ಮೂಡುಬಿದಿರೆ: ಮೂಡುವೇಣುಪರ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಬುಧವಾರ ಮುಂಜಾನೆ ಏಕಾಹ ಭಜನೆ ಹಮ್ಮಿಕೊಳ್ಳಲಾಗಿತ್ತು. ವಿವಿಧ ಭಜನ ಮಂಡಳಿಗಳು ಭಜನೆ ಸಂಕೀರ್ತನೆ ನಡೆಸಿದೆ.

Ekaha Bhajana @ SVT

ಸಂಕೀರ್ತನಾ ಭಜನಾ ಮಂಡಳಿ, ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿ, ಭಜಕ ವೃಂದ, ವೈದಿಕ ವೃಂದದ ಸದಸ್ಯರು ಭಜನೆ ಹಾಡಿದರು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಮೊಕ್ತೇಸರರಾದ ರಾಮನಾಥ ಭಟ್, ಟಿ.ರಘುವೀರ್ ಶೆಣೈ, ಭಜನಾಮಂಡಳಿಯ ಅಧ್ಯಕ್ಷ ಎಂ.ನಾಗೇಂದ್ರ ಭಟ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *