ಮೂಡುಬಿದಿರೆ: ಹಂಡೇಲು ದೇವಸ ಶ್ರೀ ವ್ಯಾಘ್ರ ಚಾಮುಂಡಿ, ಶ್ರೀಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವರ್ಷಾವಧಿ ಉತ್ಸವ ನಡೆಯಿತು.

Handelu Devasa Nemostava (1)
ಕಲ್ಲಮುಂಡ್ಕೂರು ಕಳಸಬೈಲು ಮಂಜುಶ್ರೀ ಮಹಮ್ಮಾಯಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಮೈಸಂದಾಯ ನೇಮ, ವ್ಯಾಘ್ರಚಾಮುಂಡಿ ಮತ್ತು ಬೈದರ್ಕಳ ನೇಮ, ಮಾಯಂದಲ ನೇಮ ನಡೆಯಿತು.

Handelu Devasa Nemostava (3)
ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಎಚ್.ಧನಕೀರ್ತಿ ಬಲಿಪ, ಉಪಾಧ್ಯಕ್ಷರಾದ ಮಹೇಂದ್ರ ಬಲ್ಲಾಳ್, ಯಜ್ಞ ಪಂಡಿತ್, ಕಾರ್ಯದರ್ಶಿ ಶ್ರೀಧರ ಕೆ., ಜತೆ ಕಾರ್ಯದರ್ಶಿ ಅಚ್ಚುತ ಅಂಚನ್, ಗಿರೀಶ್ ಕುಮಾರ್, ವಸಂತ ಶೆಟ್ಟಿ, ಕೋಶಾಧಿಕಾರಿ ಅಣ್ಣಿ ಪೂಜಾರಿ ಸಹಿತ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Handelu Devasa Nemostava (2)
ಗರೋಡಿ ಫ್ರೆಂಡ್ಸ್ ಹಂಡೇಲು ಇದರ ಸದಸ್ಯರು ಸ್ವಯಂಸೇವಕರಾಗಿ ಸಹಕರಿಸಿದರು.

By suddi9

Leave a Reply

Your email address will not be published. Required fields are marked *