ವಿಶ್ವ ಜನಸಂಖ್ಯಾ ವರದಿಯ ಪ್ರಕಾರ ವಿಶ್ವದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದೆ ಮತ್ತು ಪ್ರತಿವರ್ಷ ಈ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ವಿಶ್ವದ ಪ್ರಮುಖ ಜನಸಂಖ್ಯೆ ಕೃಷಿಯ ಮೇಲೆ ಆಧಾರಪಟ್ಟಿದ್ದರೂ ಈ ಪ್ರವೃತ್ತಿಗೆ ಅಪವಾದವಿಲ್ಲ. ಜನಗಣತಿಯ ಪ್ರಕಾರ ಭಾರತದಲ್ಲಿ ನಗರೀಕರಣ 2001ರಲ್ಲಿ ಶೇ.27.81ರಷ್ಟಿದ್ದು 2011ರಲ್ಲಿ ಶೇ.31.16ರಷ್ಟಾಗಿದೆ. ಭಾರತದಲ್ಲಿ ನಗರೀಕರಣ ಜನಸಂಖ್ಯಾ ಸ್ಫೋಟ ಮತ್ತು ಬಡತನ ಪ್ರೇರಿತ ಗ್ರಾಮೀಣ-ನಗರ ವಲಸೆಯ ಪರಿಣಾಮವಾಗಿದೆ.

_DSC5633

2017ರ ಭಾರತದ ಆರ್ಥಿಕ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಅಂತರ-ರಾಜ್ಯ ವಲಸೆ 2011 ಮತ್ತು 2016ರ ನಡುವೆ ವಾರ್ಷಿಕ 9 ಮಿಲಿಯನ್ ಇದೆ ಎಂದು ಮಾ ಇಂಟಿಗ್ರೇಟರ್ಸ್‍ನ ಕೆ.ಎಸ್.ಅಶೋಕ್ ಕುಮಾರ್ ಹೇಳಿದರು. 2011ರ ಜನಗಣತಿಯ ಪ್ರಕಾರ ದೇಶದಲ್ಲಿ ಆಂತರಿಕ ವಲಸೆಯ ಸಂಖ್ಯೆ 139 ಮಿಲಿಯನ್ ಇದೆ. ಉತ್ತರ ಪ್ರದೇಶ ಮತ್ತು ಬಿಹಾರ ಅತ್ಯಂತ ಪ್ರಮುಖ ಮೂಲ ರಾಜ್ಯಗಳಾಗಿದ್ದು, ನಂತರ ಮಧ್ಯಪ್ರದೇಶ, ಪಂಜಾಬ್, ರಾಜಾಸ್ಥಾನ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಹಾಗೂ ಪಶ್ಚಿಮ ಬಂಗಾಳ ಇದ್ದು ವಲಸೆಯಾಗುವ ಪ್ರಮುಖ ರಾಜ್ಯಗಳು ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಆಂಧ್ರಪ್ರದೇಶ ಮತ್ತು ಕರ್ನಾಟಕಗಳಾಗಿವೆ.
ಋತುಮಾನ ಆಧರಿತ ವಲಸಿಗರು ಎದುರಿಸುವ ಸಮಸ್ಯೆಗಳು
ಋತುಮಾನ ಆಧರಿತ ವಲಸಿಗರು ನಗರಗಳಲ್ಲಿ ಕಡಿಮೆ ಪಾವತಿಯ, ಅಪಾಯಕಾರಿ ಅಸಂಘಟಿತ ಉದ್ಯೋಗಗಳಲ್ಲಿ ಅಂದರೆ, ಕಟ್ಟಡ ನಿರ್ಮಾಣ, ಹೋಟೆಲ್, ವಸ್ತ್ರ, ಉತ್ಪಾದನೆ, ಸಾರಿಗೆ, ಸೇವೆಗಳು ಮತ್ತು ಮನೆಗೆಲಸ ಇತ್ಯಾದಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಅವರಿಗೆ ಆರೋಗ್ಯ ಸೇವೆಗಳ ಲಭ್ಯತೆ ದುರ್ಬಲವಾಗಿದ್ದು ಇದರಿಂದ ಸಂಕಷ್ಟ ಅನುಭವಿಸುತ್ತಾರೆ. ಅವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅಶಕ್ತರಾಗಿರುವುದರಿಂದ ಅವರು ರೋಗಗ್ರಸ್ಥರಾದರೆ ತಮ್ಮ ಗ್ರಾಮಗಳಿಗೆ ಮರಳುತ್ತಾರೆ. ಇದರಿಂದ ಅವರ ಉದ್ಯೋಗಾವಕಾಶಗಳಿಗೆ ಸಂಕಷ್ಟ ಒದಗುತ್ತದೆ ಮತ್ತು ವೇತನ ನಷ್ಟವಾಗುತ್ತದೆ. ಬಹಳಷ್ಟು ಸಂಖ್ಯೆಯ ಕಾರ್ಮಿಕರು ಕೌಶಲ್ಯರಹಿತ ಕಾರ್ಮಿಕರಾಗಿ ಕೆಲಸ ಪಡೆಯುತ್ತಾರೆ. ಅದಕ್ಕೆ ಕಾರಣ ಅವರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಉದ್ಯೋಗದ ಮಾರುಕಟ್ಟೆಯನ್ನು ಪ್ರವೇಶಿಸುವುದು, ಇದರಿಂದ ಅವರು ಹಾಗೆಯೇ ಉಳಿಯುತ್ತಾರೆ. ಅವರ ಇಡೀ ಜೀವನ ಶ್ರಮದ ಅಪಾಯಕಾರಿ ಉದ್ಯೋಗಗಳನ್ನು ಮಾಡಬೇಕಾಗುತ್ತದೆ.

_DSC5617

ವಲಸಿಗ ಉದ್ಯೋಗಿಗಳ ದೌರ್ಬಲ್ಯಗಳು
ಅಸಂಘಟಿತ ಮತ್ತು ಅಸ್ತವ್ಯಸ್ತ ಕಾರ್ಮಿಕ ಮಾರುಕಟ್ಟೆಯಲ್ಲಿ ವಲಸಿಗ ಕಾರ್ಮಿಕರು ನಿಯಮಿತವಾಗಿ ಕೆಲಸದ ಸ್ಥಳಗಳಲ್ಲಿ ಬಿಕ್ಕಟ್ಟು ಮತ್ತು ಸಂಘರ್ಷಗಳಿಗೆ ಒಳಗಾಗುತ್ತಿರುತ್ತಾರೆ. ಸರಿಯಾಗಿ ವೇತನ ಪಾವತಿಸದೇ ಇರುವುದು, ದೈಹಿಕ ದುರುಪಯೋಗ, ಅಪಘಾತಗಳು ಮತ್ತು ಸಾವೂ ಸಂಭವಿಸಬಹುದು. ಅಸಂಘಟಿತ ವಲಯದ ವಿವಾದಗಳ ಕುರಿತು ಕಾನೂನು ವ್ಯವಸ್ಥೆಯೂ ಸಂವೇದನಾಶೀಲವಾಗಿಲ್ಲ. ಅಸಂಘಟಿತ ಕ್ಷೇತ್ರದ ವಿವಾದಗಳು ಕಾರ್ಮಿಕ ನ್ಯಾಯಾಲಯಗಳಿಗೆ ಬರುವುದೇ ಇಲ್ಲ ಅಥವಾ ಪುರಾವೆಗಳಿಲ್ಲದೆ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ ಕೊಳೆಯುತ್ತವೆ. ನಗರಗಳನ್ನು ಶ್ರಮಿಕ ಕಾರ್ಮಿಕರು ಹಾಗೂ ವಲಸಿಗ ಕೆಲಸಗಾರರ ಶೋಷಣೆಯಿಂದ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಅವರು ಎಂದಿಗೂ ನಗರದ ಭಾಗವಾಗಿ ಭಾವಿಸಲಾಗಿಲ್ಲ, ಬದಲಿಗೆ ಅವರು ನಗರಗಳ ಸಮಸ್ಯೆಗಳ ಭಾಗ ಎಂದು ಪರಿಗಣಿಸಲಾಗುತ್ತದೆ. ರಾಜಕೀಯ ವರ್ಗ ಅವರನ್ನು ನಿರ್ಲಕ್ಷಿಸುತ್ತದೆ, ಏಕೆಂದರೆ ಅವರನ್ನು ಮತಗಳಿಂದ ಅಳೆಯಲು ಸಾಧ್ಯವಿಲ್ಲ, ಅದರಲ್ಲೂ ಅಂತರ-ರಾಜ್ಯ ವಲಸಿಗರನ್ನು ಸ್ಥಳೀಯ ಮತಕ್ಕಾಗಿ ಪರಿಗಣಿಸಲಾಗುವುದಿಲ್ಲ. ಅವರ ವಲಸೆಯ ಕಾರಣದಿಂದ ಅವರು ಕಾರ್ಮಿಕ ಸಂಘಟನೆಗಳಲ್ಲೂ ಸ್ಥಾನ ಪಡೆಯುವುದಿಲ್ಲ. ಅವರು ನಗರಗಳು ಅವರನ್ನು ಗಮನಿಸದಂತೆ ಇಡೀ ದಿನ ಕೆಲಸದ ಸ್ಥಳದಲ್ಲಿ ಕಳೆಯುತ್ತಾರೆ ರಾತ್ರಿಯಲ್ಲಿ ಅತ್ಯಂತ ದುರ್ಬಲವಾದ ಆಶ್ರಯಗಳಲ್ಲಿ ಸೇರಿಕೊಳ್ಳುತ್ತಾರೆ.
ಆಹಾರ ಭದ್ರತೆ ಸಾಧಿಸಲು ಕೃಷಿ ಉತ್ಪಾದನೆ ಅತ್ಯಂತ ಮುಖ್ಯವಾಗಿದ್ದು, ಶೇ.99ರಷ್ಟು ಸೇವಿಸುವ ಆಹಾರ ಕೃಷಿಯಿಂದ ಪೂರೈಕೆಯಾಗುತ್ತದೆ. ಆದರೆ ಪರಿಸರ ನಾಶ, ವಾತಾವರಣ ಬದಲಾವಣೆ ಕೃಷಿಯೇತರೆ ಚಟುವಟಿಕೆಗಳಿಗೆ ಭೂಮಿಯ ಪರಿವರ್ತನೆ ಹೆಚ್ಚಳದಿಂದ ಕೃಷಿ ಈಗಾಗಲೇ ಒತ್ತಡದಲ್ಲಿದೆ. ಅಲ್ಲದೆ ವಲಸೆಯಿಂದ ಜನಸಂಖ್ಯಾ ಕೇಂದ್ರಗಳ ಬದಲಾವಣೆ ಅಪೌಷ್ಠಿಕತೆಯ ಮೂರುಪಟ್ಟು ಒತ್ತಡ ಹೆಚ್ಚಿಸಿದೆ. ಹಸಿವು ಪೌಷ್ಠಿಕತೆಯ ಕೊರತೆ, ಅತಿಯಾದ ತೂಕ ಮತ್ತು ಬೊಜ್ಜಿನಿಂದ ಅತಿಯಾದ ಪೌಷ್ಠಿಕತೆ ಜೊತೆ ಜೊತೆಯಲ್ಲಿಯೇ ಇವೆ. ನಗರ ಕೇಂದ್ರಗಳಿಗೆ ವಲಸೆಯಾಗುವವರು ಪೌಷ್ಠಿಕಯುಕ್ತ ಆಹಾರ, ತಕ್ಕಷ್ಟು ಕೆಲಸ, ಸಾಮಾಜಿಕ ಭದ್ರತೆ, ವಸತಿ, ನೀರು ಮತ್ತು ಶೌಚಾಲಯ ಸೌಲಭ್ಯಗಳ ಕೊರತೆ ಎದುರಿಸುತ್ತಾರೆ. ಇದರಿಂದ ಸರ್ಕಾರಕ್ಕೆ ಜನಸಂಖ್ಯೆಯ ಜೀವನೋಪಾಯದ ಭದ್ರತೆ ಮಾತ್ರವಲ್ಲದೆ ಆಹಾರ ಹಾಗೂ ಪೌಷ್ಠಿಕ ಭದ್ರತೆಯ ಸವಾಲುಗಳನ್ನು ಹೆಚ್ಚುವರಿಯಾಗಿ ಒಡ್ಡುತ್ತಿದೆ. ವಲಸೆಯ ಪರಿಣಾಮವು ಆಹಾರ ಭದ್ರತೆ, ಸುಸ್ಥಿರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಯ ಅವಕಾಶಗಳನ್ನೂ ಸೃಷ್ಟಿಸಿದೆ. ಉದಾಹರಣೆಗೆ ಮಾನವ ಬಂಡವಾಳ ಮತ್ತು ಕೃಷಿ ಕಾರ್ಮಿಕರ ನಷ್ಟ ಬೆಳೆ ಉತ್ಪಾದನೆ ಮತ್ತು ಆಹಾರದ ಲಭ್ಯತೆಯ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಅದೇ ಸಮಯಕ್ಕೆ ಸಾಂಪ್ರದಾಯಿಕ ಆಹಾರ ಮೌಲ್ಯ ಸರಣಿಗಳನ್ನು ನಗರ ಕೇಂದ್ರಗಳ ಬೇಡಿಕೆಗಳನ್ನು ಪೂರೈಸಲು ವರ್ಗಾಯಿಸಲಾಗುತ್ತಿದೆ. ಕೃಷಿ ಉತ್ಪನ್ನಗಳಿಗೆ ಹೆಚ್ಚಿದ ವಾಣಿಜ್ಯ ಹರಿವು, ಆಹಾರ ಪರಿವರ್ತನೆ ಮತ್ತು ವಾಣಿಜ್ಯ ಮಾರುಕಟ್ಟೆಗಳ ವಿಸ್ತರಣೆಯಿಂದ ನಗರದ ಆಹಾರ ಬೇಡಿಕೆಯನ್ನು ಪೂರೈಸಲು ಆಹಾರ ಮೌಲ್ಯ ಸರಣಿ ವಿಕಾಸಗೊಳ್ಳಲು ಅವಕಾಶ ಕಲ್ಪಿಸಿದೆ. ಆಧುನಿಕ ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ತಂತ್ರಜ್ಞಾನಗಳು, ಗ್ರಾಮೀಣ ಉತ್ಪಾದಕರನ್ನು ಸಂಪದ್ಭರಿತ ನಗರ ಗ್ರಾಹಕರಿಗೆ ಸಂಪರ್ಕಿಸುವುದು ಈ ಬದಲಾಗುತ್ತಿರುವ ಪ್ರವೃತ್ತಿಗಳ ಪ್ರಮುಖ ಆಯಾಮಗಳಾಗಿವೆ.
ಸಣ್ಣ ಹಾಗೂ ಮಧ್ಯಮ ಹಂತದ ಕೃಷಿಕರ ಸಂಕಷ್ಟಗಳಿಂದ ಬೃಹತ್ ಪ್ರಮಾಣದ ಯುವಜನರು ಅವರ ಪಿತ್ರಾರ್ಜಿತ ಆಸ್ತಿಗಳನ್ನು ತ್ಯಜಿಸಿ ನಗರಗಳತ್ತ ವಲಸೆಯಾಗುತ್ತಿರುವುದನ್ನು ವಿವರಿಸುವುದು ಕಷ್ಟವಲ್ಲ. ಕೃಷಿಯಲ್ಲಿ ಸಂಕಷ್ಟಗಳನ್ನು ಕಡಿಮೆ ಮಾಡುವವರೆಗೆ ಹಾಗೂ ಆರೋಗ್ಯ ಹಾಗೂ ಪೌಷ್ಠಿಕತೆ ಸಂಬಂಧಿಸಿದ ಸಾಮಾಜಿಕ ಹಾಗೂ ಭೌತಿಕ ಮೂಲಸೌಕರ್ಯವನ್ನು ಸಮಗ್ರವಾಗಿ ರೂಪಿಸದೇ ಇದ್ದಲ್ಲಿ ಸಂಕಷ್ಟದಿಂದ ಉಂಟಾಗುವ ವಲಸೆ ತಪ್ಪಿಸಲು ಸಾಧ್ಯವಿಲ್ಲ.

By suddi9

Leave a Reply

Your email address will not be published. Required fields are marked *