ಗುರುಪುರ: ಬ್ರಿಟಿಷರ ಕಾನೂನು, ಜನಸಾಮಾನ್ಯರಿಂದ ತಿರಸ್ಕಾರ ಹೀಗೆ ಬೇರೆ ಬೇರೆ ಕಾರಣಗಳಿಂದ ಸೊರಗಿದ ಬೀಡು ಮತ್ತು ಗುತ್ತಿನ ವ್ಯವಸ್ಥೆಯನ್ನು ಪುನರಪಿ ಸರಿದಾರಿಗೆ ತಂದು ಧರ್ಮಸಮ್ಮತ, ಆಧ್ಯಾತ್ಮಿಕ ತಳಹದಿಯಲ್ಲಿ ಜಾತಿ, ಮತ, ಧರ್ಮ, ಬಡವ-ಬಲ್ಲಿದ ಭೇದವಿಲ್ಲದೆ ನ್ಯಾಯದಾನ ಕಲ್ಪಿಸುವ ಉದ್ದೇಶದಿಂದ ಜ.19 ಹಾಗೂ ಜ.20ರಂದು ಗುರುಪುರದ ಗೋಳಿದಡಿಗುತ್ತಿನ `ಗುತ್ತುದ ಪರ್ಬೊ’ ಎನ್ನುವ ಪರ್ಬೊದ ಸಿರಿ ಉತ್ಸವ ನಡೆಯಲ್ಲಿದ್ದು, ಇದರಲ್ಲಿ `ಗುತ್ತು ನಿಮಗೆಷ್ಟು ಗೊತ್ತು?’ ಎಂಬ ಚಿಂಥನ ಮಂಥನ, ರುದ್ರಹೋಮ ಸೇರಿ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಗೋಳಿದಡಿಗುತ್ತಿನ ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಹೇಳಿದ್ದಾರೆ.golidadiguithu vardhaman dhugga prasad shetty

 

*ಸುದ್ದಿ9 ಜೊತೆ ವಿಶೇಷ ಸಂದರ್ಶನ ನೀಡಿ ಮಾತಾಡಿದ ಅವರು ಗುತ್ತು, ಬಾರಿಕೆ, ಬೀಡಿನ ವ್ಯವಸ್ಥೆಯ ಕುರಿತು ಸಮಗ್ರ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು.

ಈ ಬಾರಿ ನಡೆಯಲಿರುವ ಗುತ್ತುದ ಪರ್ಬೊ ಉತ್ಸವವನ್ನು ಇನ್ನಷ್ಟು ಶಿಸ್ತುಬದ್ಧವಾಗಿ, ಜಾನಪದ ಬದುಕಿಗೆ ಒತ್ತುಕೊಟ್ಟು ಗುತ್ತು, ಬೀಡು, ಬಾರಿಕೆ(ಬರ್ಕೆ), ಬಾವ, ಪರಡಿ ಮನೆತನಗಳ ಆಡಳಿತಾತ್ಮಕ ವ್ಯವಸ್ಥೆಯತ್ತ ಬೆಳಕು ಚೆಲ್ಲುವ ಉದ್ದೇಶದಿಂದ ಈ ಚಿಂತನಮಂಥನ ನಡೆಯಲಿದೆ. ಪಾಂಡವರು ಭರತ ಖಂಡವನ್ನು ಸಮಗ್ರತೆಯ ಸೂತ್ರದಲ್ಲಿ ಆಳಿದರು ಇದಾದ ನಂತರ ಮಹರಾಜ ಪರೀಕ್ಷಿತ, ಜನಮೇಜಯ ನಂತರ ಸುಧನ್ವನು ಧರ್ಮದ ಆಧಾರದಲ್ಲಿ ಶಾಸನವನ್ನು ರೂಪಿಸಿದನು. ಈ ಆಡಳಿತ ಪದ್ಧತಿ ಅಳಿದುಳಿದು ಇಂದು ಬೇರೆ ಬೇರೆ ಕಾರಣಗಳಿಂದ ಗುತ್ತು ಹಾಗೂ ಬೀಡಿನ ಆಡಳಿತ ವ್ಯವಸ್ಥೆ ಸೊರಗಿದೆ ಎಂದು ಆತಂಕ ವ್ಯಕ್ತಪಡಿಸಿದರು.golidadiguthina mane

