ಪೊಳಲಿ: ಸ್ವಾಮಿ ವಿವೇಕಾನಂದರ 157 ನೇ ಜನ್ಮದಿನಾಚರಣೆಯ ಪ್ರಯುಕ್ತ ಶನಿವಾರ ಪೊಳಲಿ ರಾಮಕೃಷ್ಣ ತಪೋವನದ ವತಿಯಿಂದ ನಡೆದ ಜಾಥಾಕ್ಕೆ ಸ್ವಾಮಿ ವಿವೇಕಚೈತನ್ಯಾನಂದ ಚಾಲನೆ ನೀಡಿದರು.12-1

12vpswamivivekananda

ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳ ಜಾಥಾವು ಘೋಷನೆಗಳನ್ನು ಹಾಕುತ್ತ ಪೊಳಲಿ ದೇವಸ್ಥಾನದ ರಥಬೀದಿಯಾಗಿ ಅಡ್ಡೂರಿಗೆ ಸಾಗಿದ ಶಾಲಾ-ಕಾಲೇಜು ಜಾಥಾವು ಅಡ್ಡೂರು ಜಂಕ್ಷನ್ ತಲುಪಿದಾಗ ಜಿಪಂ ಸದಸ್ಯ ಯು ಪಿ ಇಬ್ರಾಹಿಂ ನೇತೃತ್ವದ ಯುವಜನರು ಸ್ವಾಗತಿಸಿದರು. ಬಳಿಕ ತಪೋವನಕ್ಕೆ ಮರಳಿದ ಜಾಥಾದಲ್ಲಿ ವಾಮಂಜೂರು ಶುಭೋದಯ, ಪೊಳಲಿ ಶ್ರೀ ರಾಜರಾಜೇಶ್ವರಿ ಪ್ರೌಢ ಶಾಲೆ, ಪೊಳಲಿ ವಿದ್ಯಾ ವಿಲಾಸ ಅನುದಾನಿತ ಶಾಲೆ, ಮಂಗಳೂರು ವಿವಿ ಕಾಲೇಜು, ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಶಾಲಾ-ಕಾಲೇಜು, ದಕ ಜಿಪಂ ಹಿರಿಯ ಪ್ರಾಥಮಿಕ ಶಾಲೆ ಪಳ್ಳಿಪಾಡಿ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

12-6

12-01

 

ಈ ಸಂದರ್ಭದಲ್ಲಿ ಸ್ವಾಮಿ ಪ್ರಣವಾನಂದಾಜಿ, ವೆಂಕಟೇಶ ನಾವಡ, ತಾಪಂ ಸದಸ್ಯ ಯಶವಂತ ಪೊಳಲಿ, ಲೋಕೇಶ್ ಭರಣಿ, ಶ್ರೀ ಪತಾಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಪೊಳಲಿ ಶಾಖೆಯ ಬಂಧುಗಳು, ಆಶ್ರಮದ ವಿದ್ಯಾರ್ಥಿಗಳು ಹಾಗೂ ಇತರರು ಭಾಗವಹಿಸಿದ್ದರು.12-2

12-4ತಪೋವನದಲ್ಲಿ ವಿದ್ಯಾಥಿಗಳಿಗಾಗಿ ಆಶು ಭಾಷಣ, ಪ್ರಬಂಧ ಸ್ಫರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಸ್ವಾಮೀಜಿ ಬಹುಮಾನ ವಿತರಿಸಿದರು.

By suddi9

Leave a Reply

Your email address will not be published. Required fields are marked *