ಬಂಟ್ವಾಳ | ಆಂಗ್ಲ ಭಾಷಾ ವಿಷಯದ ಪರಿಜ್ಞಾನ ಸ್ಪರ್ಧಾತ್ಮಕ ಯುಗದಲ್ಲಿ ಆಗತ್ಯವಾಗಿ ಇರಬೇಕು ಎಂದು ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಉಪನ್ಯಾಸಕಿ ಶ್ರೀ ದೇವಿ ಹೇಳಿದರು.ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜು ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಿಶೇಷ ಉಚಿತ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

3M4A9070

ಇಂಗ್ಲೀಷ್ ವ್ಯವಹಾರ ಭಾಷೆ. ಪ್ರತಿ ಭಾಷೆಗೂ ಆದರದೇ ಆದ ಮಹತ್ವ ಮತ್ತು ಮೌಲ್ಯಗಳಿವೆ. ಮಾತೃಭಾಷೆ ಜತೆ ವಿದ್ಯಾರ್ಥಿ ಆಂಗ್ಲಭಾಷೆ ಓದುವ, ಆಲಿಸುವ ಹವ್ಯಾಸ ಬೆಳೆಸಿಕೊಂಡಾಗ ಭಾಷಾ ಜ್ವಾನಭಂಡಾರ ಮತ್ತು ವ್ಯಾಕರಣಬದ್ಧತೆ ಪ್ರಗತಿಯಾಗುತ್ತದೆ. ಸ್ವಆಸಕ್ತಿಯಿಂದ ಯಾವುದೇ ಹಿಂಜರಿಕೆ ಇಲ್ಲದೇ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆಧುನಿಕ ಯುಗದಲ್ಲಿ ಉದ್ಯೋಗ ಮತ್ತು ಸಂಪತ್ತನ್ನು ಗಳಿಸಬೇಕಾದರೆ ಭಾಷೆಯ ಅರಿವು ಅಗತ್ಯ ಎಂದರು.
ಎಸ್.ವಿ.ಎಸ್. ಪ. ಪೂ. ಕಾಲೇಜು ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿದರು.
ಆಂಗ್ಲ ಭಾಷಾ ಉಪನ್ಯಾಸಕಿ ಅಶ್ವಿತಾ ಕೆ. ಸ್ವಾಗತಿಸಿ, ವಂದನೆಗೈದರು. ದ್ವಿತೀಯ ಬಿಎ ವಿದ್ಯಾರ್ಥಿನಿ ರೆನಿಶಾ ಕಾರ್ಡೋಜಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *