ಮೂಡುಬಿದಿರೆ: ತುಳುನಾಡಿನ ಮತ್ತು ಎಲ್ಲಾ ರಾಜ್ಯ-ದೇಶದ ಮಹಿಳೆಯರು ಸಶಕ್ತರಾಗಿ ಬೆಳೆಯಲು ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳು ಸಹಕಾರಿಯಾಗಿದೆ. ಧೈರ್ಯ, ಮಾತುಗಾರಿಕೆ ಹಾಗೂ ಸ್ವ ಉದ್ಯೋಗಗಳನ್ನು ಮಾಡುವ ಶಕ್ತಿಯನ್ನು ಮಹಿಳೆಯರು ಸ್ವ-ಸಹಾಯ ಸಂಘಗಳಿಂದ ಪಡೆದುಕೊಂಡಿದ್ದಾರೆ ಎಂದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಕಳ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಲಾಡಿ ಮೂಡುಬಿದಿರೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಲಾಡಿ ಹಜಂಕಾಲಬೆಟ್ಟ ದೈವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

???????????????????????????????
ಈಗಾಗಲೇ ಲೋನ್ ಪಡೆದು ಮನೆ ನಿರ್ಮಾಣ, ಮದುವೆ, ಮೂಲಭೂತ ಸೌಕರ್ಯಗಳನ್ನು ತಾವೇ ಪಡೆದುಕೊಳ್ಳುವಷ್ಟರ ಮಟ್ಟಿಗೆ ಮಹಿಳೆಯರು ಉನ್ನತ ಮಟ್ಟದಲ್ಲಿ ಬೆಳೆದಿದ್ದಾರೆ. ಇದರ ಜೊತೆಗೆ ತಮ್ಮ ಮಕ್ಕಳನ್ನು ಪ್ರೀತಿಯಿಂದ ಸಾಕುವ ಹೆತ್ತವರು ಮಕ್ಕಳಿಗೆ ಬದುಕಿನ ಉತ್ತಮ ಸಂಸ್ಕಾರವನ್ನು ತಿಳಿಸಿಕೊಡುವಂತಹ ಕೆಲಸವನ್ನು ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಲಾಡಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಪಾಶ್ರ್ವನಾಥ ಬಲ್ಲಾಳ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಪತ್ರಕರ್ತ ಕಾರ್ಕಳದ ಶ್ರೀಕಾಂತ್ ಶೆಟ್ಟಿ ಮಾತನಾಡಿ, ತುಳುನಾಡಿನ ಆಚರಣೆ ಹಾಗೂ ಆರಾಧನ ಪದ್ಧತಿಯೇ ವಿಶೇಷ. ಮನುಷ್ಯ ಜಗತ್ತಿನಲ್ಲಿ ಧರ್ಮದಲ್ಲಿ ಹೇಗೆ ಬದುಕಬೇಕು, ಧರ್ಮದಲ್ಲಿರುವ ರೀತಿ ನೀತಿಗಳೇನು ಎಂಬುದನ್ನು ತಿಳಿಸಿಕೊಟ್ಟ ಧರ್ಮವಿದ್ದರೆ ಜನಾಂಗವಿದ್ದರೆ ಅದು ಸನಾತನ ಹಿಂದೂ ಧರ್ಮ. ನಾವು ಯಾವ ಧರ್ಮದ ಮೇಲೆಯೂ ದಾಳಿ ಮಾಡಿಲ್ಲ ಅಥವಾ ಮತಾಂತರ ಮಾಡಿಲ್ಲ. ಆದರೆ ಈ ಧರ್ಮದ ಮೇಲೆ ಸಾವಿರಾರು ದಾಳಿಗಳು ನಡೆದಿದೆ. ದಾಳಿ ನಡೆದಿದ್ದರೂ ಈ ಧರ್ಮವು ಹೇಗೆ ಉಳಿದಿದೆಯೆಂದರೆ ಅದು ನಮ್ಮ ಒಳ್ಳೆಯತನ ಮತ್ತು ಸನ್ನಡತಡಯಿಂದ ಉಳಿದಿದೆ. ತುಳುನಾಡಿನ ಶಕ್ತಿಯನ್ನು ಉಳಿಸುವಂತಹ ಕೆಲಸವನ್ನು ಹೆಗ್ಡೆಯವವರು ಸ್ವಸಹಾಯ ಸಂಘಗಳ ಮೂಲಕ ಮಾಡುತ್ತಿದ್ದು ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ತುಳುನಾಡಿಗೆ ಅಪಾರವಾಗಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಅವರ ಸೂಚನೆಯಂತೆ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಯೋಜನೆಯ ಪರವಾಗಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ, ಕಾರ್ಕಳ ತಾಲೂಕು ಯೋಜನಾಧಿಕಾರಿ ಕೃಷ್ಣ ಟಿ., ಪ್ರ.ಬಂ.ಸ್ವ.ಸಹಾಯ ಸಂಘಗಳ ಒಕ್ಕೂಟದ ಮೂಡುಬಿದಿರೆ ವಲಯಾಧ್ಯಕ್ಷ ಸತೀಶ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯೋಜನೆಯ ಮೂಡುಬಿದಿರೆ ಒಕ್ಕೂಟದ ಅಧ್ಯಕ್ಷ ಸೋಮನಾಥ ಪೂಜಾರಿ, ಸಮಿತಿಯ ಗೌರವ ಸಲಹೆಗಾರ ಈಶ್ವರ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸೇವಾ ಪ್ರತಿನಿಧಿ ಅನಿತಾ ಬಲ್ಲಾಳ್ ಸ್ವಾಗತಿಸಿದರು. ಅಶೋಕ್ ವರದಿ ವಾಚಿಸಿದರು. ಮೂಡುಬಿದಿರೆ ವಲಯದ ಮೇಲ್ವೀಚಾರಕಿ ಗೀತಾ ಅವರು ಕಾರ್ಯಕ್ರಮ ನಿರೂಪಿಸಿದರು ಅರುಣ್ ಶೆಟ್ಟಿ ವಂದಿಸಿದರು.
ಬಳಿಕ ಸಭಾ ಕಾರ್ಯಕ್ರಮದ ನಂತರ ಸ್ವಸಹಾಯ ಸಂಘಗಳ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.

By suddi9

Leave a Reply

Your email address will not be published. Required fields are marked *