ವಿದ್ಯಾಗಿರಿ: ಪ್ರತಿಯೊಬ್ಬರಲ್ಲೂ ವಿಭಿನ್ನ ರೀತಿಯ ಪ್ರತಿಭೆಗಳಿರುತ್ತವೆ. ಅದನ್ನು ಪ್ರದರ್ಶಿಸಲು ಆಸಕ್ತಿ ಮತ್ತು ಅವಕಾಶ ತುಂಬಾ ಮುಖ್ಯ. ಆಸಕ್ತಿ ಎನ್ನುವುದು ಸತತ ಪ್ರಯತ್ನದಿಂದ ಹುಟ್ಟಿಕೊಂಡರೇ, ಅವಕಾಶ ಕಲೆಗಾರನನ್ನು ಅರಸುತ್ತಾ ಬರುತ್ತದೆ ಎಂದು ಬೆಂಗಳೂರಿನ ಹಿರಿಯ ಶಿಲ್ಪಕರ್ಮಿ ಸೂರಾಲು ವೆಂಕಟರಮಣ ಭಟ್ ತಿಳಿಸಿದರು.

Shilpa virasat

ಆಳ್ವಾಸ್ ವಿರಾಸತ್ 2018ರ ಅಂಗವಾಗಿ ನಡೆಯುತ್ತಿರುವ `ಆಳ್ವಾಸ್ ಶಿಲ್ಪ ವಿರಾಸತ್’ನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕಾದರೆ ಶಿಲ್ಪಕಲೆಯು ಮುಖ್ಯವಾಗಿ ಅಗತ್ಯವಾಗಿದೆ. ಆದ್ದರಿಂದ ಇದಕ್ಕೆ ಯಾವತ್ತೂ ಬೇಡಿಕೆ ಕಡಿಮೆಯಾಗುವುದಿ¯್ಲ. ದೇವರು ದೇವಸ್ಥಾನಗಳಲ್ಲದೆ ಇನ್ನೂ ವಿಭಿನ್ನ ಶೈಲಿಯ ಶಿಲ್ಪಕಲೆಗಳಿವೆ. ಇದೆಲ್ಲವನ್ನೂ ಜನರಿಗೆ ಪರಿಚಯಿಸುವ ಪ್ರಯತ್ನವಾಗಬೇಕಿದೆ. ಶಿಲ್ಪಕಲೆ ಸಮರ್ಪಣಾ ಮನೋಭಾವ ಹಾಗೂ ನಿರಂತರ ಪರಿಶ್ರಮವನ್ನು ಬೇಡುವ ಕ್ಷೇತ್ರ. ಒಂದು ಶಿಲ್ಪವನ್ನು ಆರಂಭಿಸುವ ಮೊದಲು ಶಿಲ್ಪಿಯಲ್ಲೇ ದೃಢವಾದ ಆತ್ಮವಿಶ್ವಾಸ ಜೊತೆಗೆ ಸತತ ಪರಿಶ್ರಮವಿರಬೇಕು ಆಗ ಮಾತ್ರ ಶಿಲ್ಪಕ್ಕೆ ಒಂದು ಒಳ್ಳೆಯ ರೂಪ, ಬೆಲೆ ಬರಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟ್ರಿ ವಿವೇಕ್ ಆಳ್ವ ಕಲೆಗಾರನಿಗೆ ಅವಕಾಶಗಳು ತುಂಬಾ ಇದೆ. ಸ್ವಂತಿಕೆ ಮತ್ತು ಕ್ರಿಯಾಶೀಲತೆ ಬಳಸಿ ವಿಭಿನ್ನ ಶೈಲಿಯ ಹೊಸತನ ರೂಪಿಸಿದರೆ ಖಂಡಿತ ಈ ಕಲೆಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಶಿಲ್ಪವಿರಾಸತ್‍ನಲ್ಲಿ ಪಾಲ್ಗೊಳ್ಳಲು ಕರ್ನಾಟಕ ಮಾತ್ರವಲ್ಲದೇ ದೂರದ ಛತ್ತೀಸ್‍ಘರ್, ಕೇರಳದಿಂದಲೂ ಶಿಲ್ಪಿಗಳು ಬಂದಿರುವುದು ವಿಶೇಷ. ಒಟ್ಟು 31 ಶಿಲ್ಪಿಗಳು ಈ ಬಾರಿಯ ಶಿಲ್ಪವಿರಾಸತ್‍ನಲ್ಲಿ ಭಾಗವಹಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಶಿಲ್ಪ ವಿರಾಸತ್ ಸಲಹಾ ಸಮಿತಿ ಸದಸ್ಯರಾದ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ,ಪುರುಷೋತ್ತಮ ಆಡ್ವೆ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ದೀಕ್ಷಾ ಗೌಡ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *