hitendra prasad

ಉಡುಪಿ: `ಹಾಯ್ ಮಾರುತ’ ಪತ್ರಿಕೆಯ ಸಂಪಾದಕ ಹಿತೇಂದ್ರ ಪ್ರಸಾದ್ ಕೊಲೆ ಪ್ರಕರಣ, ಹಾಗೂ ಹಿರಿಯಡ್ಕ ಜೈಲಲ್ಲಿ ನಡೆದಿದ್ದ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣ ಸೇರಿದಂತೆ ಕೊಲೆ, ಕೊಲೆಯತ್ನ, ಅಕ್ರಮ ಶಸ್ತ್ರಾಸ್ತ್ರ ಇನ್ನಿತರ ಪ್ರಮುಖ ಆರೋಪಿಯಾಗಿದ್ದ ರೌಡಿಶೀಟರ್ ಪಿಟ್ಟಿ ನಾಗೇಶ್ ಕೊಲೆ ಒಂದು ರಿವೆಂಜ್ ಕೊಲೆ ಆಗಿರಬಹುದೆಂದು ಶಂಕಿಸಲಾಗಿದ್ದು ಈ ನಿಟ್ಟಿನಲ್ಲಿ ಕಾಪು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

pitty nagesh
pitty nagesh
Vinod Shettigar
Vinod Shettigar

1 (4)

hitendra prasad
hitendra prasad

ಸೆ.11ರ ರಾತ್ರಿ ಕಾಪುವಿನ ಉದ್ಯಾವರ ಹಲೀಮಾ ಸಬ್ಜು ಸಭಾಭವನದ ಮುಂಭಾಗದ ರಾ.ಹೆ 66ರ ಪಕ್ಕ ಪಿಟ್ಟಿ ನಾಗೇಶನ ಮೃತದೇಹ ಪತ್ತೆಯಾಗಿದ್ದು, ಆತನ ಹೆಣದ ಪಕ್ಕದಲ್ಲೇ ಸಿಕ್ಕ ಮೊಬೈಲ್ ಫೋನ್ ಅದು ಪಿಟ್ಟಿಯದ್ದೇ ಮೃತದೇಹ ಎಂಬುವುದನ್ನು ಸಾದರಪಡಿಸಿದೆ. ಪೊಲೀಸರು ಕೊಲೆಗಟುಕರ ಬೆನ್ನುಬಿದ್ದಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ. ರಿವೆಂಜ್ ಹತ್ಯಾ ಯತ್ನ ನಡೆದಿತ್ತು: ಹಾಗೆ ನೋಡಿದರೆ ಪಿಟ್ಟಿ ನಾಗೇಶನಿಗೆ ರಿವೆಂಜ್ ತೀರಿಸಲು ಈ ಹಿಂದೆಯೂ ಆತನ ಕೊಎಗೆ ವಿಫಲಯತ್ನವೊಂದು ನಡೆದಿತ್ತು. ಅದು ಫೆ.11 2011ರ ರಾತ್ರಿ ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ಪಿಟ್ಟಿನಾಗೇಶನನ್ನು ಮರ್ಡರ್ ಮಾಡಲು ಬೈಲಕೆರೆಯ ರಾಘವೇಂದ್ರ ಕಾಂಚನ್ ಹಾಗೂ ತನ್ ಮೂವರು ಸಹಚರರೊಂದಿಗೆ ಪಿಟ್ಟಿಯನ್ನು ಅಟಕಾಯಿಸಿಕೊಂಡು ಹಲ್ಲೆ ನಡೆಸಿದ್ದರು. ಅಲ್ಲಿಂದ ಸ್ಥಬ್ದವಾಗಿದ್ದ ಗ್ಯಾಂಗ್ ಪಡೆ ಈಗ ಮತ್ತೊಂದು ಪ್ರಯತ್ನದಲ್ಲಿ ಪಿಟ್ಟಿಯನ್ನುಕೊಚ್ಚಿ ಪರಾರಿಯಾಗಿದ್ದಿರಬಹುದೆಂದು ಶಂಕಿಸಲಾಗಿದೆ. ಒಂದರ್ಥದಲ್ಲಿ ಪಿಟ್ಟಿಯದು ರಿವೆಂಜ್ ಹತ್ಯೆ ಎಂದು ಶಂಕಿಸಲಾಗಿದ್ದರೂ, ಇದನ್ನು ಬಲಪಡಿಸುವ ಯಾವುದೇ ಆಧಾರ ಪೊಲೀಸರಿಗೆ ಸಿಕ್ಕಿಲ್ಲ. ಯಾಕೆಂದರೆ ಪಿಟ್ಟಿಯನ್ನು ಕಾರಿನಿಂದ ಉಪಾಯವಾಗಿ ಕರೆದೊಯ್ದು ಕೊಲೆ ಮಾಡಿ ಎಸಗಿರುವ ಸಾಧ್ಯತೆಯೂ ಇದೆ. ಯಾಕೆಮದರೆ ಆತ ಸಂಚರಿಸುತ್ತಿದ್ದ ಕಾರ್ನಲ್ಲಿ ಯಾವುದೇ ರಕ್ತದ ಕಲೆಗಳು ಗೋಚರಿಸದೇ ಇರುವುದು ಇದನ್ನು ಪುಷ್ಠಿ ಒದಗಿಸುತ್ತದೆ. ಪಿಟ್ಟಿ ಇತ್ತೀಚೆಗೆ ತಾನು ಒಬ್ಬಂಟಿಯಾಗಿ ಸಂಚರಿಸುತ್ತಲೇ ಇರಲಿಲ್ಲ. ಪಿಟ್ಟಿ ತನ್ನ ಸಹಚರರೊಂದಿಗೆ ವಾಗ್ವಾದ ನಡೆಸಿ ಕೊನೆಗೆ ಆತನ ಸಹಚರರೇ ಜಗಳಕಾದು ಮಚ್ಚಿನಿಂದ ಕೊಚ್ಚಿರುವ ಸಾಧ್ಯತೆಯೂ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

By suddi9

Leave a Reply

Your email address will not be published. Required fields are marked *