ಮಂಗಳೂರು : ಠೇವಣಿ ಇಡುವ ಹಣಕ್ಕೆ ಅಧಿಕ ಬಡ್ಡಿ ನೀಡುವ ಆಮಿಷ ನೀಡಿ ಗ್ರಾಹಕರಿಂದ ಹಣ ಸಂಗ್ರಹಿಸಿ ಬಳಿಕ ಅದನ್ನು ಮರುಪಾವತಿ ಮಾಡದೆ ವೃಕ್ಷ ಬಿಸ್ನೆಸ್ ಸೊಲ್ಯೂಷನ್ (ಇಂಡಿಯಾ) ಲಿಮಿಟೆಡ್ ಸಂಸ್ಥೆಯು ವಂಚನೆ ಮಾಡುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಈ ಆರೋಪ ಮಾಡಿರುವ ವೃಕ್ಷ ಗ್ರಾಹಕರ ಏಜೆಂಟರು, ಗ್ರಾಹಕ ರಿಂದ ಕೋಟ್ಯಂತರ ಹಣ ಸಂಗ್ರಹಿಸಿ ರುವÀ ಕಂಪೆನಿಯ ಪಾಲುದಾರರು ಇದೀಗ ನಾಪತ್ತೆಯಾಗಿದ್ದಾರೆ ಎಂದು ಗ್ರಾಹಕರು ಮತ್ತು ಏಜೆಂಟರು ಆರೋಪಿಸಿದ್ದಾರೆ.

ಅಧಿಕ ಬಡ್ಡಿ ನೀಡುವ ಆಮಿಷ ದಿಂದ ಗ್ರಾಹಕರಿಂದ ಹಣ ಸಂಗ್ರಹಿಸಿ ವೃಕ್ಷಕ್ಕೆ ನೀಡಿದ್ದು, ಕಳೆದ ಒಂದು ವರ್ಷದಿಂದ ಈ ಹಣವನ್ನು ಮರು ಸಂದಾಯ ಮಾಡುವಂತೆ ಕೇಳಿದರೂ ಕಂಪನಿ ವಂಚಿಸಿದೆ. ಇದರಿಂದ ಗ್ರಾಹಕ ರಿಂದ ಅಶ್ಲೀಲ ನಿಂದನೆ ಕೇಳಬೇಕಾ ಗಿದೆ. ವೃಕ್ಷ ಕಂಪನಿ ಕಳೆದ ಒಂದು ವರ್ಷದಿಂದ ಹಣ ಸಂದಾಯ ಮಾಡುವ ಭರವಸೆ ನೀಡುತ್ತಲೇ ಬಂದಿದೆ. ಆದರೆ ಈವರೆಗೆ ಹಣ ಸಂದಾಯ ಮಾಡದ ಕಾರಣ ಈಗಾಗಲೇ 71 ಗ್ರಾಹಕರನ್ನು ಒಟ್ಟು ಸೇರಿಸಿ ತುಳುನಾಡ ರಕ್ಷಣಾ ವೇದಿಕೆಯ ನೆರವಿನೊಂದಿಗೆ ಆಯುಕ್ತ ರನ್ನು ಭೇಟಿ ನೀಡಿ ದೂರು ನೀಡ ಲಾಗಿದೆ ಎಂದು ಏಜೆಂಟರಾದ ಗೀತಾನಂದ ಶೆಟ್ಟಿ ದೂರಿದರು.
ಸಂಸ್ಥೆಯ ಜೀವರಾಜ್ ಪುರಾಣಿಕ್, ರೋಶನ್ ಡಿ’ಸೋಜಾ, ವೇಣುಗೋಪಾಲ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಈ ನಡುವೆ, ವೃಕ್ಷ ಕಂಪನಿಯ 7 ಕೋಟಿ ರೂ. ಮೌಲ್ಯದ ಜಾಗವನ್ನು 4.60 ಕೋಟಿ ರೂ.ಗಳಿಗೆ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ದೊರಕಿದೆ. ಇದನ್ನು ತಿಳಿದು ಗ್ರಾಹಕರು ಹಾಗೂ ಏಜೆಂಟರು ನೋಂದಣಿ ಪ್ರಕ್ರಿಯೆ ತಡೆ ಯಲು ಪ್ರಯತ್ನಿಸಿದ್ದರೂ, ರಾಜಕೀಯ ಪ್ರಭಾವ ಬಳಸಿ ವೃಕ್ಷ ಕಂಪನಿಯ ಆಡಳಿತ ಮುಖ್ಯಸ್ಥರು ನೋಂದಣಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಡುವೆ ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಪಾಲುದಾರರನ್ನು ಬಂಧಿಸಲು ಒತ್ತಾಯಿಸಲಾದ ಹಿನ್ನೆಲೆಯಲ್ಲಿ ಆರೋಪಿಗಳು ಹಾಜರಾಗಿ ಗ್ರಾಹಕರೆಲ್ಲ ರಿಗೂ ಹಣ ಪಾವತಿಸುವ ಭರವಸೆ ನೀಡಿದ್ದರು. ಆದರೆ ಕೆಲವರಿಗೆ ಮಾತ್ರ ಅಲ್ಪಸ್ವಲ್ಪ ಹಣ ನೀಡಿ ಕೆಲವರಿಗೆ ವಂಚಿಸಿ ದ್ದಾರೆ. ಗ್ರಾಹಕರಿಗೆ 10 ಕೋಟಿ ರೂ.ಗಳಿಗೂ ಅಧಿಕ ವಂಚಿಸಲಾಗಿದೆ ಎಂದು ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಆರೋಪಿಸಿದರು.
ಗ್ರಾಹಕರು ಹಾಗೂ ಏಜೆಂಟರು ಪ್ರಸ್ತುತ ಸಾಮೂಹಿಕ ಆತ್ಮಹತ್ಯೆ ಮಾಡುವ ಸಂದಿಗ್ಧ ಪರಿಸ್ಥಿತಿಯಲ್ಲಿರು ವುದರಿಂದ ಸಂಸ್ಥೆಯ ಮುಖ್ಯಸ್ಥರನ್ನು ಬಂಧಿಸಿ ಅವ್ಯಹಾರ ತನಿಖೆ ನಡೆಸಬೇಕೆಂದು ಗೃಹಸಚಿವರು ಹಾಗೂ ಮುಖ್ಯಮಂತ್ರಿ ಯನ್ನು ಅವರು ಒತ್ತಾಯಿಸಿದರು. ಕ್ರಮ ಕೈಗೊಳ್ಳದಿದ್ದರೆ ಸೆ. 25ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
