿರುವ ಬಾಲ್ಯದ ಪರಿಹಾರ ಪೂರೈಕೆದಾರ ಸಂಸ್ಥೆ. ನಮ್ಮ ಪರಿಹಾರಗಳು ಪ್ರತಿ ಮಕ್ಕಳಿಗೂ ದೃಢವಾದ ಚಟುವಟಿಕೆಗಳು, ರಚನಾತ್ಮಕ ವಾತಾವರಣ ನಿರ್ಮಾಣ, ವೈಜ್ಞಾನಿಕವಾಗಿ ವಿನ್ಯಾಸಗೊಂಡಿರುವ ಕಲಿಕಾ ವಸ್ತುಗಳು ಹಾಗೂ ಚಟುವಟಿಕೆ ಆಧಾರಿತ ಕಲಿಕೆ ಸೇರಿದಂತೆ ಬಾಲ್ಯದ ಕಲಿಕೆಗೆ ಸೂಕ್ತ ಅಂಶಗಳನ್ನು ಒಳಗೊಂಡಿವೆ.

ನಾವು ಶಾಲೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡು ಶಿಕ್ಷಕರಿಗೆ ತರಬೇತಿ ನೀಡಿ ಮಕ್ಕಳಿಗೆ ಬಾಲ್ಯದ ವರ್ಷಗಳಲ್ಲಿ ಕಲಿಕಾ ವಾತಾವರಣ ಮೂಡಿಸಲು ನೆರವಾಗುತ್ತೇವೆ. ಮಕ್ಕಳನ್ನು ಜೀವನಪರ್ಯಂತ ಕಲಿಕೆಯಲ್ಲಿ ತೊಡಗುವ ಹಾಗೂ ಸಾಧಕರನ್ನಾಗಿಡಲು ಉತ್ತಮ ತಳಪಾಯ ಹಾಕಿಕೊಡಲು ಪ್ರಯತ್ನಿಸುತ್ತೇವೆ. ನಾವು 2ರಿಂದ 6 ವರ್ಷದೊಳಗಿನ ಮಕ್ಕಳ ಕಲಿಕಾ ವಾತಾವರಣ ಅಭಿವೃದ್ಧಿಯ ದೃಷ್ಟಿಕೋನದಿಂದ ಕೈಗೆಟಕುವ ಖಾಸಗಿ ಶಾಲೆಗಳ ವಲಯದೊಂದಿಗೆ ಕೆಲಸ ಮಾಡುತ್ತೇವೆ. ಶಾಲೆಗಳನ್ನು ಕಂಠಪಾಠದ ಶಿಕ್ಷಣ ಕ್ರಮದಿಂದ ಪ್ರಾಯೋಗಿಕ ಹಾಗೂ ಚಟುವಟಿಕೆ ಆಧಾರಿತ ಶಿಕ್ಷಣಕ್ಕೆ ಬದಲಾಗಲು ಪ್ರೇರೇಪಿಸುವುದು ನಮ್ಮ ಗುರಿ.

ನಮ್ಮ ಬಗ್ಗೆ ಹೆಚ್ಚಿನ ಮಾಹಿತಿಗೆ    …    www.kreedology.com

ನಮ್ಮ ಪ್ರಯತ್ನಕ್ಕೆ ನೀವು ಕೈಜೋಡಿಸಿ, ಗುಣಮಟ್ಟದ ಬಾಲ್ಯದ ಶಿಕ್ಷಣದ ಪ್ರೋತ್ಸಾಹದಲ್ಲಿ ಭಾಗಿಯಾದರೆ ಸಂತಸವಾಗುತ್ತದೆ.

ಶಿಕ್ಷಾರಂಭದಲ್ಲಿ ನಿಮ್ಮ ಆಗಮನದ ನಿರೀಕ್ಷೆಯಲ್ಲಿದ್ದೇವೆ.

By suddi9

Leave a Reply

Your email address will not be published. Required fields are marked *