ಬಂಟ್ವಾಳ : ಅಗ್ರಾರ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ಹೋಲಿಸೇವಿಯರ್ ಸಭಾಂಗಣ ದ ಉದ್ಘಾಟನಾ ಸಮಾರಂಭವನ್ನು ಅಗ್ರಾರ್ ಚರ್ಚ್ ವಠಾರದಲ್ಲಿ ವಿಶ್ರಾಂತ ಬಿಷಪ್ ರಾದ ಅತಿವಂದನೀಯ ರೆ/ಡಾ/ಅಲೋಶಿಯಸ್ ಪಾವ್ಲ್ ಡಿಸೋಜ ರವರು ನೆರವೇರಿಸಿದರು.
ಅವರು ಸಭಾಂಗಣ ಶುದ್ದೀಕರಣಗೊಳಿಸಿ ದೇವರ ಆಶೀರ್ವಾದಗಳು ಭಕ್ತಾದಿಗಳಿಗೆ ದೊರೆಯಲಿ ಎಂದು ಹರಸಿ ಸಭಾಂಗಣವು ಎಲ್ಲಾ ಕ್ಷೇತ್ರದವರಿಗೂ ಎಲ್ಲಾ ಧರ್ಮದವರಿಗೂ ಉಪಯುಕ್ತ ವಾಗಲೆಂದು ಹಾರೈಸಿದರು.

KAR_6500
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ನೆರವೇರಿಸಿ ಅತೀ ಕಡಿಮೆ ಸಮಯದ ಅವಧಿಯಲ್ಲಿ ನಿರ್ಮಾಣಗೊಂಡ ಸಭಾಂಗಣ ದ ಕೆಲಸಕಾರ್ಯಗಳನ್ನು ಶ್ಲಾಘಿಸಿದರು.
ಸಭಾಂಗಣದ ಕೆಲಸದಲ್ಲಿ ವಿವಿಧ ಗುತ್ತಿಗೆ ನಿರ್ವಹಿಸಿದವರಿಗೆ ಸನ್ಮಾನಿಸಿದ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಮಾತನಾಡಿ ಹಲವಾರು ಅಡಚಣೆಗಳಿದ್ದರೂ ದೈವಾನುಗ್ರಹದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹಾಗೂ ಶಾಸಕನಾಗಿ ಪ್ರಥಮ ವಾಗಿ ಇಲ್ಲಿ ಬರಲು ಸಾಧ್ಯವಾಯಿತು.

KAR_6504ಶಾಂತಿ ಮತ್ತು ಅನ್ಯೋನ್ಯತೆ ಇದ್ದರೆ ಪ್ರಗತಿ ಸಾಧಿಸಲು ಸಾಧ್ಯ ಎಂದು ನುಡಿದರು.
ವೇದಿಕೆಯಲ್ಲಿ ಮಂಗಳೂರಿನ ಎಸ್‍ಆರ್‍ಎ ಪ್ರೊವಿನ್ಸಿಯಲ್ ಸುಪೀರಿಯರ್ ವಂದನೀಯ ಭಗಿನಿ ಝೀನಾ ಡಿಸೋಜ , ಪುರಸಭಾ ಸದಸ್ಯ ಗಂಗಾಧರ ಪೂಜಾರಿ, ಕೋ-ಓರ್ಡಿನೇಟರ್ ಫೆಡ್ರಿಕ್ ಡಿಸೋಜ ಉಪಸ್ಥಿತರಿದ್ದರು. ಪಾಲನಾ ಮಂಡಳಿ ಉಪಾಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಪ್ರಸ್ತಾವನೆಗೈದರು. ಧರ್ಮಗುರು ರೆ.ಫಾ.ಗ್ರೆಗರಿ ಡಿಸೋಜ ಸ್ವಾಗತಿಸಿದರು. ಪಾಲನಾ ಮಂಡಳಿ ಕಾರ್ಯದರ್ಶಿ ವಿನ್ಸೆಂಟ್ ಕಾರ್ಲೋ ವಂದಿಸಿದರು. ಇಗ್ನೇóಷಿಯಸ್ ಡಿಸೋಜ ಮತ್ತು ಆಡ್ರಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

KAR_6507

By suddi9

Leave a Reply

Your email address will not be published. Required fields are marked *