* ಸತ್ಯ, ನ್ಯಾಯ, ಧರ್ಮ ಬದ್ಧ ಆಡಳಿತ ವ್ಯವಸ್ಥೆ:

ಅಧಿಕಾರ ವಿಕೇಂದ್ರಿಕರಣ ಸ್ವರೂಪದಲ್ಲಿ ಚಕ್ರವರ್ತಿ, ಮಹಾಮಂಡಲಾಧಿಪತಿ, ಅರಸು, ಬೀಡು, ಗುತ್ತು ಹೀಗೆ ದೇಶದ 16*16 ಭಾಗದಲ್ಲಿ ಅರಸು, ಬೀಡು, ಗುತ್ತು ಮನೆಯ ಆಡಳಿತ ವ್ಯವಸ್ಥೆಯಲ್ಲಿ ಮೂಲ ರಾಜವಿಕ ಸಂವಿಧಾನಕ್ಕೆ ಭಂಗವಿರದಂತೆ ಆಡಳಿತ ಒದಗಿಸುತ್ತಿತ್ತು. ಇದರಲ್ಲಿ ಗುತ್ತಿನ ಮನೆಯ ಗ್ರಾಮ ಪದ್ಧತಿಯು ಆಡಳಿತ ಚಕ್ರವರ್ತಿ ಮನಸೂರೆಗೊಳ್ಳುವಂತೆ ಶಿಸ್ತಿನಲ್ಲಿ ಸತ್ಯ, ನ್ಯಾಯ, ಧರ್ಮ ಬದ್ಧವಾಗಿ ಆಧ್ಯಾತ್ಮಿಕ, ದೈವಿಕತೆಯ ಅಡಿಯಲ್ಲಿ ಆಡಳಿತ ವ್ಯವಸ್ಥೆ ನಡೆಯುತ್ತಿತ್ತು ಎಂದರು.

* ಸರ್ವವಂದ್ಯರೂ ಸಮಾಜಮುಖಿಗಳು ಈ ಗಡಿಕಾರರು:

ಗಡಿಕಾರರು ಇಲ್ಲವೇ ಗಡಿಹಿಡಿದವರು ಗುತ್ತಿನ ಮನೆಯ ಯಜಮಾನರಾಗಿದ್ದು, ಸರ್ವ ವಂದ್ಯರೂ, ಜನಹಿತಕ್ಕಾಗಿ ಕುಟುಂಬದಿಂದ ಆಧ್ಯಾತ್ಮಿಕವಾಗಿ ಹೊರಗುಳಿದು ಸಮಾಜಹಿತಕ್ಕಾಗಿ ತೊಡಗಿಸಿಕೊಂಡವರನ್ನು ಗುತ್ತಿನ ಗಡಿಕಾರರು ಎಂದು ಕರೆಯಲ್ಪಟ್ಟರು. ಗುತ್ತಿನ ಮನೆಯವರು ದೇವರಿಗೆ ಪ್ರಾರ್ಥಿಸಿ ಯೋಗ್ಯತೆಯುಳ್ಳ ವ್ಯಕ್ತಿಯನ್ನು ಗಡಿಕಾರರನ್ನಾಗಿ ನೇಮಿಸಿ ಮನೆಯ ಪ್ರಧಾನವಾದ ಪಂಚದೈವಗಳ ಸಾನಿಧ್ಯಕ್ಕೆ ಬಿಟ್ಟುಕೊಡುತ್ತಿದ್ದರು. ಪುರಾತನ ರಾಜ್ಯಾಂಗ ವ್ಯವಸ್ಥೆಯಲ್ಲಿ ಗುತ್ತಿನ ಮನೆಯು ಆಡಳಿತ ಪ್ರಕಾರ ಆರನೇ ಸ್ಥಾನದಲ್ಲಿದ್ದರೂ ತ್ಯಾಗ, ತಪಸ್ಸು, ನ್ಯಾಯರತೆ, ಸಮಾಜಮುಖಿ ಜೀವನ, ಒಳ್ಳೆಯತನದಿಂದ ಗೌರವಪೂರ್ವಕವಾಗಿ ಗುತ್ತು-ಬೀಡಿನ ಮನೆಗೆ ನಡೆದುಕೊಳ್ಳುತ್ತಿದ್ದರು. ದ.ಕ.ದಲ್ಲಿ ಗುತ್ತಿನ ಮನೆ, ಉಡುಪಿ-ಉ.ಕ.ದಲ್ಲಿ ಹೆಬ್ಬಾಗಿಲು ಮನೆ ಮೆಟ್ಟ್‍ಗಲ್ಲು ಮನೆ ಸೇರಿ ದೇಶದ ಆಯಾಯ ಪ್ರದೇಶಕ್ಕನುಗುಣವಾಗಿ ದೇಸಾಯಿ, ದೇಶಪಾಂಡೆ, ಪಟವರ್ಧನ ಹೀಗೆ ಬೇರೆ ಬೇರೆ ಹೆಸರಲ್ಲಿ ಕರೆಯಲಾಗುತ್ತಿತ್ತು. ಇಲ್ಲಿ ಧರ್ಮಸಮ್ಮತ, ಆಧ್ಯಾತ್ಮಿಕ ತಳಹದಿಯಲ್ಲಿ ಜಾತಿ, ಮತ, ಧರ್ಮ, ಬಡವ-ಬಲ್ಲಿದ ಭೇದವಿಲ್ಲದೆ ನ್ಯಾಯದಾನ ಕಲ್ಪಿಸಿ ಉತ್ತಮ ಆಡಳಿತ ನಡೆಯುತ್ತಿತ್ತು. ಆದರೆ ಭೂಮಸೂದೆ, ಒಕ್ಕಲು ಮನೆ ಮಸೂದೆ, ಸಂವಿಧಾನ ಚೌಕಟ್ಟಿನಲ್ಲಿ ಆದ ಕೆಲವೊಂದು ಪಲ್ಲಟಗಳ ಹಿನ್ನೆಲೆ, ತಮ್ಮ ಮೂಲಭೂತ ಸಿದ್ಧಾಂತವಾದ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಗುತ್ತಿಗಳ ಅಸಮರ್ಪಕ ಕಾರ್ಯ ಆರ್ಥಿಕ ಹಿಂಜರಿಕೆ, ಆಧ್ಯಾತ್ಮ ತಳಹದಿಯ ಕೊರತೆ ಹೀಗೆ ನಾನಾ ಕಾರಣಗಳಿಂದ ನ್ಯಾಯ ನಿರ್ವಹಣೆಯು ಗುತ್ತಿನಮನೆಯಲ್ಲಿ ಸ್ಥಗಿತಗೊಂಡು ಇಂದು ಗುತ್ತಿನವರು ದೈವಾರಧನೆಗೆ ಮಾತ್ರ ಸೀಮಿತರಾಗಿದ್ದಾರೆ. ಗಡಿಕಾರರು ಆರಾಧಿಸುವ ದೈವ ದೇವರಿಂದ ವಿಚಕ್ಷಣ ಜ್ಞಾನವು ಅವರು ಧರಿಸಿರುವ ಗಡಿಮುದ್ರೆ ಅಥವಾ ಗಡಿಕಂಕಣದಲ್ಲಿ ಸ್ಥಿರವಾಗಿರುತ್ತದೆ. ಅದಕ್ಕಾಗಿ ಗುತ್ತು, ಬೀಡು, ಬಾರಿಕೆ, ಪರಡಿ ಮನೆಯವರು ಮತ್ತೆ ದೈವಿಕ ಹಾಗೂ ಆಧ್ಯಾತ್ಮಿಕ ಬಲದಿಂದ ಎಚ್ಚೆತ್ತುಕೊಳ್ಳುವ ಉದ್ದೇಶದಿಂದ ಗುತ್ತು ನಿಮಗೆಷ್ಟು ಗೊತ್ತು ವಿಚಾರ ಮಂಥನ ನಡೆಸಲಾಗುತ್ತಿದೆ. ಅದಕ್ಕಾಗಿ ಈಗಾಗಲೇ 900 ಆಮಂತ್ರಣ ಪತ್ರಗಳನ್ನು ಆಯಾಯ ಗುತ್ತಿನವರಿಗೆ ಕಳಿಸಲಾಗಿದೆ ಎಂದು ತಿಳಿಸಿದರು.

* ಗುತ್ತಿನವರೆಂದರೆ ಕೇವಲ ಬಂಟರು ಮಾತ್ರವಲ್ಲ:
ಗುತ್ತಿನವರು ಎಂದರೆ ಕೇವಲ ಬಂಟ ಸಮುದಾಯಕ್ಕೆ ಸೇರಿದವರು ಮಾತ್ರವಲ್ಲ. ಎಲ್ಲ ಜಾತಿಗಳಲ್ಲೂ ಗುತ್ತಿನವರು ಇದ್ದರು. ಬಂಟರು ಎನ್ನುವುದು ಕೇವಲ ತಪ್ಪು ಕಲ್ಪನೆ ಆಗಿದೆ. ಬಂಟ, ಬಿಲ್ಲವ, ಕುಲಾಲ, ಸಪಳಿಗ, ದಲಿತ, ಕ್ರಿಶ್ಚಿಯನ್, ಮಲೆಕುಡಿಯ ಹೀಗೆ ಎಲ್ಲ ಜಾತಿಯಲ್ಲೂ ಗುತ್ತುಗಳಿತ್ತು. ಈ ಕಾರಣದಿಂದ ಎಲ್ಲ ಜಾತಿಯ ಗುತ್ತಿನವರಿಗೂ ಆಮಂತ್ರಣ ತಲುಪಿದೆ. ಹಿಂದಿನ ನ್ಯಾಯದಾನ ವ್ಯವಸ್ಥೆ 10ರಿಂದ 15 ನಿಮಿಷದಲ್ಲಿ ತೀರ್ಮಾನವಾಗುತ್ತಿದ್ದು, ಪಶ್ಚಾತಾಪವೇ ಶಿಕ್ಷೆಯಾಗುತ್ತಿತ್ತು. ಗೋಳಿದಡಿಗುತ್ತಿನಲ್ಲಿ ಈವರೆಗೆ 800ರಷ್ಟು ನ್ಯಾಯ ತೀರ್ಮಾನವಾಗಿದೆ. ಇದರಿಂದ ಗ್ರಾಮೀಣ ಪ್ರದೇಶದವರು ಶೇ.30ಕ್ಕಿಂತಲೂ ಅಧಿಕ ಕೋರ್ಟಿಗೆ ಹೋಗುವುದು ತಪ್ಪಬಹುದು. ಇದು ಆರಂಭವಾಗಿದ್ದು, ಮುಂದೆ ಕಾರ್ಕಳ, ಕೇರಳ ಗಡಿಭಾಗ ಕಾಸರಗೋಡಿನಲ್ಲಿಯೂ ಇಂಥಾ ಕಾರ್ಯಕ್ರಮ ಆಯೋಜಿಸಲಿದ್ದೇವೆ. ಈ ಭಾಗಲ್ಲಿ 1720 ಗುತ್ತಿನ ಮನೆ, 198 ಬೀಡಿನ ಮನೆ, 28 ಪರಡಿ, 18 ಮಾಗಂದಗಡಿ ಇದ್ದು ಎಲ್ಲರನ್ನೂ ಒಟ್ಟಾಗಿ ಕರೆತರುವ ವ್ಯವಸ್ಥೆ ಎಂದು ವರ್ಧಮಾನ ದುರ್ಗಪ್ರಸಾದ್ ಶೆಟ್ಟಿ ಹೇಳಿದರು.

* ವಿಚಾರಗೋಷ್ಠಿ-ಕಾರ್ಯಕ್ರಮಗಳು:
ವಿದ್ವಾಂಸರಾದ ಡಾ| ವೈ.ಎನ್. ಶೆಟ್ಟಿ ಪಡುಬಿದ್ರಿ ಹಾಗೂ ವಿದ್ವಾಂಸ ಕೆ.ಎಲ್. ಕುಂಡಂತಾಯ ಅವರು ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ವಿಚಾರ ಮಂಡನೆ,

* ಗುತ್ತ್ತುಗಳ ಗಡಿಕಾರರ ಗಡಿ ನಿರ್ವಹಣೆ ಮತ್ತು ನಡೆ ಹಾಗೂ ನುಡಿ ವಿಷಯದಲ್ಲಿ ತಿಂಗಳೆ ಮನೆತನ ಹೆಬ್ರಿ ಇದರ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅವರಿಂದ ವಿಚಾರ ಮಂಡನೆ,

* ವೇದ ವಿದ್ವಾಂಸ ಡಾ| ಯಾಜಿ ನಿರಂಜನ್ ಭಟ್ ಅವರಿಂದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ವಿಚಾರ ಮಂಡನೆ ,

* ಭವಿಷ್ಯದಲ್ಲಿ ಗುತ್ತು-ಬೀಡು-ಬಾರಿಕೆ-ಬಾವ-ಪರಡಿಗಳು ಒಂದು ಚಿಂತನೆ ವಿಚಾರದಲ್ಲಿ ತಿಮರೋಡಿ ಬೀಡಿನ ಮಹೇಶ್ ಶೆಟ್ಟಿ ತಿಮರೋಡಿಯವರಿಂದ ವಿಚಾರ ಮಂಡನೆ,

* ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‍ರಿಂದ ಸಾಮಾಜಿಕ ದೃಷ್ಟಿಕೋನದಲ್ಲಿ ವಿಚಾರ ಮಂಡನೆ,

* ಒಟ್ಟು ಚಿಂತನ ಮಂಥನದ ನಿರ್ಣಯ ಮಂಡನೆ ಹಾಗೂ ಅಂಗೀಕಾರ ವಿಚಾರದಲ್ಲಿ ವರ್ಧಮಾನ ದುರ್ಗಪ್ರಸಾದ್ ಶೆಟ್ಟಿ, ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದ, ನವೀನ್ ಶೆಟ್ಟಿ ಎಡ್ಮೆಮಾರು, ಪರಮಾನಂದ ಸಾಲ್ಯಾನ್ ಸಸಿಹಿತ್ಲು ಅವರಿಂದ ವಿಚಾರಗೋಷ್ಠಿ ನಡೆಯಲಿದೆ.vardhaman...

* ವಿಶೇಷತೆಯೇ ಕಾರ್ಯಕ್ರಮದ ಉದ್ದೇಶ:

ವಿಚಾರಗೋಷ್ಠಿಯಲ್ಲಿ ಉಪಸ್ಥಿತರಿರುವ ಗುತ್ತು, ಬೀಡು, ಬಾರಿಕೆ(ಬರ್ಕೆ), ಬಾವ, ಪರಡಿ ಮನೆತನಗಳ ಗಡಿಕಾರರು, ಮುಕ್ಕಾಲ್ದಿಗಳು, ಪ್ರತಿನಿಗಳಿಗೆ ಗೌರವ ಸಮರ್ಪಣೆ ನಡೆಯಲಿದೆ. ಮಂಡಿಸಿದ ವಿಚಾರಕ್ಕೆ ಸಂಬಂಸಿ ಹಾಗೂ ಮಂಡಿಸಿದ ವಿಭಿನ್ನ ದೃಷಿಕೋನಕ್ಕೆ ಸಂಬಂಸಿ ಪ್ರಶ್ನೋತ್ತರ, ಗುತ್ತು-ಬೀಡು-ಗಾಥೆಗಳ ಕುರಿತು ಸುಗಮ ಸಂಗೀತ, ಗುತ್ತುದ ಚಾವಡಿದ ಅಳಿಯಕಟ್ಟು ತುಳುರೂಪಕ ನಡೆಯಲಿದೆ. ಇದರೊಂದಿಗೆ ಪರ್ಬೊದ ಸಿರಿ ಉದ್ಘಾಟನೆ, ಸರಕುಗಳ ಪ್ರದರ್ಶನ, ಮಾರಾಟ, ಶಕ್ತಿಕಲ್ಲು ಎತ್ತುವ ಸ್ಪರ್ಧೆ, ಊಟೋಪಚರಾದ ವ್ಯವಸ್ಥೆ ಇರಲಿದೆ. ಗುತ್ತಿಗೆ ಬರುವ ಪ್ರತಿ ಮಹಿಳೆಯರಿಗೂ ಸಿಂಧೂರ ಮುಡಿಸಿ, ಬಳೆಗಳನ್ನು ತೊಡಿಸಲಿದ್ದು, ಸಂಸ್ಕøತಿಯ ಜಾತ್ರೆಯೇ ನಡೆಯಲಿದೆ.

By suddi9

Leave a Reply

Your email address will not be published. Required fields are marked *